ಹುನಗುಂದ ನಗರದ ನ್ಯಾಯಾಲಯದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲ ಸಂಘ, ಅರಣ್ಯ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವನ ಮಹೋತ್ಸವ ಕಾರ್ಯಕ್ರಮವನ್ನು ನ್ಯಾಯಾಧೀಶ ಜಿ.ಎ.ಮೂಲಿಮನಿ ಉದ್ಘಾಟಿಸಿದರು. ನ್ಯಾಯಾಧೀಶ ಮಹಾಂತೇಶ ಮಠದ, ಉಪ ಅರಣ್ಯ ಅಧಿಕಾರಿ ಎಸ್.ಎನ್.ಕಂಬಿಮಠ, ಪದ್ಮಾವತಿ ಮಾದಿಗ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ನ್ಯಾಯಾಧೀಶ ಜಿ.ಎ. ಮೂಲಿಮನಿ ಅಭಿಮತ
ವನ ಮಹೋತ್ಸವ ಸಾಪ್ತಾಹ
ಹುನಗುಂದ: ಗಿಡ-ಮರಗಳು ನಮ್ಮ ಬದುಕಿನ ಜೀವಾಳ. ಮರ ಇರದೇ ಹೋದರೆ ಮನುಷ್ಯ-ಪ್ರಾಣಿಗಳು ಬದುಕಲು ಅಸಾಧ್ಯ ಎಂದು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಿ.ಎ. ಮೂಲಿಮನಿ ಹೇಳಿದರು.
ನಗರದ ನ್ಯಾಯಾಲಯದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲ ಸಂಘ, ಅರಣ್ಯ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವನ ಮಹೋತ್ಸವ ಸಾಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯನಿಗೆ ಸತತವಾಗಿ 24 ಗಂಟೆಗಳ ಕಾಲ ಉಚಿತವಾಗಿ ಆಮ್ಲಜನಕವನ್ನು ಮರಗಳು ನೀಡುತ್ತವೆ ಎಂದರು.
ನಿಸರ್ಗದ ಕೊಡುಗೆಯಾದ ಮರಗಳ ರಕ್ಷಣೆ ಮಾಡಬೇಕು ಎಂದರು.
ಆದರೆ ಇಂದಿನ ದಿನಗಳಲ್ಲಿ ಮರಗಳನ್ನು ಕಡಿದು ರಸ್ತೆ, ನಗರಗಳಾಗಿ ನಿರ್ಮಾಣ ಮಾಡಿ, ನೈಸರ್ಗಿಕ ವಿಕೋಪಕ್ಕೆ ವಿರುದ್ಧವಾಗಿ ಕೆಟ್ಟ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಆದ್ದರಿಂದ ಸಾಕಷ್ಟು ಆಮ್ಲಜನಕ ಕೊರತೆಯಿಂದ ಚಿಕ್ಕ ವಯಸ್ಸಿನಲ್ಲಿ ಹೃದಯಾಘಾತವಾಗುತ್ತಿದೆ. ಒಳ್ಳೆಯ ಗಾಳಿ ಇರದೆ ರೋಗಕ್ಕೆ ತುತ್ತಾಗುತ್ತಿದ್ದೇವೆ. ಆದ್ದರಿಂದ ಎಲ್ಲರೂ ಮರಳನ್ನು ಪಾಲನೆ ಪೋಷಣೆ ಮಾಡಬೇಕು ಎಂದರು.
ಇಳಕಲ್ಲ ತಾಲೂಕು ಅಧ್ಯಕ್ಷ ಎಂ.ಎಸ್.ಹೊಸೂರ ಮಾತನಾಡಿ, ವರ್ಷಕ್ಕೆ ಒಂದು ಗಿಡ ನೆಡಬೇಕು, ಇಲ್ಲವಾದರೆ ಪ್ರತಿಯೊಬ್ಬರ ಆಕ್ಸಿಜನ್ ಬಾಟಲಿ ಹಿಡೆದುಕೊಂಡು ಓಡಾಡಬೇಕಾಗುತ್ತದೆ ಎಂದು ತಿಳಿಸಿದರು.
ವಕೀಲರ ಸಂಘದ ಅಧ್ಯಕ್ಷ ಎಂ.ಬಿ.ದೇಶಪಾಂಡೆ ಮಾತನಾಡಿ. ಪ್ರತಿಯೊಬ್ಬರು ಪರಿಸರ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಹೊಣೆ ಎಂದರು.
ಪ್ರಧಾನ ದಿವಾಣಿ ನ್ಯಾಯಾಧೀಶ ಮಹಾಂತೇಶ ಮಠದ, ಅಪರ ದಿವಾಣಿ ನ್ಯಾಯಾಧೀಶ , ಉಪ ಅರಣ್ಯ ಅಧಿಕಾರಿ ಎಸ್.ಎನ್.ಕಂಬಿಮಠ, ಪದ್ಮವತಿ ಮಾದಿಗ, ವಕೀಲರ ಸಂಘದ ಕಾರ್ಯದರ್ಶಿ ಆರ್.ಎಚ್.ಕೋಕಾಟಿ, ಎಂ.ಎನ್.ಭಮಸಾಗರ, ಸಂಜಯ್ಯ ಐಹೊಳೆ ಇತರರಿದ್ದರು.