_1779120148896.webp?w=480&auto=format%2Ccompress&fit=max)
_1779120148896.webp?w=480&auto=format%2Ccompress&fit=max)
ವಿದ್ಯಾರ್ಥಿಗಳಿಗೆ ಸಂಕಷ್ಟ
ರಾಜ್ಯದ್ಯಂತ ಸುಮಾರು 1.20 ಕೋಟಿ ಮಂದಿ ಪ್ರತಿದಿನ ಸರ್ಕಾರಿ ಬಸ್ಗಳಲ್ಲಿ ಓಡಾಡುತ್ತಿದ್ದಾರೆ. ಶಕ್ತಿ ಯೋಜನೆಯಿಂದಾಗಿ ಅದರಲ್ಲಿ ಶೇ.60ರಷ್ಟು ಮಹಿಳೆಯರು, ವಿದ್ಯಾರ್ಥಿನಿಯರು ಇದ್ದಾರೆ. ಮುಷ್ಕರವನ್ನು ಮೇ 20ರಿಂದ ಆರಂಭಿಸಲು ಯೋಜಿಸಲಾಗಿದೆ. ಆದರೆ, ಮೇ 18ರಿಂದ 25ರ ತನಕ ಎಸ್ಸೆಸ್ಸೆಲ್ಲಿ ಪೂರಕ ಪರೀಕ್ಷೆಗಳು ನಡೆಯುತ್ತಿವೆ. ಮುಷ್ಕರ ನಡೆದರೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಕ್ಕೆ ತಲುಪಲು ಸಮಸ್ಯೆಯಾಗಲಿದೆ. ವೃದ್ಧರು, ದಿನಗೂಲಿ ನೌಕರರು, ರೋಗಿಗಳು ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ತೀವ್ರ ಸಮಸ್ಯೆಯಾಗಲಿದೆ ಎಂದು ಅರ್ಜಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.