ಬೀಜೋತ್ಪಾದನೆಗೆ ಉಳುಮೆ ಶುರು

ಕಂಪ್ಲಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಭೂಮಿಯಲ್ಲಿ  ಟ್ರಾಕ್ಟರ್ ಚಾಲಿತ ನೇಗಿಲಿನಿಂದ ಮಾಗಿ ಉಳುಮೆ ಮಾಡುತ್ತಿರುವುದು.
ಕಂಪ್ಲಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಭೂಮಿಯಲ್ಲಿ ಟ್ರಾಕ್ಟರ್ ಚಾಲಿತ ನೇಗಿಲಿನಿಂದ ಮಾಗಿ ಉಳುಮೆ ಮಾಡುತ್ತಿರುವುದು.
Published on
ಕಂಪ್ಲಿ: ಉತ್ತಮ ಮಳೆ ಬಂದಿರುವ ಹಿನ್ನೆಲೆಯಲ್ಲಿ ಪಟ್ಟಣದ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಕೃಷಿ ಬೀಜೋತ್ಪಾದನಾ ಕೇಂದ್ರ  ಬೀಜೋತ್ಪಾದನೆಗಾಗಿ ಭೂಮಿ ಸಿದ್ಧಗೊಳಿಸಲು ಮಾಗಿ ಉಳುಮೆಯಲ್ಲಿ ತೊಡಗಿದ್ದು, ನೇಗಿಲು ಬಳಸಿ ಭೂಮಿ ಸಿದ್ಧಗೊಳಿಸಲಾಗುತ್ತಿದೆ. 
ರಾಜ್ಯದ ರೈತರಿಗೆ ಗುಣಮಟ್ಟದ ಬಿತ್ತನೆಬೀಜಗಳನ್ನು ಈ ಕೇಂದ್ರದಿಂದ ಪೂರೈಸಲಾಗುತ್ತಿದೆ. ಕೆಲವು ಬೀಜೋತ್ಪಾದನಾ ಕೇಂದ್ರಗಳಿಗೆ ಇಲ್ಲಿಂದಲೇ ಬೀಜ ಉತ್ಪಾದಿಸಿ ಕಳುಹಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ತರಬೇತಿ ಕೇಂದ್ರದ ಕೃಷಿ ಭೂಮಿಯನ್ನು ಉಳುಮೆಗೆ ಸಜ್ಜುಗೊಳಿಸಲಾಗುತ್ತಿದೆ. 
 ತರಬೇತಿ ಕೇಂದ್ರದ 6 ಹೆಕ್ಟೇರ್ ಭೂಮಿಯಲ್ಲಿ ಎಂಟಿಯು 1010 ತಳಿಯ ಭತ್ತ, 8ಹೆಕ್ಟೇರ್‌ನಲ್ಲಿ ಟಿಎಸ್3ಆರ್ ತಳಿಯ ತೊಗರಿ, 20 ಹೆಕ್ಟೇರ್‌ನಲ್ಲಿ ಜೆಜಿ11 ತಳಿಯ ಕಡಲೆ, 18 ಹೆಕ್ಟೇರ್‌ದೇಸಿ ತಳಿಯ ನವಣೆ, ಅರ್ಕ, ಸಜ್ಜೆ, ರಾಗಿ, ಬರಗು ನಾನಾ ಸಿರಿಧಾನ್ಯಗಳನ್ನು ಬೆಳೆಯಲಾಗುತ್ತಿದೆ. 
ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಭೂಮಿಯನ್ನು ಸರ್ವೇ ಮಾಡಿಸಿ ತೋಟಗಾರಿಕೆ, ಅರಣ್ಯ ಮತ್ತು ಕೃಷಿ ಬೆಳೆ ಬೆಳೆಯಲು ಉದ್ದೇಶಿಸಿದೆ. ಈ ಕುರಿತು ಕ್ರಿಯಾಯೋಜನೆ ರೂಪಿಸಿ ಕೃಷಿ ಆಯುಕ್ತರಿಗೆ ಕಳುಹಿಸಲಾಗಿದೆ. 
ಅವರಿಂದ ಸೂಕ್ತ ಮಾರ್ಗದರ್ಶನ ಪಡೆದುಕೊಂಡು ಕ್ರಮ ಕೈಗೊಳ್ಳಲಾಗುವುದು. ಸೂಕ್ತ ಮಾರ್ಪಾಟಿಗೆ ಸೂಚಿಸಿದಲ್ಲಿ ಬೀಜೋತ್ಪಾದನೆಯ ತಳಿ, ಬೆಳೆಯನ್ನು ಬದಲಿಸಲಾಗುವುದು ಎಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ಎಂ.ದಯಾನಂದ್ ತಿಳಿಸಿದರು.   
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net