ಪ್ರತಿಯೊಬ್ಬರೂ ಒಂದು ಸಸಿಯನ್ನಾದರು ನೆಡಿ

ಶಹಾಪುರ ತಾಲೂಕಿನ ಶೆಟ್ಟಿಕೇರಾದೊಡ್ಡಿ ಸರ್ಕಾರಿ ಶಾಲೆಯಲ್ಲಿ ಶುಕ್ರವಾರ ಸಸಿ ನೆಡುವ ಮೂಲಕ ಪರಿಸರ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಂತೋಷ ಆಚಾರ್ಯ, ಗಿರಿಗಾಂವ್ಕರ್ ಜಬ್ಬರ್, ಮಹೇಶ ವಾರದ, ಮೌನೇಶ ಆಚಾರ್ಯ, ನಿಂಗರೆಡ್ಡಿ ದೇವಿಕೇರಾ, ವಿನಾಯಕ, ರಿಯಾಜ್ ಅಹ್ಮದ್, ತಾಯಮ್ಮ ಇತರರಿದ್ದರು.
ಶಹಾಪುರ ತಾಲೂಕಿನ ಶೆಟ್ಟಿಕೇರಾದೊಡ್ಡಿ ಸರ್ಕಾರಿ ಶಾಲೆಯಲ್ಲಿ ಶುಕ್ರವಾರ ಸಸಿ ನೆಡುವ ಮೂಲಕ ಪರಿಸರ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಂತೋಷ ಆಚಾರ್ಯ, ಗಿರಿಗಾಂವ್ಕರ್ ಜಬ್ಬರ್, ಮಹೇಶ ವಾರದ, ಮೌನೇಶ ಆಚಾರ್ಯ, ನಿಂಗರೆಡ್ಡಿ ದೇವಿಕೇರಾ, ವಿನಾಯಕ, ರಿಯಾಜ್ ಅಹ್ಮದ್, ತಾಯಮ್ಮ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಟ್ರಸ್ಟ್ ಅಧ್ಯಕ್ಷ ಸಂತೋಷ ಆಚಾರ್ಯ ಸಲಹೆ
  • ಶೆಟ್ಟಿಕೇರಾದೊಡ್ಡಿ ಶಾಲೆಯಲ್ಲಿ ಪರಿಸರ ಜಾಗೃತಿ
ಗೋಗಿ : ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು ಪ್ರಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕನಿಷ್ಠ ಒಂದು ಸಸಿಯನ್ನಾದರು ನೆಟ್ಟು ಅದನ್ನು ಪೋಷಿಸುವ ಸಂಕಲ್ಪ ಮಾಡಬೇಕು ಎಂದು ಆಚಾರ್ಯ ಚಾರಿಟೇಬಲï ಟ್ರಸ್ಟ್ ಅಧ್ಯಕ್ಷ ಸಂತೋಷ ಆಚಾರ್ಯ ಹೇಳಿದರು.
ಶೆಟ್ಟಿಕೇರಾದೊಡ್ಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಂಕ್ರಪ್ಪ ವಿ.ಆಚಾರ್ಯ ಚಾರಿಟೇಬಲï ಟ್ರಸ್ಟ್ ಶುಕ್ರವಾರ ಹಮ್ಮಿಕೊಂಡ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪರಿಸರ ಮಾಲಿನ್ಯ, ಅರಣ್ಯ ನಾಶ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ಮಾನವ ಜೀವನ ಸಂಕಷ್ಟಕ್ಕೆ ಸಿಲುಕುತ್ತಿದೆ ಇಂತಹ ವೇಳೆ ವಿದ್ಯಾರ್ಥಿಗಳಲ್ಲಿ ಪರಿಸರ ಪ್ರe್ಞೆ ಬೆಳೆಸುವುದು ಬಹಳ ಅಗತ್ಯವಾಗಿದೆ ಎಂದರು.
ಶಾಲಾ ಹಂತದಲ್ಲಿಯೇ ಮಕ್ಕಳಲ್ಲಿ ಮರಗಳ ಮಹತ್ವ ಹಾಗೂ ಪರಿಸರ ಸಂರಕ್ಷಣೆ ಕುರಿತು ಅರಿವು ಮೂಡಿಸಿದರೆ ಮುಂದಿನ ಪೀಳಿಗೆ ಹಸಿರು ಪರಿಸರ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸಲಿದೆ ಎಂದು ಹೇಳಿದರು. ಮುಖ್ಯಗುರು ಗಿರಿಗಾಂವ್ಕರ್ ಜಬ್ಬರ್ ಮಾತನಾಡಿ, ಸಮಾಜದ ಅಭಿವೃದ್ಧಿ ಜತೆಗೆ ಪರಿಸರ ಸಂರಕ್ಷಣೆಯೂ ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ. ಮರಗಳನ್ನು ಬೆಳೆಸುವುದು ಕೇವಲ ಒಂದು ದಿನದ ಕಾರ್ಯಕ್ರಮವಾಗದೆ ಅವುಗಳನ್ನು ಪೋಷಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರೂ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಈ ವೇಳೆ ಶಾಲಾ ಆವರಣದಲ್ಲಿ ವಿವಿಧ ಜಾತಿಯ ಸಸಿಗಳನ್ನು ನೆಟ್ಟು ವಿದ್ಯಾರ್ಥಿಗಳಿಗೆ ಅವುಗಳ ಸಂರಕ್ಷಣೆ ಕುರಿತು ಮಾಹಿತಿ ನೀಡಲಾಯಿತು. ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯ ಪ್ರತಿe್ಞÉ ಸ್ವೀಕರಿಸಿ ತಾವು ನೆಟ್ಟ ಸಸಿಗಳನ್ನು ಪೋಷಿಸುವ ಸಂಕಲ್ಪ ಮಾಡಿದರು. ಮಹೇಶ ವಾರದ, ಮೌನೇಶ ಆಚಾರ್ಯ, ನಿಂಗರೆಡ್ಡಿ ದೇವಿಕೇರಾ, ವಿನಾಯಕ, ರಿಯಾಜ್ ಅಹ್ಮದ್, ತಾಯಮ್ಮ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net