ಆ.1ರಂದು ಮೈಸೂರಿಗೆ ಪ್ರಧಾನಿ ಮೋದಿ ಭೇಟಿ; ಯಾವೆಲ್ಲ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ?.. PM Modi To Mysuru

PM Modi To Inaugurate Viveka Memorial In Mysuru On Aug. 1
PM Modi To Inaugurate Viveka Memorial In Mysuru On Aug. 1
Published on

ಪ್ರಮುಖ ಮುಖ್ಯಾಂಶಗಳು

  • ರಾಮಕೃಷ್ಣ ಆಶ್ರಮ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿ.
  • ವಿವೇಕ ಸ್ಮಾರಕ ಉದ್ಘಾಟನೆಗೆಂದು ಆಗಸ್ಟ್​ 1ರಂದು ಮೈಸೂರಿಗೆ ಆಗಮಿಸಲಿದ್ದಾರೆ ಪ್ರಧಾನಿ ಮೋದಿ.
  • 1892 ರ ನವೆಂಬರ್‌ನಲ್ಲಿ ಸ್ವಾಮಿ ವಿವೇಕಾನಂದರು ಮೈಸೂರಿಗೆ ಭೇಟಿ ನೀಡಿದ ಸ್ಮರಣಾರ್ಥವಾಗಿ ಸ್ಥಾಪನೆ.
ಮೈಸೂರು: ಶ್ರೀ ರಾಮಕೃಷ್ಣ ಆಶ್ರಮ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಹಾಗೂ ವಿವೇಕ ಸ್ಮಾರಕ ಉದ್ಘಾಟನೆ(Viveka Smaraka Mysuru inauguration) ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್​ 1ರಂದು ಮೈಸೂರಿಗೆ ಆಗಮಿಸಲಿದ್ದಾರೆ ಎಂದು ಎನ್ನಲಾಗಿದೆ.

ಪ್ರಧಾನಿ ಮೋದಿಯವರ ವೇಳಾಪಟ್ಟಿ ಹೀಗಿದೆ

ವೇಳೆಸ್ಥಳ ಮಾರ್ಗ
ಮಧ್ಯಾಹ್ನ 2.55 ದೆಹಲಿಯಿಂದ ವಿಶೇಷ ವಿಮಾನದಲ್ಲಿ ಮೈಸೂರಿಗೆ ಆಗಮನಮಂಡಕಳ್ಳಿ ವಿಮಾನ ನಿಲ್ದಾಣ, ಮೈಸೂರು
ಮಧ್ಯಾಹ್ನ 3.15ವಿಮಾನ ನಿಲ್ದಾಣದಿಂದ ನಿರ್ಗಮನ (ವಿಶೇಷ ಹೆಲಿಕಾಪ್ಟರ್ ಬಳಕೆ)
ಓವಲ್ ಮೈದಾನ, ಮೈಸೂರು
ಮಧ್ಯಾಹ್ನ 3.25ವಿವೇಕ ಸ್ಮಾರಕ
ಓವಲ್ ಮೈದಾನದಿಂದ ರಸ್ತೆಯ ಮೂಲಕ ಪ್ರಯಾಣ
ಮಧ್ಯಾಹ್ನ 3.30 ರಿಂದ ಸಂಜೆ 5.15 ವಿವೇಕ ಸ್ಮಾರಕ ಉದ್ಘಾಟನೆ.
ರಾಮಕೃಷ್ಣ ಆಶ್ರಮದ ಕಾರ್ಯಕ್ರಮದಲ್ಲಿ ಭಾಗಿ
ಸಂಜೆ 5.20ರಾಮಕೃಷ್ಣ ಆಶ್ರಮದ ಶಾಲೆಗೆ ಭೇಟಿ
ರಾಮಕೃಷ್ಣ ಆಶ್ರಮ
ಸಂಜೆ 5.30ಓವಲ್ ಮೈದಾನಕ್ಕೆ ವಾಪಸ್
ಮೈಸೂರು ವಿಮಾನ ನಿಲ್ದಾಣದತ್ತ ಪ್ರಯಾಣ
ಸಂಜೆ 5.55 ದೆಹಲಿಗೆ ವಾಪಸ್.

ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣ
ಏನಿದರ ಹಿನ್ನಲೆ
35 ಕೋಟಿ ರೂ. ವೆಚ್ಚದಲ್ಲಿ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿ ನಿರ್ಮಿಸಲಾದ ವಿವೇಕ ಸ್ಮಾರಕವನ್ನು ಪ್ರಧಾನಿ ಮೋದಿಯವರು ಉದ್ಘಾಟಿಸಲಿದ್ದಾರೆ. 1892 ರ ನವೆಂಬರ್‌ನಲ್ಲಿ ಸ್ವಾಮಿ ವಿವೇಕಾನಂದರು ಮೈಸೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ತಂಗಿದ್ದ ಸ್ಮರಣಾರ್ಥವಾಗಿ ರಾಮಕೃಷ್ಣ ಆಶ್ರಮವು ಈ ವಿವೇಕ ಸ್ಮಾರಕವನ್ನು ನಿರ್ಮಿಸಿದೆ.
ಮೈಸೂರಿನ ರಾಮಕೃಷ್ಣ ಆಶ್ರಮದಲ್ಲಿ ನಡೆಯಲಿರುವ ಈ ಅದ್ಧೂರಿ ಕಾರ್ಯಕ್ರಮಕ್ಕೆ ಪೊಲೀಸರು ಈಗಾಗಲೇ ಬರಪೂರ ಸಿದ್ಧತೆ ನಡೆಸಿದ್ದಾರೆ. ಪ್ರಧಾನಿ ಮೋದಿ ಅವರು ಸಂಚರಿಸುವ ಮಾರ್ಗದಲ್ಲಿ ಬಂದೋಬಸ್ತ್​ ಕೈಗೊಳ್ಳಲಾಗಿದ್ದು, ವಾಹನ ಸವಾರರು ಆ ದಿನ ಪರ್ಯಾಯ ಮಾರ್ಗದಲ್ಲಿ ಸಂಚರಿಸುವಂತೆ ಸೂಚನೆ ಹೊರಡಿಸಿದ್ದಾರೆ.
1893ರಲ್ಲಿ ಶಿಕಾಗೋದಲ್ಲಿ ನಡೆದ ವಿಶ್ವಧರ್ಮ ಸಮ್ಮೇಳನ ಭಾಷಣಕ್ಕೆ ವಿವೇಕಾನಂದರು ಭೇಟಿ ನೀಡುವ ಮೊದಲು 1892 ನವೆಂಬರ್​ನಲ್ಲಿ ಮೈಸೂರಿಗೆ ಭೇಟಿ ನೀಡಿ ಮೂರು ವಾರ ಇಲ್ಲೆ ತಂಗಿದ್ದರು. ಅಭ್ಯಾಸ ನಟಡೆಸಿದ್ದರು. ಆ ವೇಳೆ ಇದ್ದ ಮೈಸೂರಿನ ಶ್ರೀ ಚಾಮರಾಜ ಒಡೆಯರ್​ ಹಾಗೂ ದಿವಾನರಾದ ಸರ್​ ಕೆ ಶೇಷಾದ್ರಿ ಅವರೊಂದಿಗೆ ಸಂವಾದ ನಡೆಸಿದ್ದರು ಎನ್ನಲಾಗಿದೆ. ಈ ಐತಿಹಾಸಿಕ ಕ್ಷಣಕ್ಕೆ ಕಾರಣವಾದ ಜಾಗದಲ್ಲಿ ಸ್ಮಾರಕ ತಲೆಯೆತ್ತಲಿದೆ ಎನ್ನಲಾಗಿದೆ.

ಆರ್ಟ್​ ಆಫ್​ ಲಿವಿಂಗ್​ಗೆ ಭೇಟಿ

ಪ್ರಧಾನಿ ಮೋದಿ ಅವರು ಮೇ ಮೊದಲ ವಾರದಲ್ಲಿ ಆರ್ಟ್​ಆಫ್​ ಲಿವಿಂಗ್​ಗೆ ಭೇಟಿ ನೀಡಿದ್ದರು. ಆ ಬೆನ್ನಲ್ಲೇ ಕರ್ನಾಟಕಕ್ಕೆ ಮತ್ತೊಮ್ಮೆ ಆಗಮಿಸುತ್ತಿದ್ದಾರೆ. ವಿದ್ಯಾರ್ಥಿಗಳ ಕೌಶಲ್ಯ. ಕಲೆಗಾಗಿ ಹಾಗೂ ಯೋಗ­ಧ್ಯಾನ, ಗ್ರಂಥಾಲಯ, ವಸ್ತುಸಂಗ್ರಹಾಲಯ, ಯುವ ಸಬಲೀಕರಣ ಕೇಂದ್ರ, ಚಿತ್ರಪಟ ಪ್ರದರ್ಶನ ಹಾಗೂ ಸಭಾಂಗಣ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒಳಗೊಂಡ ವಿವೀಕ ಸ್ಮಾರಕ ಕೇಂದ್ರವನ್ನು ಉದ್ಘಾಟಿಸುತ್ತಿದ್ದಾರೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net