ಅರಣ್ಯ ಇಲಾಖೆಯ ಸಮಿತಿ ರೂಪಿಸಿದ ನೀತಿ ಮಹತ್ತರ ಬದಲಾವಣೆ ತರಲಿದೆ. ವನ್ಯಜೀವಿಗಳ ಕಾರಿಡಾರ್ ಅವುಗಳ ಜೀವನಾಡಿಯಾಗಿದೆ. ಈ ಪ್ರದೇಶಗಳು ಅರಣ್ಯ, ಕಂದಾಯ , ಕೃಷಿ ಮತ್ತು ಖಾಸಗಿ ಭೂಮಿಯಲ್ಲಿ ಹಂಚಿಹೋಗಿವೆ. ವನ್ಯಜೀವಿಗಳು ಆಹಾರ, ನೀರು ಅರಸಿ ಹೋಗುವುದು, ಸಹ ಜೀವಿಗಳ ಜೊತೆಗೂಡುವುದು, ಸುರಕ್ಷಿತ ಆವಾಸ ಸ್ಥಾನಕ್ಕಾಗಿ ಇಲ್ಲಿ ತಿರುಗಾಡಬೇಕಾಗುತ್ತದೆ. ಇದು ಪರಿಸರ ವಿಜ್ಞಾನದ ಸಹಜ ಪ್ರಕ್ರಿಯೆ. ವನ್ಯಜೀವಿ ರಕ್ಷಣೆಗಾಗಿ ಕಾರಿಡಾರ್‌ಗಳ ಸ್ಥಳವನ್ನು ರಕ್ಷಿಸುವುದು ಅತ್ಯಂತ ಮುಖ್ಯ ಎಂದರು.