ಮಾಧ್ಯಮ ಅಕಾಡೆಮಿಯಿಂದ ಪೊಕೊಸ್ ಆನ್ ನ್ಯೂಸ್-2.0 2 ದಿನ ರಾಷ್ಟ್ರಮಟ್ಟದ ಸುದ್ದಿ ಛಾಯಾಚಿತ್ರ ಪ್ರದರ್ಶನ ಮತ್ತು ಸ್ಪರ್ಧೆ
media academy
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ರಾಷ್ಟ್ರಮಟ್ಟದ ಸುದ್ದಿ ಛಾಯಾಚಿತ್ರ ಸ್ಪರ್ಧೆ, ಅತ್ಯುತ್ತಮ ಛಾಯಾಚಿತ್ರಗಳ ಪ್ರದರ್ಶನ, ಹಿರಿಯ ಛಾಯಾಚಿತ್ರ ಪತ್ರಕರ್ತರೊಂದಿಗೆ ಸಂವಾದ
ಅಪರೂಪದ ವಿಂಟೇಜ್ ಹಾಗೂ ಆಧುನಿಕ ಕ್ಯಾಮೆರಾಗಳ ಪ್ರದರ್ಶನ, ಖ್ಯಾತ ಛಾಯಾಗ್ರಾಹಕರೊಂದಿಗೆ ನೇರ ಸಂವಾದ, ಫೋಕಸ್ ಆನ್ ನ್ಯೂಸ್ ಪೋಟೋ ಜರ್ನಲಿಸಂ
ಬೆಂಗಳೂರು:
ಸುದ್ದಿ ಛಾಯಾಚಿತ್ರ ಪತ್ರಿಕೋದ್ಯಮದ ಶಕ್ತಿ, ಸೃಜನಶೀಲತೆ ಹಾಗೂ ವೃತ್ತಿಪರತೆಯನ್ನು ಅನಾವರಣಗೊಳಿಸುವ ಉದ್ದೇಶದಿಂದ ಕರ್ನಾಟಕ ಮಾಧ್ಯಮ ಅಕಾಡೆಮಿ ಫೋಕಸ್ ಆನ್ ನ್ಯೂಸ್-2.0 ರಾಷ್ಟ್ರಮಟ್ಟದ ಸುದ್ದಿ ಛಾಯಾಚಿತ್ರ ಪ್ರದರ್ಶನ ಮತ್ತು ಸ್ಪರ್ಧೆಯನ್ನು ಆಯೋಜಿಸಿದೆ.
ಆ.3 ಮತ್ತು 4ರಂದು ಬೆಂಗಳೂರಿನ ಚಿತ್ರಕಲಾ ಪರಿಷತ್‌ನಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ದೇಶದ ವಿವಿಧ ಭಾಗಗಳ ಫೋಟೋ ಜರ್ನಲಿಸ್ಟ್‌ಗಳು, ಹಿರಿಯ ಪತ್ರಕರ್ತರು, ಛಾಯಾಗ್ರಾಹಕರು ಹಾಗೂ ಪತ್ರಿಕೋದ್ಯಮ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ರಾಷ್ಟ್ರಮಟ್ಟದ ಸುದ್ದಿ ಛಾಯಾಚಿತ್ರ ಸ್ಪರ್ಧೆ, ಅತ್ಯುತ್ತಮ ಛಾಯಾಚಿತ್ರಗಳ ಪ್ರದರ್ಶನ, ಹಿರಿಯ ಛಾಯಾಚಿತ್ರ ಪತ್ರಕರ್ತರೊಂದಿಗೆ ಸಂವಾದ, ಪ್ರಮುಖ ಕ್ಯಾಮೆರಾ ಸಂಸ್ಥೆಗಳ ತಾಂತ್ರಿಕ ಕಾರ್ಯಾಗಾರಗಳು ಹಾಗೂ ಪ್ರಾಯೋಗಿಕ ತರಬೇತಿ ಶಿಬಿರಗಳು ನಡೆಯಲಿವೆ.
ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ವಿಜೇತರಿಗೆ ಮೊದಲ, ಎರಡನೇ ಹಾಗೂ ಮೂರನೇ ಬಹುಮಾನವಾಗಿ ಕ್ರಮವಾಗಿ ₹35,000, ₹25,000 ಮತ್ತು ₹15,000 ನಗದು ಬಹುಮಾನ ನೀಡಲಾಗುತ್ತದೆ.
ಇದರೊಂದಿಗೆ 2025ರ ಕರ್ನಾಟಕ ರಾಜ್ಯ ಛಾಯಾಚಿತ್ರ ಪ್ರದರ್ಶನದಿಂದ ಆಯ್ಕೆಯಾದ ಅತ್ಯುತ್ತಮ ಚಿತ್ರಗಳ ವಿಶೇಷ ಗ್ಯಾಲರಿ, ಅಪರೂಪದ ವಿಂಟೇಜ್ ಹಾಗೂ ಆಧುನಿಕ ಕ್ಯಾಮೆರಾಗಳ ಪ್ರದರ್ಶನ, ಖ್ಯಾತ ಛಾಯಾಗ್ರಾಹಕರೊಂದಿಗೆ ನೇರ ಸಂವಾದ, ಫೋಕಸ್ ಆನ್ ನ್ಯೂಸ್ ಪೋಟೋ ಜರ್ನಲಿಸಂ: ರೀಡಿೈನಿಂಗ್ ಎವ್ವೆರಿ ಶಾಟ್ ಎಂಬ ವಿಷಯದ ಪ್ಯಾನಲ್ ಚರ್ಚೆ ಹಾಗೂ ಸಂದರ್ಶಕರಿಗಾಗಿ ವಿಶೇಷ ಸೆಲ್ಫಿ ಪಾಯಿಂಟ್ ವ್ಯವಸ್ಥೆ ಮಾಡಲಾಗಿದೆ.
ವಿಶೇಷ ತಾಂತ್ರಿಕ ಕಾರ್ಯಾಗಾರಗಳು ಹಾಗೂ ಪ್ರಾಯೋಗಿಕ ತರಬೇತಿ ಅವಧಿಗಳು ಸಂಪೂರ್ಣ ಉಚಿತವಾಗಿದ್ದು, ವೃತ್ತಿಪರ ಛಾಯಾಗ್ರಾಹಕರು, ಪತ್ರಿಕೋದ್ಯಮ ವಿದ್ಯಾರ್ಥಿಗಳು ಹಾಗೂ ಆಸಕ್ತ ಸಾರ್ವಜನಿಕರು ಭಾಗವಹಿಸಬಹುದು ಎಂದು ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಶಾ ಖಾನಂ ತಿಳಿಸಿದ್ದಾರೆ.
ಕಾರ್ಯಾಗಾರದಲ್ಲಿ ಭಾಗವಹಿಸಲು ಆಸಕ್ತರು ಗೂಗಲ್ ಫಾರ್ಮ ಮೂಲಕ ಮುಂಗಡ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಕಾರ್ಯಕ್ರಮದ ಕುರಿತು ಹೆಚ್ಚಿನ ಮಾಹಿತಿಯನ್ನು ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಲಾಗುವುದು.
*ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ವಿಜೇತರಿಗೆ ಮೊದಲ, ಎರಡನೇ ಹಾಗೂ ಮೂರನೇ ಬಹುಮಾನವಾಗಿ ಕ್ರಮವಾಗಿ ₹35,000, ₹25,000 ಮತ್ತು ₹15,000 ನಗದು ಬಹುಮಾನ ನೀಡಲಾಗುತ್ತದೆ.-ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಶಾ ಖಾನಂ