ಉತ್ತಮ ಮಳೆಯಾಗಲಿ ಎಂದು ಪ್ರಾರ್ಥಿಸಿ ಗೋಗಿ ಗ್ರಾಮಸ್ಥರು ಚಂದಾಹುಸೇನಿ ದರ್ಗಾ ದೇವಸ್ಥಾನಕ್ಕೆ ಕುದುರೆ ಬಿಡುವ ಮೂಲಕ ವಿಶೇಷ ಪೂಜೆ ಸಲ್ಲಿಸಿದರು. ನಾಗಯ್ಯಸ್ವಾಮಿ ಗಣಚಾರಿ, ಶಂಕ್ರಯ್ಯಸ್ವಾಮಿ ಕೋರಿಮಠ, ಮಹ್ಮದ್ ಮುಸ್ತ-Á, ಮಹಮ್ಮದ್ ಭೈರಿ, ಈರಣ್ಣ ಬz್ದೆಳ್ಳಿ, ಭೀಮರಾಯ ಚೂರಿ, ಧರ್ಮಣ್ಣ ಚೂರಿ, ಶಫೀ ಸಿಲೇದಾರ್, ದೇವು ಚೂರಿ, ಚಾಂದಪಾಶಾ, ಶಿವಪ್ಪ ಮ¯್ಲÁಡ, ಶಿವಪ್ಪ ನಾಯ್ಕೋಡಿ ಇತರರಿದ್ದರು.
ಸಸಿ ನೆಟ್ಟು ಪೋಷಿಸುವುದೇ ನಿಜವಾದ ಪರಿಸರ ಸೇವೆ ಎಂದು ಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರ ಯಾದಗಿರಿ ಜಿ¯್ಲÁ ಘಟಕದ ಅಧ್ಯಕ್ಷೆ ವಿಜಯಲಕ್ಷ್ಮಿ ಕೆ.ಹಂಗರಗಿ ಹೇಳಿದರು.
ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ರಾಷ್ಟಿçÃಯ ಸೇವಾ ಯೋಜನೆ (ಎನ್‌ಎಸ್‌ಎಸ್) ಘಟಕ ಹಾಗೂ ಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರ ಯಾದಗಿರಿಯಿಂದ ಮಂಗಳವಾರ ಹಮ್ಮಿಕೊಂಡ ಸಸಿ ವಿತರಣಾ ಹಾಗೂ ಸಸಿ ನೆಡುವ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಕೇವಲ ಸಸಿ ನೆಡುವುದಷ್ಟೇ ಅಲ್ಲ ಅವುಗಳನ್ನು ಪೋಷಿಸಿ ಮರಗಳಾಗಿ ಬೆಳೆಸುವ ಸಂಕಲ್ಪವನ್ನು ಪ್ರತಿಯೊಬ್ಬರೂ ಮಾಡಬೇಕು ಎಂದು ಸಲಹೆ ನೀಡಿದರು.
ಇಂದಿನ ಪರಿಸರ ಮಾಲಿನ್ಯ ಅರಣ್ಯ ನಾಶ ಹಾಗೂ ಹವಾಮಾನ ವೈಪರೀತ್ಯ ತಡೆಗೆ ಹೆಚ್ಚಿನ ಪ್ರಮಾಣದಲ್ಲಿ ಸಸಿ ನೆಟ್ಟು ಅವುಗಳ ಆರೈಕೆ ಮಾಡುವುದು ಅಗತ್ಯವಾಗಿದೆ. ವಿದ್ಯಾರ್ಥಿಗಳು ಪರಿಸರದ ಬಗ್ಗೆ ಜಾಗೃತಿ ಮೂಡಿಸಿಕೊಂಡು ಸಮಾಜಕ್ಕೂ ಮಾದರಿಯಾಗಬೇಕು ಎಂದು ಕರೆ ನೀಡಿದರು.
ಕಲ್ಲಪ್ಪ ಹಂಗರಗಿ, ಮರಗಳು ನಮ್ಮ ಬದುಕಿನ ಆಧಾರ. ಪ್ರತಿಯೊಬ್ಬ ವಿದ್ಯಾರ್ಥಿಯೂ ಕನಿಷ್ಠ ಒಂದು ಸಸಿಯನ್ನು ನೆಟ್ಟು ಅದನ್ನು ಸಂರಕ್ಷಿಸುವ ಸಂಕಲ್ಪ ಮಾಡಿದರೆ ಭವಿಷ್ಯದ ಪೀಳಿಗೆಗೆ ಹಸಿರು ಪರಿಸರ ಉಳಿಸಬಹುದು ಪ್ರಕೃತಿಯ ಉಳಿವೇ ಮಾನವ ಕುಲದ ಉಳಿವು ಎಂಬ ಅರಿವು ಎಲ್ಲರಲ್ಲಿ ಬರಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ಪ್ರಾಚಾರ್ಯ ಗುಂಡೇಕರ್ ರಾಮಚಂದ್ರರಾವ್ ವಹಿಸಿದ್ದರು. ಎನ್‌ಎಸ್‌ಎಸ್ ಘಟಕದ ಅಽಕಾರಿ ಹೊನ್ನಪ್ಪ ಎಂ.ಪಿ., ಉಪನ್ಯಾಸಕರಾದ ಗುರುಲಿಂಗಪ್ಪ ಸಾಗರ್, ಕಾಮಣ್ಣ ಜಿ.ಕೆ., ಶರಣು ಹೊಸಮನಿ, ನಿಂಗಣ್ಣ ಇತರರಿದ್ದರು.