

ಪ್ರಮುಖ ಮುಖ್ಯಾಂಶಗಳು
ಅಧಿಸೂಚನೆಯಲ್ಲೇನಿದೆ?
ಅಧಿಸೂಚನೆಯ ಪ್ರಕಾರ, ಕಂದಾಯ ದಾಖಲೆಗಳ ಆಧಾರದ ಮೇಲೆ ರಾಜಕಾಲುವೆಗಳನ್ನು ಮೂರು ಭಾಗಗಳಾಗಿ ವಿಂಗಡಿಸಿ, ಅವುಗಳ ಎರಡೂ ಬದಿಗಳಲ್ಲಿ ಕಡ್ಡಾಯವಾಗಿ ಬಿಡಬೇಕಾದ ಕನಿಷ್ಠ ಬಫರ್ ವಲಯ ವ್ಯಾಪ್ತಿಯನ್ನು ನಿಗದಿಪಡಿಸಲಾಗಿದೆ. ಪ್ರಾಥಮಿಕ ರಾಜಕಾಲುವೆಗೆ (ಒಂದು ಕೆರೆಯಿಂದ ಮತ್ತೊಂದು ಕೆರೆಗೆ ಅಥವಾ ನದಿಗೆ ಮಳೆನೀರನ್ನು ಕೊಂಡೊಯ್ಯುವ ಕಾಲುವೆ) 15 ಮೀಟರ್, ದ್ವೀತಿಯ ರಾಜಕಾಲುವೆಗೆ (ಕೆರೆಗೆ ಅಥವಾ ಪ್ರಾಥಮಿಕ ರಾಜಕಾಲುವೆಗೆ ಮಳೆನೀರನ್ನು ಕೊಂಡೊಯ್ಯುವ ಕಾಲುವೆ) 10.00 ಮೀಟರ್, ತೃತೀಯ ರಾಜಕಾಲುವೆಗೆ (ದ್ವೀತಿಯ ರಾಜಕಾಲುವೆಗೆ ಮಳೆನೀರನ್ನು ಕೊಂಡೊಯ್ಯುವ ಕಾಲುವೆ) 5 ಮೀಟರ್ ಬಫರ್ ವಲಯವನ್ನು ಗುರುತಿಸಲಾಗಿದೆ. ಈ ಅಧಿಸೂಚನೆಯಲ್ಲಿ ಬರ್ ವಲಯದ ವ್ಯಾಪ್ತಿಯನ್ನು ಕಡಿಮೆ ಮಾಡಲಾಗಿದೆ ಎನ್ನುವುದು ಆಕ್ಷೇಪಣೆಗೆ ಕಾರಣವಾಗಿದೆ.