ಅಧಿಕಾರಿಗಳ ಬೆವರಿಳಿಸಿದ ಫಣೀಂದ್ರ

ಯಾದಗಿರಿ ನಗರದ ಲುಂಬಿನಿ ಉದ್ಯಾನವನಕ್ಕೆ ಶನಿವಾರ ಬೆಳಗ್ಗೆ ಕರ್ನಾಟಕ ಉಪ ಲೋಕಾಯುಕ್ತ ಕೆ.ಎನ್​.ಫಣೇಂದ್ರ ಭೇಟಿ ನೀಡಿದರು. ಜಿಲ್ಲಾ ಸಿವಿಲ್​ ನ್ಯಾಯಾಧೀಶ ಮರಿಯಪ್ಪ, ಲೋಕಾಯುಕ್ತ ಎಸ್​ಪಿ ಸಿದ್ದರಾಜು, ಎಸ್​ಪಿ ಪೃಥ್ವಿಕ್​ ಶಂಕರ ಇತರರಿದ್ದರು.
ಯಾದಗಿರಿ ನಗರದ ಲುಂಬಿನಿ ಉದ್ಯಾನವನಕ್ಕೆ ಶನಿವಾರ ಬೆಳಗ್ಗೆ ಕರ್ನಾಟಕ ಉಪ ಲೋಕಾಯುಕ್ತ ಕೆ.ಎನ್​.ಫಣೇಂದ್ರ ಭೇಟಿ ನೀಡಿದರು. ಜಿಲ್ಲಾ ಸಿವಿಲ್​ ನ್ಯಾಯಾಧೀಶ ಮರಿಯಪ್ಪ, ಲೋಕಾಯುಕ್ತ ಎಸ್​ಪಿ ಸಿದ್ದರಾಜು, ಎಸ್​ಪಿ ಪೃಥ್ವಿಕ್​ ಶಂಕರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಯಾದಗಿರಿ ಲುಂಬಿನಿ ಉದ್ಯಾನವನದ ಅವ್ಯವಸ್ಥೆ ಕಂಡು ಕಿಡಿ ಕಾರಿದ ಉಪ ಲೋಕಾಯುಕ್ತ
  • ಕಿಡಿ ಕಾರಿದ ಉಪ ಲೋಕಾಯುಕ್ತ ಕೆ.ಎನ್​.ಫಣೇಂದ್ರ
  • ಲುಂಬುನಿ ಉದ್ಯಾನವನ ಅವ್ಯವಸ್ಥೆ ಕಂಡು ದಂಗಾದರು
  • ಒಬ್ಬರ ಮೇಲೆ ಒಬ್ಬರ ಹಾಕಿ ಗೊಬ್ಬುರ ಬಂಡಿ ಹೊಡಿತ್ತಿರೇನ್ರಿ
  • ಎಲ್ಲೀರಿ ಡಿಸಿ,ಸಿಇಒ ...
ಯಾದಗಿರಿ: ಶನಿವಾರ ಬೆಳಗ್ಗೆ ಇಲ್ಲಿನ ಲುಂಬಿನಿ ಉದ್ಯಾನವನಕ್ಕೆ ಭೇಟಿ ನೀಡಿದ್ದ ಕರ್ನಾಟಕ ಉಪ ಲೋಕಾಯುಕ್ತ ಕೆ.ಎನ್​.ಫಣೀಂದ್ರ ಅವರು ಅಲ್ಲಿನ ಅವ್ಯವಸ್ಥೆ ಕಣ್ಣಾರೆ ಕಂಡು ಒಂದು ನಿಮಿಷ ದಂಗಾದರು. ನಂತರ ಪೌರಾಯುಕ್ತ ಸೇರಿ ಅಧಿಕಾರಿಗಳನ್ನು ಬೆವರಿಳಿಸಿದ ಘಟನೆ ನಡೆಯಿತು.
