ಛಾಯಾಗ್ರಾಹಕರಿಗೆ ಧೈರ್ಯ, ಸಾಹಸ ಇರಬೇಕು; ಸಚಿವ ರಾಮಲಿಂಗಾ ರೆಡ್ಡಿ ಸಲಹೆ

ಸ್ಪರ್ಧೆಯಲ್ಲಿ ವಿಜೇತರಾದ ಛಾಯಾಗ್ರಾಹಕರಿಗೆ ಸಚಿವ ರಾಮಲಿಂಗಾ ರೆಡ್ಡಿ ಬಹುಮಾನ ನೀಡಿ ಸನ್ಮಾನಿಸಿದರು. ಬಿ.ಎಲ್.ಶಂಕರ್, ಕೆ.ವಿ.ಪ್ರಭಾಕರ್, ಆಯೇಶಾ ಖಾನಂ ಮತ್ತಿತರರು ಉಪಸ್ಥಿತರಿದ್ದರು.
ಸ್ಪರ್ಧೆಯಲ್ಲಿ ವಿಜೇತರಾದ ಛಾಯಾಗ್ರಾಹಕರಿಗೆ ಸಚಿವ ರಾಮಲಿಂಗಾ ರೆಡ್ಡಿ ಬಹುಮಾನ ನೀಡಿ ಸನ್ಮಾನಿಸಿದರು. ಬಿ.ಎಲ್.ಶಂಕರ್, ಕೆ.ವಿ.ಪ್ರಭಾಕರ್, ಆಯೇಶಾ ಖಾನಂ ಮತ್ತಿತರರು ಉಪಸ್ಥಿತರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಛಾಯಾಗ್ರಾಹಕರಿಗೆ ಧೈರ್ಯ, ಸಾಹಸ ಇರಬೇಕು
  • ಜಲಸಂಪನ್ಮೂಲ ಸಚಿವ ರಾಮಲಿಂಗಾ ರೆಡ್ಡಿ ಸಲಹೆ
  • ರಾಷ್ಟ್ರೀಯ ಛಾಯಾಚಿತ್ರ ಪ್ರದರ್ಶನ, ಸ್ಪರ್ಧೆ ಹಾಗೂ ತರಬೇತಿ

ಬೆಂಗಳೂರು:ಮಾಧ್ಯಮದಲ್ಲಿಕೆಲಸ ಮಾಡುವ ಛಾಯಾಗ್ರಾಹಕರಿಗೆಧೈರ್ಯ ಮತ್ತು ಸಾಹಸ ಇರಬೇಕು.ಆಗಉತ್ತಮ ಛಾಯಾಚಿತ್ರಗಳು ದೊರೆಯುತ್ತವೆಎಂದು ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಸಲಹೆ ನೀಡಿದ್ದಾರೆ

ಮಾಧ್ಯಮಅಕಾಡೆಮಿ ಮತ್ತು ವಾರ್ತಾ ಮತ್ತುಪ್ರಚಾರ ಇಲಾಖೆ ಸಹಯೋಗದಲ್ಲಿಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿಹಮ್ಮಿಕೊಂಡಿದ್ದ ಎರಡು ದಿನಗಳಪತ್ರಿಕಾ ಛಾಯಾಗ್ರಾಹಕರ ರಾಷ್ಟ್ರಮಟ್ಟದಛಾಯಾಚಿತ್ರ ಪ್ರದರ್ಶನ ಮತ್ತುಸ್ಪರ್ಧೆ ಹಾಗೂ ತರಬೇತಿ ಕಾರ್ಯಾಗಾರದಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡುಮಾತನಾಡಿದರು.

ಜಗತ್ತಿನಎಲ್ಲ ಸ್ಥಳ ಮತ್ತು ಕೌತುಕಗಳನ್ನುಪ್ರತಿಯೊಬ್ಬರು ಹೋಗಿ ನೋಡುವುದಕ್ಕೆಸಾಧ್ಯವಿಲ್ಲ.ಅವುಗಳನ್ನುನೋಡಲು ಸಾಧ್ಯವಿರುವುದು ಫೋಟೋಗಳಲ್ಲಿಮಾತ್ರ.ಬಹಳಹಿಂದಿನಿಂದ ಅಂತಹ ವಿಷಯವಸ್ತುಗಳನ್ನುಸೆರೆಹಿಡಿದು ಜನರಿಗೆ ತೋರಿಸುವಕೆಲಸ ಛಾಯಾಗ್ರಹಕರು ಮಾಡುತ್ತಾಬಂದಿದ್ದಾರೆ. ಯುದ್ಧ,ಅತಿವೃಷ್ಟಿಮತ್ತಿತರ ಅಪಾಯದ ಸಂದರ್ಭಗಳಲ್ಲಿಛಾಯಾಚಿತ್ರವನ್ನು ತೆಗೆಯಲುಧೈರ್ಯ ಮತ್ತು ಸಾಹಸ ಇರಬೇಕಾಗುತ್ತದೆ.ಈನಿಟ್ಟಿನಲ್ಲಿ ಅಕಾಡೆಮಿ ತರಬೇತಿನೀಡುವ ಕಾರ್ಯಕ್ರಮ ಮಾಡಿದ್ದುಅರ್ಥಪೂರ್ಣ ಎಂದು ಸಚಿವರುಅಭಿಪ್ರಾಯಿಸಿದರು.

