ತಿಪಟೂರು ಅಭಿವೃದ್ಧಿಗೆ ಸಹಕಾರ ನೀಡಿ

please-cooperate-for-the-development-of-tiptur
please-cooperate-for-the-development-of-tiptur
Published on
ತಿಪಟೂರು: ತಾಲೂಕಿನ ಅಭಿವೃದ್ಧಿಗೆ ಸಹಕರಿಸಬೇಕು, ಇಲ್ಲದಿದ್ದರೆ ತಪ್ಪಗಿರಬೇಕು ಎಂದು ವಿರೋಧಿಗಳಿಗೆ ಶಾಸಕ ಕೆ.ಷಡಕ್ಷರಿ ಮನವಿ ಮಾಡಿದರು.
ತಾಪಂ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ತಾಲೂಕು ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಮತ್ತು ಕರಡು ಕ್ರಿಯಾ ಯೋಜನೆಯ ಪ್ರಥಮ ಸಭೆಯಲ್ಲಿ ಮಾತನಾಡಿ, ಬೆಳೆಯುತ್ತಿರುವ ಜನಸಂಖ್ಯೆ ಮತ್ತು 50 ವರ್ಷಗಳ ಅಗತ್ಯತೆಗಳನ್ನು ಅಂದಾಜಿಸಿ ಕೋಟ್ಯಾಂತರ ವೆಚ್ಚದ ಕುಡಿಯುವ ನೀರು, ಯುಜಿಡಿ ವ್ಯವಸ್ಥೆ, ವಾಣಿಜ್ಯ ಕಟ್ಟಡಗಳ ನಿಮಾರ್ಣಕ್ಕೆ ಅನುದಾನ ಬಿಡುಗಡೆ ಮಾಡಿಸಿದರೆ ಕುಡಿಯುವ ನೀರಿನ ಯೋಜನೆ ಅಡ್ಡಗಾಲು ಹಾಕುವವರಿಂದ ವಿಳಂಬವಾಗಿವೆ. ಈ ನಿಟ್ಟಿನಲ್ಲಿ ಇದ್ದ ಅಡೆತಡೆಗಳನ್ನು ನಿವಾರಿಸಲಾಗಿದ್ದು, ಶ್ರೀ ಕುಡಿಯುವ ನೀರಿನ ಯೋಜನೆ ಕಾಮಗಾರಿ ವೇಗ ಪಡೆಯಲಿದೆ, ಅಭಿವೃದ್ಧಿಗೆ ಸಹಕರಿಸಬೇಕು ಎಂದರು.
19 ಕೋಟಿ ರೂ. ವೆಚ್ಚದಲ್ಲಿ 165 ಅಂಗನವಾಡಿ ಕಟ್ಟಡಗಳ ದುರಸ್ತಿ ಮತ್ತು 65 ಹೊಸ ಕಟ್ಟಡಗಳ ನಿಮಾರ್ಣ, ಬೀಳುವ ಹಂತದಲ್ಲಿರುವ ಬಳುವನೇರಲು ಮತ್ತು ಹೊಂಗೇಲಕ್ಷಿ$್ಮಕ್ಷೇತ್ರದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ದುರಸ್ತಿ, ನೊಣವಿನಕೆರೆ ಮತ್ತು ಹೊನ್ನವಳ್ಳಿಗೆ 24*7 ಪಿಎಚ್​ಸಿ ಕೇಂದ್ರಕ್ಕೆ ಬೇಡಿಕೆ, ಗುರುಗದಹಳ್ಳಿ ಮತ್ತು ಕೋಟೆನಾಯನಹಳ್ಳಿಗಳಿಗೆ ಹೊಸದಾಗಿ ಎರಡು ಪಿಎಚ್​ಸಿ ಕೇಂದ್ರಗಳ ಅಗತ್ಯದ ಬಗ್ಗೆ ಅಧಿಕಾರಿಗಳು ಶಾಸಕರ ಗಮನಕ್ಕೆ ತಂದರು.
