'ಇದು ಕೇವಲ ಆರಂಭ, ಇನ್ನೂ ಬಹಳ ದೂರ ಸಾಗಬೇಕಿದೆ'; ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಹೊಸ ವಿಡಿಯೋ ಸಂದೇಶ!..Abhijeet Dipke

 CJP founder Abhijeet Dipke releases new video
CJP founder Abhijeet Dipke releases new video
Published on

ಪ್ರಮುಖ ಮುಖ್ಯಾಂಶಗಳು

  • ಕಾಕ್ರೋಚ್​ ಜನತಾ ಪಾರ್ಟಿ ಪ್ರತಿಭಟನೆಯಲ್ಲಿ ಭಾಗಿಯಾದ ವಿದ್ಯಾರ್ಥಿಗಳಿಗೆ ತ್ಯಾಂಕ್ಸ್​ ಎಂದ ಅಭಿಜಿತ್​ ದೀಪ್ಕೆ
  • ಟೈಫಾಯ್ಡ್​ ಇರುವ ಕಾರಣ ವಿಶ್ರಾಂತಿಯಲ್ಲಿದ್ದೇನೆ ಎಂದು ಎಕ್ಸ್​ನಲ್ಲಿ ಮಾಹಿತಿ
  • ನಿಂದಿಸಿ, ಟೀಕಿಸಿದವರಿಗೆ ಧನ್ಯವಾದ ನಮ್ಮ ಸಾಧನೆಗೆ ನೀವು ಕಾರಣ ಎಂದ ಅಭಿಜಿತ್ ದೀಪ್ಕೆ
CJP founder Abhijeet Dipke releases new video: ಕಳೆದ 37 ದಿನಗಳಲ್ಲಿ ನಾನು ಅನುಭವಿಸಿದ್ದು ನಿಜಕ್ಕೂ ಕಷ್ಟಕರವಾಗಿತ್ತು. ಅದು ನನಗೆ ಮಾತ್ರವಲ್ಲ, ನಮ್ಮ ಇಡೀ ತಂಡಕ್ಕೆ ಈ ಹೋರಾಟ ಸುಲಭವಾಗಿರಲಿಲ್ಲ. ವಿರೋಧದ ಮಧ್ಯೆಯೂ ನಮಗೆ ಬೆಂಬಲ ನೀಡಿದ ದೇಶದ ಎಲ್ಲ ಜನರಿಗೂ ಧನ್ಯವಾದ. ಹೋರಾಟಕ್ಕೆ ಒಟ್ಟಾದ ವಿದ್ಯಾರ್ಥಿಗಳಿಗೆ ಧನ್ಯವಾದ ಎಂದು ಸಿಜೆಪಿ ಮುಖ್ಯಸ್ಥ ಅಭಿಜಿತ್​ ದೀಪ್ಕೆ ತಮ್ಮ ಎಕ್ಸ್​ ಖಾತೆಯಲ್ಲಿ ಬೆಳ್ಳಂಬೆಳಗ್ಗೆ ವಿಡಿಯೋ ಹಂಚಿಕೊಂಡಿದ್ದಾರೆ.
ನೀಟ್​ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಾದ ಲೋಪದೋಷದ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ, ಕಳೆದ 37 ದಿನದಿಂದ ಕಾಕ್ರೋಚ್​ ಜನತಾ ಪಾರ್ಟಿ ಪ್ರತಿಭಟನೆ ನಡೆಸುತ್ತಿತ್ತು. ಸದ್ಯ ಅವರ ಹೋರಾಟಕ್ಕೆ ಜಯ ಸಿಕ್ಕಿದೆ.
ಕೊನೆಗೂ ಧರ್ಮೇಂದ್ರ ಪ್ರಧಾನ್ ಅವರು ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಜೊತೆಗೆ ಅವರ ಮತ್ತೆರೆಡು ಬೇಡಿಕೆಗೂ ಸರ್ಕಾರ ಒಪ್ಪಿಕೊಂಡಿರುವ ಕಾರಣ, ಕೋಕ್ರೋಚ್ ಜನತಾ ಪಕ್ಷ ಯಶಸ್ವಿ ಚಳವಳಿಯನ್ನು ಕೊನೆಗೊಳಿಸಿದೆ. ಕೇವಲ 30 ವರ್ಷ ವಯಸ್ಸಿನ ಯುವ ನಾಯಕ ಅಭಿಜಿತ್ ದೀಪ್ಕೆ ಹಾಗೂ ಅವರ ಬೆಂಬಲಿಗರು ಸದ್ಯಕ್ಕೆ ನಿರಾಳತೆಯುಸಿರು ಬಿಟ್ಟಿದ್ದಾರೆ.

ಬೆಳ್ಳಂಬೆಳಗ್ಗೆ ವಿಡಿಯೋ ಮಾಡಿ ಅಭಿಜಿತ್ ದೀಪ್ಕೆ

"ಇದು ಕೇವಲ ಆರಂಭವಷ್ಟೇ, ಕೋಕ್ರೋಚ್ ಜನತಾ ಪಕ್ಷಕ್ಕೆ ಇನ್ನೂ ದೊಡ್ಡ ದಾರಿಯಿದೆ . ನಾನು ಈಗ ಯಾವುದೇ ಆತಂಕವಿಲ್ಲದೆ ನನ್ನ ಮಲಗುವ ಕೋಣೆಯಲ್ಲಿ ಮಲಗಬಹುದು, ಮುಂದೇನು ಮಾಡಬೇಕು ಎಂಬ ಚಿಂತೆಯಿಲ್ಲದೆ ವಿಶ್ರಾಂತಿ ಪಡೆಯುತ್ತಿದ್ದೇನೆ" ಎಂದು ದೀಪ್ಕೆ ಹೇಳಿಕೊಂಡಿದ್ದಾರೆ.

ಟೈಫಾಯ್ಡ್ ಮಧ್ಯೆಯೂ ಹೋರಾಟ

ಜಂತರ್ ಮಂತರ್‌ನಲ್ಲಿ ಕಾಯುತ್ತಿದ್ದ ಎಲ್ಲರನ್ನು ಭೇಟಿ ಮಾಡಲು ನನಗೆ ಸಾಧ್ಯವಾಗಲಿಲ್ಲ. ನಾನು ಎಲ್ಲರಿಲ್ಲಿಯೂ ಕ್ಷಮೆ ಕೇಳುತ್ತೇನೆ. ನನಗೆ ಟೈಫಾಯ್ಡ್​ ಇದೆ. ನನ್ನ ದೇಹದ ಉಷ್ಣತೆಯು 101 ದಾಖಲಾಗಿತ್ತು. ಅದಕ್ಕಾಗಿಯೇ ನಾನು ಮನೆಗೆ ಬರಬೇಕಾಯಿತು. ಹಾಗಗಿ ಕ್ಷಮೆ ಇರಲಿ ಎಂದು ಕೇಳಿಕೊಂಡಿದ್ದಾರೆ.
ಪ್ರತಿಭಟನಾ ಸ್ಥಳದಲ್ಲಿಯೇ ಉಳಿದುಕೊಂಡಿದ್ದವರಿಗೆ ಧನ್ಯವಾದ ಅರ್ಪಿಸುತ್ತಾ ಅವರು, 37 ದಿನಗಳ ಕಾಲ ಜಂತರ್ ಮಂತರ್‌ನಲ್ಲಿ ಕಾಯುತ್ತಿದ್ದ ಎಲ್ಲ ಜನರಿಗೆ, ನಿಮ್ಮ ಪ್ರತಿಯೊಬ್ಬರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಈ ದೇಶಕ್ಕಾಗಿ ನೀವು ಮಾಡಿದ್ದನ್ನು ನಾನು ನಿಜಕ್ಕೂ, ನಿಜಕ್ಕೂ, ನಿಜಕ್ಕೂ ಪ್ರಶಂಸಿಸುತ್ತೇನೆ ಎಂದು ನಾನು ಹೇಳಲು ಬಯಸುತ್ತೇನೆ. ಮತ್ತು ನಾನು ನಿಮ್ಮೆಲ್ಲರನ್ನು ನಿಜಕ್ಕೂ ಪ್ರೀತಿಸುತ್ತೇನೆ. ನಿಮ್ಮ ಸಹಾಯವಿಲ್ಲದೆ ನಾವು ಇದನ್ನು ಸಾಧಿಸಲು ಸಾಧ್ಯವಾಗುತ್ತಿರಲಿಲ್ಲ." ಎಂದರು.