ನಿಗದಿತ ಅವಧಿಯಂತೆ ಬೆಳಗ್ಗೆ 8.15ಕ್ಕೆ ಆಗಮಿಸಿದ ಅವರು, ಅಲ್ಲಿನ ವಾಕಿಂಗ್​, ಯೋಗ ಮಾಡುತ್ತಿದ್ದ ಸಾರ್ವಜನಿಕರನ್ನು ಭೇಟಿ ಮಾಡಿ, ನೂರೆಂಟು ಸಮಸ್ಯೆ ಒಂದೋಂದಾಗಿಯೇ ಅನಾವರಣಗೊಂಡವು. ಸಮಸ್ಯೆಗಳನ್ನು ಕೇಳುತ್ತಿದ್ದಂತೆ ಕೆಂಡಮಂಡಲರಾದ ಫಣೀಂದ್ರ, ಎಲ್ಲಿ ಡಿಸಿ, ಜಿಪಂ ಸಿಇಒ, ಪೌರಾಯುಕ್ತ ಪ್ರಶ್ನಿಸಿದರು.
ಸಾಲದಕ್ಕೇ ದೂರವಾಣಿ ಮೂಲಕ ಪೌರಾಯುಕ್ತರೊಂದಿಗೆ ಮಾತನಾಡಿ ಏನ್ರಿ ಸಮಯದ ಕಿಮ್ಮತ್​ ಇಲ್ಲವಾ, ನಾನೇ ಬಂದಿನಿ, ನೀವು ಎಲ್ಲಿರಿ. ಅಮಾನತಿಗೆ ಆದೇಶ ಮಾಡ್ಲಾ, ಗಾರ್ಡನ್​ ಹಾಳೂರು ಕೊಂಪೆಯಾಗಿದೆ. ಯಾರ ಅಂಡರ್​ ಇದೇರಿ, ಬೇಗ ಬನ್ನಿ ಎಂದು ರೇಗಿದಾಗ ತಕ್ಷಣ ಪೌರಾಯುಕ್ತ ಉಮೇಶ ಚವ್ಹಾಣ್​ ಆಗಮಿಸಿದರು. ಮತ್ತೆ ಡಿಸಿ, ಸಿಇಒ ಎಲ್ಲಿ ಎಂದು ಕೇಳಿದರು. ಆಗ ಜಿಪಂ ಸಿಇಒ ಆಗಮಿಸಿದರು.
ಆದರೆ ಡಿಸಿ ಬರಲೇ ಇಲ್ಲ. ಸುಮಾರು 40 ನಿಮಿಷ ಲುಂಬಿನಿ ವನವೆಲ್ಲ ತಿರುಗಾಡಿದ ಅವರು ಏನ್ರಿ ಬಜೆಟ್​ ಬಂದಿಲ್ಲ, ಬಜೆಟ್​ ಇಲ್ಲ ಎಂತಲ್ಲೆ ಹೇಳುತ್ತಿರಿ ಅಲ್ಲ. ಸರ್ಕಾರ ಅನುದಾನ ಕೊಟ್ಟಿಲ್ಲವೇನು? ಹೇಳಿದ ಕೆಲಸ ಈಗಲೇ ಶುರು ಮಾಡಿ, ಸಂಜೆ ಹೊತ್ತಿಗೆ ಫೋಟೋ, ವಿಡಿಯೋ ಹಾಕಿ ಎಂದು ಪೌರಾಯುಕ್ತರಿಗೆ ಸೂಚಿಸಿದರು.
