ಶವಸಂಸ್ಕಾರಕ್ಕೆ ಮನವೊಲಿಸಿದ ಪೊಲೀಸರು

Police convinced to cremate
Police convinced to cremate
Published on
ಚಿಂತಾಮಣಿ: ತಾಲೂಕಿನ ಆಲಪ್ಪಲ್ಲಿ ಗ್ರಾಮದ ದೇವಾಲಯದ ಬಳಿ ಅನುಮಾನಸ್ಪದವಾಗಿ ಮೃತಪಟ್ಟಿದ್ದ ಯಗವಕೋಟೆ ಗ್ರಾಪಂ ವ್ಯಾಪ್ತಿಯ ಕೊಂಡವೆನಕಪಲ್ಲಿಯ ನರಸಿಂಹ (35) ಅವರ ಅಂತ್ಯಸಂಸ್ಕಾರವನ್ನು ಪೊಲೀಸರು ಭರವಸೆ ಮೇರೆಗೆ ಮಂಗಳವಾರ ರಾತ್ರಿ ಅಂತ್ಯಸಂಸ್ಕಾರ ಮಾಡಲಾಯಿತು.
ನರಸಿಂಹ ಮೂಗಲಮರಿಯಲ್ಲಿ ಮದುವೆಯಾಗಿದ್ದ. ಆದರೆ, ಪತ್ನಿ ಗಂಡನನ್ನು ಬಿಟ್ಟು ದೂರವಾಗಿದ್ದಳು ಎನ್ನಲಾಗಿದೆ, ಮೂಗಲಮರಿ ಸಮೀಪ ಆಲಪಲ್ಲಿ ದೇವಾಲಯಕ್ಕೆ ಸೋಮವಾರ ಬೆಳಗ್ಗೆ ಹೋಗಿದ್ದ ನರಸಿಂಹ ವಾಪಸ್​ ಬಂದಿರಲಿಲ್ಲ. ತಾಯಿ ಮತ್ತು ತಂಗಿಯರು ಎಲ್ಲ ಕಡೆ ಹುಡುಕಾಡಿದರು ಪತ್ತೆಯಾಗಿರಲಿಲ್ಲ. ಆಲಪಲ್ಲಿ ದೇವಾಲಯದ ಬಳಿ ನರಸಿಂಹ ಶವವಾಗಿ ಪತ್ತೆಯಾಗಿದ್ದ.
ಆತನ ಪತ್ನಿ ಮತ್ತು ಅವರ ಕುಟುಂಬದವರು ಕೊಲೆ ಮಾಡಿದ್ದಾರೆಂದು ಮೃತನ ತಾಯಿ ದೂರು ನೀಡಿದ್ದರು. ನಂತರ ಪೊಲೀಸರು ಶವವನ್ನು ಮರಣೋತ್ತರ ಪರೀೆಗೆ ಒಳಪಡಿಸಿ ವಾರಸುದಾರರಿಗೆ ಒಪ್ಪಿಸಿದ್ದರು.
ಶವವನ್ನು ಗ್ರಾಮಕ್ಕೆ ತೆಗೆದುಕೊಂಡ ಹೋದ ಗ್ರಾಮಸ್ಥರು, ಕುಟುಂಬಸ್ಥರು, ಮೃತನ ಪತ್ನಿಯನ್ನು ಬಂಧಿಸುವರೆಗೂ ಶವಸಂಸ್ಕಾರ ಮಾಡುವುದಿಲ್ಲ ಎಂದು ಪಟ್ಟು ಹಿಡಿದರು. ಕಡೆಗೆ ಬಟ್ಲಹಳ್ಳಿ ಠಾಣೆಯ ಪೊಲೀಸರು ಮನವೊಲಿಸಿ ಕಾನೂನು ಕ್ರಮ ಕೈಗೊಳ್ಳವ ಭರವಸೆ ನೀಡಿದ ನಂತರ ಅಂತ್ಯಸಂಸ್ಕಾರ ನೆರವೇರಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net