ತಾಲೂಕಿನ ಹುದುಗೂರು ಕ್ಲಸ್ಟರ್ ವ್ಯಾಪ್ತಿಯ ಕಾಟನಕಲ್ಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ನೇತಾಜಿ ಯುವಕ ಸಂಘದಿಂದ ಹಸಿರು ಪರಿಸರ ನಿಮಾರ್ಣಕ್ಕಾಗಿ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿ, ಸಸಿಗಳನ್ನು ನೆಡುವುದಷ್ಟೇ ನಮ್ಮ ಗುರಿಯಲ್ಲ. ನೆಟ್ಟ ಪ್ರತಿಯೊಂದು ಸಸಿಯನ್ನೂ ಪೋಷಿಸಿ, ಹೆಮ್ಮರವಾಗಿ ಬೆಳೆಯುವವರೆಗೂ ನಿರಂತರ ನಿಗಾ ವಹಿಸುವುದು ಎಲ್ಲರ ಕರ್ತವ್ಯ. ಮುಂದಿನ ದಿನಗಳಲ್ಲೂ ಸಂಘಟನೆ ಹಲವು ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಳ್ಳಲಿದೆ ಎಂದರು.