- ಕಳ್ಳಭಟ್ಟಿ ಅಡ್ಡೆಯ ಮೇಲೆ ದಾಳಿ
- ರಾಯಬಾಗ ತಾಲೂಕಿನ ಮೊರಬದಲ್ಲಿ ಘಟನೆ
- ಮಾರಾಟ ಮಾಡಲು ತಯಾರಿಸಿದ್ದ ಕಳ್ಳಭಟ್ಟಿ ವಶ
- ಕುಡಚಿ ಠಾಣೆಯಲ್ಲಿ ಪ್ರಕರಣ ದಾಖಲು
ಅಕ್ರಮ ಕಳ್ಳಭಟ್ಟಿ ಸಂಗ್ರಹಿಸಿದ್ದ ಮನೆಯ ಮೇಲೆ ಪೊಲೀಸರ ದಾಳಿ
ಚಿಕ್ಕೋಡಿ : ರಾಯಬಾಗ ತಾಲೂಕಿನ ಮೊರಬ ಗ್ರಾಮದಲ್ಲಿ ಅಕ್ರಮವಾಗಿ ಕಳ್ಳಭಟ್ಟಿ ಸಾರಾಯಿ ತಯಾರು ಮಾಡಿ ಮಾರಾಟ ಮಾಡುತ್ತಿದ್ದ ಮನೆಯ ಮೇಲೆ ಪೊಲೀಸ್‌ರು ಬುಧವಾರ ದಾಳಿ ನಡೆಸಿ ಕಳ್ಳಭಟ್ಟಿ ಸಾರಾಯಿ ತಯಾರು ಮಾಡುವ ಕೊಳೆ 1790 ಲೀಟರ್ 10 ಲೀಟರ್ ಕಳ್ಳಭಟ್ಟಿ ಸಾರಾಯಿ ವಶಕ್ಕೆ ಪಡೆದಿದ್ದಾರೆ.
ದಾಳಿ ವೇಳೆ ಕಳ್ಳಭಟ್ಟಿ ತುಂಬಿಸಲಾಗಿದ್ದ ಅಪಾರ ಪ್ರಮಾಣದ ಬ್ಯಾರೆಲ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಬಂಧಿತ ಆರೋಪಿಗಳ ಪೈಕಿ ಓರ್ವನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು,ಇಬ್ಬರು ಪರಾರಿಯಾಗಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡ ಕುಡಚಿ ಠಾಣೆ ಪೊಲೀಸರು ತಿಳಿಸಿದ್ದಾರೆ.