ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ತೀವ್ರ ಉಸಿರಾಟದ ಸಮಸ್ಯೆ, ಸೈನೋಸಿಸ್ ಹಾಗೂ ತೀವ್ರ ದಣಿವಿನಿಂದ ಮಗು ಬಳಲಿತ್ತು. ಜತೆಗೆ ವೈದ್ಯಕೀಯ ತಪಾಸಣೆ ವೇಳೆ ಸ್ಯಾಚುರೇಶನ್ ಪ್ರಮಾಣ ಕೇವಲ ಶೇ.75 ಇತ್ತು. ನ.1ರಂದು ದಾಖಲಾದ ಮಗುವಿಗೆ ಅಗತ್ಯ ಪರೀಕ್ಷೆಗಳನ್ನು ನಡೆಸಿ ನ.10ರಂದು ತೆರೆದ ಹೃದಯ ಶಸ್ತ್ರಚಿಕಿತ್ಸೆ (ಟಿಒಎಫ್ ರಿಪೇರಿ- ಐಸಿಆರ್, ವಿಎಸ್‌ಡಿ ಕ್ಲೋಷರ್, ಆರ್‌ವಿಒಟಿ ರಿಸೆಕ್ಷನ್ ಮತ್ತು ಬಲ ಎಟ್ರಿಯಲ್ ಅಪೆಂಡೇಜ್ ಮರುನಿರ್ಮಾಣ) ನಡೆಸಲಾಯಿತು. ಚಿಕಿತ್ಸೆ ನಂತರ ಮಗುವಿನ ಆರೋಗ್ಯ ಸಂಪೂರ್ಣ ಸುಧಾರಿಸಿದ್ದು, ಬುಧವಾರ (ನ.26) ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು ಎಂದು ತಿಳಿಸಿದರು.