ಮುಖ್ಯಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದಹಿರಿಯ ಪತ್ರಕರ್ತ ಕೆ.ವಿ.ಪ್ರಭಾಕರಎಲ್ಲರ ಮುಖದಲ್ಲೂ ನಗು ತರಿಸುವಏಕೈಕ ವೃತ್ತಿ ಛಾಯಾಗ್ರಹಣ.ಪ್ರತಿಯೊಬ್ಬರಜೀವನದ ಹಳೆಯ ನೆನಪುಗಳನ್ನುಜೀವಂತವಾಗಿಡುವ ಶಕ್ತಿ ಫೋಟೋಗ್ರಾರ್‌ಗಳಿಗಿದೆ ಎಂದರು.

ಫೋಕಸ್ಆನ್ ನ್ಯೂಸ್ ಎಂಬ ಶೀರ್ಷಿಕೆಯಡಿನಡೆದ ರಾಷ್ಟ್ರೀಯ ಮಟ್ಟದ ಛಾಯಾಚಿತ್ರಸ್ಪರ್ಧೆಯಲ್ಲಿ ದೇಶದ ವಿವಿಧಭಾಗಗಳಿಂದ 220ಸ್ಪರ್ಧಿಗಳುಪಾಲ್ಗೊಂಡಿದ್ದರು.ಕೇರಳದಬಿನುರಾಜ್ ಪ್ರಥಮಸ್ಥಾನ,ಮುಂಬೈನಕುನಾಲ್ ಪಾಟೀಲ್ ದ್ವಿತೀಯ ಸ್ಥಾನ,ತೆಲಂಗಾಣದರಜನಿಕಾಂತ್ ತೃತೀಯಸ್ಥಾನಪಡೆದುಕೊಂಡರು.

ಕಾರ್ಯಕ್ರಮದಲ್ಲಿಮಾಹಿತಿ ಹಕ್ಕು ಆಯುಕ್ತೆ ಬಿ.ಆರ್.ಮಮತಾ,ಅಕಾಡೆಮಿಕಾರ್ಯದರ್ಶಿ ಡಾ.ಗಿರೀಶ್,ಸದಸ್ಯರುಗಳಾದಅಬ್ಬಾಸ್ ಮುಲ್ಲಾ,ಕಿರಣ್,ಮಮತಾ,ಕೆಯುಡಬ್ಲೂೃಜೆರಾಜ್ಯಾಧ್ಯಕ್ಷ ಶಿವಾನಂದ ತಗಡೂರುಮತ್ತಿತರರು ಪಾಲ್ಗೊಂಡಿದರು.

ಸಾವಿರ ಪದಗಳಿಂದ ವರ್ಣಿಸಲು ಸಾಧ್ಯವಾಗದ್ದನ್ನು ಒಂದು ೆಟೋ ತಿಳಿಸುತ್ತದೆ. ಕೃತಕ ಬುದ್ಧಿಮತ್ತೆ ಬಂದ ನಂತರ ಅಸಲಿ ಮತ್ತು ನಕಲಿ ತಿಳಿಯುತ್ತಿಲ್ಲ. ಛಾಯಾಗ್ರಾಹಕರು ತಮ್ಮ ಕೌಶಲ ಹಾಗೂ ತಂತ್ರಜ್ಞಾನಗಳೆರಡನ್ನು ಬಳಸಿಕೊಂಡು ೆಟೋ ತೆಗೆಯಬೇಕು.

— ಡಾ.ಬಿ.ಎಲ್.ಶಂಕರ್, ಚಿತ್ರಕಲಾ ಪರಿಷತ್ ಅಧ್ಯಕ್ಷ

ಸಮಾಜ ಮತ್ತು ಸರ್ಕಾರವನ್ನು ಜಾಗೃತಗೊಳಿಸುವಲ್ಲಿ ೆಟೋಗ್ರಾರ್‌ಗಳ ಪಾತ್ರ ಪ್ರಮುಖವಾಗಿದೆ. ಛಾಯಾಗ್ರಾಹಕರು ತಮ್ಮ ವೃತ್ತಿಯಲ್ಲಿ ಎಂದಿಗೂ ಕುತೂಹಲ ಮತ್ತು ನೈತಿಕತೆ ಕಳೆದುಕೊಳ್ಳಬಾರದು.

— ಆಯೇಶಾ ಖಾನಂ, ಮಾಧ್ಯಮ ಅಕಾಡೆಮಿ ಅಧ್ಯಕ್ಷೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net