ಮಾಧ್ಯಮದವರಿಗೆ ಪ್ರತ್ಯೇಕ ಕೌಂಟರ್ ಮಾಡಿದ್ದರೂ ಅಲ್ಲಿಂದ ವೇದಿಕೆ 50 ಫೀಟ್ ದೂರವಿದೆ. ಇದರಿಂದ ಫೋಟೋ, ವಿಡಿಯೋ ತೆಗೆದುಕೊಳ್ಳಲು ಪತ್ರಕರ್ತರು ತೀವ್ರ ಸಮಸ್ಯೆ ಎದುರಿಸಿದರು. ವಾರ್ತಾ ಇಲಾಖೆ ಸಿಬ್ಬಂದಿ, ಫೋಟೋ, ವಿಡಿಯೋ ಮಾಡಲು ಜಿಲ್ಲಾಡಳಿತ ಗುರುತಿಸಿದ ಖಾಸಗಿ ಕ್ಯಾಮರಾಮನ್‌ಗಳಿಗೆ ಮಾತ್ರ ಪ್ರವೇಶ ನೀಡಲಾಗಿತ್ತು.