ಪಕ್ಷವನ್ನು ಟೀಕಿಸಿದವರಿಗೂ ತ್ಯಾಂಕ್ಸ್​ ಎಂದ ದೀಪ್ಕೆ

ನಮ್ಮನ್ನು ಅನುಮಾನಿಸಿದ, ಟೀಕಿಸಿದ ನಿಮ್ಮ ಹೋರಾಟ ಗಂಭೀರವಾಗಿಲ್ಲ, ನಿಮಗೆ ಪ್ರತಿಭಟಿಸುವುದು ಹೇಗೆಂದು ತಿಳಿದಿಲ್ಲ ಎಂದು ಪ್ರಶ್ನಿಸಿದ ಜನರಿಗೆ, ನಾನು ಅವರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. ನೀವು ನಮ್ಮನ್ನು ಟೀಕಿಸದಿದ್ದರೆ, ನೀವು ನಮ್ಮನ್ನು ಪ್ರಶ್ನಿಸದಿದ್ದರೆ, ನಾವು ಸುಧಾರಿಸಲು ಸಾಧ್ಯವಾಗುತ್ತಿರಲಿಲ್ಲ. ಜಿರಳೆ ಜನತಾ ಪಕ್ಷವು ಇನ್ನೂ ಬಹಳ ದೂರ ಕ್ರಮಿಸಬೇಕಾಗಿದೆ, ಮತ್ತು ಖಂಡಿತವಾಗಿಯೂ ನಾವು ಬಹಳ ದೂರ ಕ್ರಮಿಸುತ್ತೇವೆ. ಇದು ಕೇವಲ ಆರಂಭ. ಜೈ ಹಿಂದ್," ಎಂದರು.

ಪ್ರತಿಭಟನೆ ಕೊನೆಗೊಳಿಸುವ ಬಗ್ಗೆ ಮಾಹಿತಿ

36 ದಿನಗಳ ಪ್ರತಿಭಟನೆಯ ನಂತರ ಸರ್ಕಾರ ನಮ್ಮ ಎಲ್ಲಾ ಬೇಡಿಕೆಗಳನ್ನು ಒಪ್ಪಿಕೊಂಡಿರುವುದರಿಂದ, ಎಲ್ಲರೂ ಶಾಂತಿಯುತವಾಗಿ ಪ್ರತಿಭಟನಾ ಸ್ಥಳಗಳಿಂದ ಹಿಂದೆ ಸರಿದು ಮನೆಗೆ ಹೋಗಬೇಕೆಂದು ನಾವು ಮನವಿ ಮಾಡುತ್ತೇವೆ" ಎಂದು ರಂಕಾ ಹೇಳಿದರು.

ನಡ್ಡಾ ಹೇಳಿದ್ದೇನು?

ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ನಡ್ಡಾ, CJP ನಿಯೋಗವು ಆಂದೋಲನದ ಸಮಯದಲ್ಲಿ ದಾಖಲಾಗಿರುವ ಪ್ರಕರಣಗಳಿಗೆ ಸಂಬಂಧಿಸಿದ ಕಳವಳಗಳನ್ನು ಮತ್ತು ಉಳಿದ ಬೇಡಿಕೆಗಳನ್ನು ವಿವರಿಸುವ ಲಿಖಿತ ಕರಡನ್ನು ಮಂಡಿಸಿತು ಎಂದು ಹೇಳಿದರು.
ಪ್ರತಿಭಟನಾಕಾರರ ವಿರುದ್ಧ ಯಾವುದೇ ಪ್ರತೀಕಾರದ ಕ್ರಮ ಕೈಗೊಳ್ಳುವುದಿಲ್ಲ, ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ನೀಡಲಾಗುವುದು ಮತ್ತು ತನ್ನ ಐದು ಅಂಶಗಳ ಬೇಡಿಕೆಗಳನ್ನು ಪರಿಗಣಿಸಲಾಗುವುದು ಎಂದು ಪಕ್ಷವು ಭರವಸೆ ಕೋರಿದೆ ಎಂದು ಅವರು ಹೇಳಿದರು.

ಪ್ರತಿಭಟನೆ ಬಿಗಡಾಯಿಸಿದ್ಯಾವಾಗ?

ಜೂನ್ 28 ರಿಂದ ಜಂತರ್ ಮಂತರ್‌ನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸೋನಮ್ ವಾಂಗ್‌ಚುಕ್ ಅವರನ್ನು ಜುಲೈ 18 ರಂದು ಪೊಲೀಸರು ಸಫ್ದರ್ಜಂಗ್ ಆಸ್ಪತ್ರೆಗೆ ಸ್ಥಳಾಂತರಿಸಿದ ನಂತರ ಪ್ರತಿಭಟನೆಗಳು ತೀವ್ರಗೊಂಡವು. ಜುಲೈ 20 ರಂದು ಸಾವಿರಾರು ಜನರು ಸಂಸತ್ತಿನ ಕಡೆಗೆ ಮೆರವಣಿಗೆ ನಡೆಸಿದಾಗ, ಪೊಲೀಸರೊಂದಿಗೆ ಘರ್ಷಣೆಗೆ ಕಾರಣವಾಯಿತು, ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್ ಮತ್ತು ಅಶ್ರುವಾಯು ಪ್ರಯೋಗಿಸಿದರು, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net