ಅನೈತಿಕ ಚಟುವಟಕೆ ತಾಣವಾದ ತಂದುದಾಣಗಳು Bus stop

 ಪ್ರಯಾಣಿಕರ ತಂಗುದಾಣ Bus stop
ಪ್ರಯಾಣಿಕರ ತಂಗುದಾಣ Bus stop
Published on

ಪ್ರಮುಖ ಮುಖ್ಯಾಂಶಗಳು

  • ಬಿಸಿಲು&ಮಳೆಯಿಂದ ಪ್ರಯಾಣಿಕರು ಪರದಾಟ
ಬೂದಿಕೋಟೆ: ತಾಲೂಕಿನಾದ್ಯಂತ ಪ್ರಯಾಣಿಕರ ಉಪಯೋಗಕ್ಕಾಗಿ ನಿಮಾರ್ಣ Bus stop ಮಾಡಿರುವ ಪ್ರಯಾಣಿಕರ ತಂಗುದಾಣಗಳಿಗೆ ಸೂಕ್ತ ನಿರ್ವಹಣೆ ಇಲ್ಲದೆ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿವೆ.
ಸರ್ಕಾರಗಳು ಕೋಟ್ಯಂತರ ರೂ. ವೆಚ್ಚದಲ್ಲಿ ತಂಗುದಾಣ ನಿರ್ಮಿಸುತ್ತಿದೆಯಾದರೂ ಅವುಗಳ ನಿರ್ವಹಣೆಗೆ ಯಾವುದೇ ಇಲಾಖೆ ಅಧಿಕಾರಿಗಳು ಮುಂದಾಗದ ಕಾರಣ ಅವುಗಳು ಬಳಕೆಯಾಗದೆ ಮೂಲೆ ಗುಂಪಾಗುತ್ತಿವೆ. ಇದಕ್ಕೆ ಸಾ ಎಂಬಂತೆ ತಾಲೂಕಿನ ತಪ್ಪನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆರಮೇನಹಳ್ಳಿ ಗೇಟ್​ನಲ್ಲಿ ನಿರ್ಮಿಸಿರುವ ತಂಗುದಾಣ ಕುಡುಕರ ಅಡ್ಡೆಯಾಗಿರುದೇ ನಿದರ್ಶನವಾಗಿದೆ.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಾಹಿದ್​ ಅವರು 2019-&20ನೇ ಸಾಲಿನ ಕಟ್ಟಡ ದುರಸ್ತಿ ಯೋಜನೆಯಡಿ 4.6 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ತಂಗುದಾಣ ನಿರ್ಮಿಸಿದ್ದರು. ಅಧಿಕಾರಿಗಳು ತಂಗುದಾಣ ನಿರ್ವಹಣೆ ಮಾಡದ ಹಿನ್ನೆಲೆ ಸರ್ಕಾರದ ಅನುದಾನ ವ್ಯರ್ಥವಾಗುತ್ತಿದೆ.
ಬಿಸನತ್ತ ದೋಣಿ ಮಡುಗು ಮಾರ್ಗದ ಗುಂಡಾರ್ಹಳ್ಳಿ ಗೇಟ್​ ಮುಖ್ಯರಸ್ತೆಯಿಂದ ಅರ್ಧ ಕಿಮೀ ದೂರವಿರುವ ಕಾರಣ, ಬಸ್​ಗಾಗಿ ಕಾಯುವ ಪ್ರಯಾಣಿಕರು ಬಿಸಿಲು, ಮಳೆಯಲ್ಲಿ ನಿಂತು ತೊಂದರೆ ಅನುಭವಿಸಬಾರದು ಎಂದು ತಂಗುದಾಣ ನಿರ್ಮಿಸಲಾಗಿದೆ. ಗ್ರಾಮ ಪಂಚಾಯಿತಿ ಅಥವಾ ಸಂಬಂಧಪಟ್ಟ ಯಾವುದೇ ಇಲಾಖೆ ತಂಗುದಾಣ ನಿರ್ವಹಣೆಗೆ ಮುಂದಾಗದೇ ಇರುವುದರಿಮದ ಸುತ್ತಲೂ ಗಿಡ&ಗಂಟಿ ಬೆಳೆದು ನಿಂತಿವೆ. ಇದರಿಂದ ಪ್ರಯಾಣಿಕರು ತಂಗುದಾಣ ಬಳಸಲು ಹಿಂದೇಟು ಹಾಕುತ್ತಿದ್ದು, ರಾತ್ರಿಯಾಗುತ್ತಿದ್ದಂತೆ ಕುಡುಕರ ಅಡ್ಡೆಯಾಗಿ ಮಾರ್ಪಟ್ಟಿದೆ.
ತಂಗುದಾಣಗಳು ನಿರ್ವಹಣೆ ಇಲ್ಲದೆ ಹಾಳುಬಿದ್ದಿವೆ. ಅವುಗಳನ್ನು ಸ್ವಚ್ಛಗೊಳಿಸದಿರುವುದು, ಮುರಿದ ಆಸನ ಸರಿ ಪಡಿಸದಿರುವುದರಿಂದ ಸಾರ್ವಜನಿಕರು ಬಳಸಲು ಹಿಂಜರಿಯುತ್ತಿದ್ದಾರೆ.
ತಂಗುದಾಣದಲ್ಲಿ ಎಲ್ಲೆಂದರಲ್ಲಿ ಮದ್ಯದ ಪ್ಯಾಕೆಟ್​, ಪ್ಲಾಸ್ಟಿಕ್​ ಲೋಟದ ಜತೆ ಮಳೆ ನೀರು ಶೇಖರಣೆಯಾಗಿ ಗಬ್ಬುನಾರುತ್ತಿದೆ. ಲಕ್ಷಾಂತರ ರೂ. ಖರ್ಚು ಮಾಡಿ ನಿರ್ಮಿಸಿರುವ ತಂಗುದಾಣ ಗಬ್ಬು ನಾರುತ್ತಿರುವುದರಿಂದ ಸಾರ್ವಜನಿಕರು ಬೇಸರ ವ್ಯಕ್ತ ಪಡಿಸಿದ್ದಾರೆ.
ಇದು ಕೇವಲ ಒಂದು ತಂಗುದಾಣದ ಸಮಸ್ಯೆ ಅಲ್ಲ. ಬಹುತೇಕ ತಂಗುದಾಣಗಳ ಸ್ಥಿತಿ ಹೀಗೆ ಇದ್ದು, ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ತಂಗುದಾಣ ಸ್ವಚ್ಛಗೊಳಿಸಿ, ಜನಸಾಮಾನ್ಯರ ಉಪಯೋಗಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ರಾತ್ರಿ ವೇಳೆ ತಂಗುದಾಣಗಳು "ಮಿನಿ ಬಾರ್​" ಗಳಾಗಿ ಮಾರ್ಪಡುತ್ತಿವೆ. ಮದ್ಯದ ಬಾಟಲಿ, ಸಿಗರೇಟ್​ ತುಂಡುಗಳು ಮತ್ತು ತಿಂಡಿಯ ಪೊಟ್ಟಣ ಬಿದ್ದಿರುವುದು ಸಾಮಾನ್ಯ.
> ಪವನ್​
ಆರಮೇನಹಳ್ಳಿ
ತಂಗುದಾಣಗಳಲ್ಲಿ ದೀಪ ಮತ್ತು ಸಿಸಿಟಿವಿ ಕಣ್ಗಾವಲು ಇಲ್ಲದಿರುವುದು ಅಕ್ರಮ ಚಟುವಟಿಕೆ ನಡೆಸುವವರಿಗೆ ಅನುಕೂಲಕರವಾಗಿದೆ.
> ವಿನೋದ್​
ಬತ್ತಲಹಳ್ಳಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net