ಸಿಎಂಐಡಿಎಫ್​ ಮತ್ತು ಕೆಎಂಆರ್​ಸಿ ಸೇರಿದಂತೆ ಕೆಲ ಇಲಾಖೆಗಳಿಂದ ಅಂದಾಜು 340 ಕೋಟಿ ರೂ. ವೆಚ್ಚದ ರಸ್ತೆ ನಿಮಾರ್ಣ, ದುರಸ್ತಿ ಮತ್ತು ಗ್ರಾಮೀಣ ಭಾಗದಲ್ಲಿ ರಸ್ತೆ ಮತ್ತು ಚರಂಡಿ ನಿಮಾರ್ಣ ಕಾಮಗಾರಿಗೆ ಚಾಲನೆ ನೀಡಲಾಗುವುದು. ಮುಂದಿನ 2 ವರ್ಷದೊಳಗೆ ಇಡೀ ತಾಲೂಕು ರಸ್ತೆ, ಮತ್ತು ಚರಂಡಿ ಸಮಸ್ಯೆಗಳಿಂದ ಮುಕ್ತವಾಗಿರುತ್ತೆ ಎಂದು ಶಾಸಕರು ತಿಳಿಸಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಜಲಜಾಕ್ಷಮ್ಮ, ತಲಾ 7.5 ಕೋಟಿ ವೆಚ್ಚದಲ್ಲಿ ಬಾಲಕರ ಮತ್ತು ಬಾಲಕಿಯರ ಇಂನಿಯರಿಂಗ್​ ಹಾಸ್ಟೆಲ್​ಗಳ ನಿಮಾರ್ಣದ ಅಗತ್ಯಗೆ ಬಗ್ಗೆ ಸಭೆಯ ಗಮನ ಸೆಳೆದರು.
ತಾಲೂಕಿನ 22 ಶಾಲೆಗಳಲ್ಲಿ 10ಕ್ಕಿಂತಾ ಕಡಿಮೆ ಮಕ್ಕಳಿರುವುದವನ್ನು ಬಿಇಒ ತಾರಾಮಣಿ, ಶಾಸಕರ ಗಮನಕ್ಕೆ ತಂದಾಗ, ಒಂದೇ, ಒಂದು ಮಗು ಇದ್ದರೂ ಸರ್ಕಾರಿ ಶಾಲೆ ಮುಚ್ಚುವ ಉದ್ದೇಶವಿಲ್ಲ ಎಂದರು
.
ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಚಂದ್ರಶೇಖರ್​, ಕಾಯಿ ಶೆಡ್​ ನಿಮಾರ್ಣಕ್ಕೆ ಸಹಾಯಧನ ಕೋರಿ ಅಂದಾಜು 1 ಸಾವಿರ ಅರ್ಜಿಗಳು ಬಂದಿರುವ ಬಗ್ಗೆ ಸಭೆಗೆ ತಿಳಿಸಿದಾಗ. ಹಳೇ ಪದ್ಧತಿಯ ಅಟ್ಟಗಳನ್ನು ಬಿಟ್ಟು ನೆಲ ಅಟ್ಟದಲ್ಲಿ ಕಾಯಿ ಶೇಖರಿಸುವುದು ಒಳಿತಲ್ಲ. ಶೀತದ ವಾತಾವರಣದಲ್ಲಿ ಕೊಬ್ಬರಿ ಗುಣಮಟ್ಟ ಹಾಳಾಗುವ ಜತೆಗೆ, ಕೊಬ್ಬರಿ ಬರಲು ಹೆಚ್ಚು ಸಮಯ ಹಿಡಿಯುತ್ತೆ ಎಂದು ಶಾಸಕರು ಸೂಚಿಸಿದರು.
ರಾಗಿ ಬೆಳೆಗೆ ಯೂರಿಯಾಗೆ ಪರ್ಯಾಯವಾಗಿ ನ್ಯಾನೋ ಬಳಕೆ ಬಗ್ಗೆ ಕೆವಿಕೆ ವಿಜ್ಞಾನಿ ಸಹಮತ ವ್ಯಕ್ತಪಡಿಸದ ಕಾರಣ, ತೋಟಗಾರಿಕೆ, ಕೃಷಿ ಮತ್ತು ಕೆವಿಕೆ ವಿಜ್ಞಾನಿಗಳನ್ನು ಒಳಗೊಂಡ ಕಾರ್ಯಾಗಾರ ಏರ್ಪಡಿಸಿ, ರೈತರಿಗೆ ಈ ಬಗ್ಗೆ ಸಮಗ್ರ ಅರಿವು ನೀಡಿ ಎಂದು ಶಾಸಕರು ಸೂಚಿಸಿದರು.
ತಹಸೀಲ್ದಾರ್​ ಜಿ.ವಿ.ಮೋಹನ್​ಕುಮಾರ್​, ತಾಪಂ ಇಒ ಎಚ್​.ಎಂ.ಸುದರ್ಶನ್​, ನಗರಾಯುಕ್ತ ವಿಶ್ವೇಶ್ವರ ಬಗರಗಡೆ, ತಾಲೂಕು ಆರೋಗ್ಯಾಧಿಕಾರಿ ಡಾ.ಚನ್ನಕೇಶವ ಸೇರಿದಂತೆ ವಿವಿಧ ಇಲಾಖೆಯ ಮುಖ್ಯಸ್ಥರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net