ಅಲ್ಲಿಂದ ಹೊರ ಬರುತ್ತಲ್ಲೆ ಪಕ್ಕದಲ್ಲಿದ್ದ ವಿವಿಧ ಜ್ಯೂಸ್​ ನೋಡಿದ ಫಣೀಂದ್ರ ಅವರು ನೆಲ್ಲಿಕಾಯಿ ಜ್ಯೂಸ್​ ಸವಿದರು. ಎಷ್ಟು ಹಣ ಎಂದು ಕೇಳಿ ಐವತ್ತು ರೂ. ನೀಡಿ ಅಲ್ಲಿಂದ ತೆರಳಿದರು. ಜಿಲ್ಲಾ ಸಿವಿಲ್​ ನ್ಯಾಯಾಧೀಶ ಮರಿಯಪ್ಪ, ಲೋಕಾಯುಕ್ತ ಎಸ್​ಪಿ ಸಿದ್ದರಾಜು, ಎಸ್​ಪಿ ಪೃಥ್ವಿಕ್​ ಶಂಕರ್​, ಜಿಪಂ ಸಿಇಒ ಲವೀಶ್​ ಒರ್ಡಿಯಾ, ಎಸಿ ಶ್ರೀಧರ ಗೋಟೂರ, ರಾಮಚಂದ್ರಪ್ಪ ಕಟ್ಟಿಮನಿ, ತಹಸೀಲ್ದಾರ್​ ಸುರೇಶ ಅಂಕಲಗಿ ಸೇರಿ ಇತರರಿದ್ದರು. ಸಿದ್ದುಗೌಡ ಕಾಮರೆಡ್ಡಿ ಹಾಗೂ ಇತರರು ಅಲ್ಲಿನ ಸಮಸ್ಯೆಗಳ ಬಗ್ಗೆ ಉಪಲೋಕಾಯುಕ್ತರ ಗಮನಕ್ಕೆ ತಂದರು.
ಇಷ್ಟು ಚನ್ನಾಗಿರುವ ಉದ್ಯಾನವನ ಯಾರು ಮೆಂಟೇನ್​ ಮಾಡುತ್ತಾರೆ ಎಂದು ಪ್ರಶ್ನಿಸುತ್ತಿದ್ದಂತೆ ಪೌರಾಯುಕ್ತರು, ಇದರ ಅಭಿವೃದ್ಧಿಗೆ 4 ಕೋಟಿ ರೂ. ಬಂದಿದೆ. ಇನ್ಮುಂದೆ ಕೆಲಸ ಆರಂಭಿಸುವುದಾಗಿ ಹೇಳಿದರು.
ಆರ್​ಟಿಒ ಕಚೇರಿಗೆ ಭೇಟಿ
ಜಿಲ್ಲಾ ಕೋರ್ಟ್​ನಲ್ಲಿನ ಕಾರ್ಯಕ್ರಮ ಮುಗಿಸಿ ನೇರವಾಗಿ ಆರ್​ಟಿಒ ಕಚೇರಿಗೆ ಆಗಮಿಸಿದ ಉಪ ಲೋಕಾಯುಕ್ತ ಕೆ.ಎನ್​.ಫಣೇಂದ್ರ ಅವರು ತಮ್ಮ ತಂಡದೊಂದಿಗೆ ಇಡೀ ಕಚೇರಿ ಜಾಲಾಡಿದರು. ಏನು ಕೇಳಿದರೂ ಯಾವುದಕ್ಕೂ ಸರಿ ಉತ್ತರ ಆರ್​ಟಿಒ ಕಚೇರಿ ಅಧಿಕಾರಿ, ಸಿಬ್ಬಂದಿಯಿಂದ ಬರಲಿಲ್ಲ. ಇದಕ್ಕೆ ಮತ್ತಷ್ಟು ಸಿಟ್ಟಾದ ಅವರು, ಏನ್ರಿ ಕಚೇರಿ ಎಂಬುವುದು ಮಾರುಕಟ್ಟೆಯ ಸಂತೆ ಮಾಡಿದ್ದಿರಿ. ದಾಖಲೆಗಳು ಸರಿ ಇಟ್ಟಿಲ್ಲ, ದೂರು ದಾಖಲಿಸಿ ಕ್ರಮಕ್ಕೆ ಶಿಫಾರಸ್ಸು ಮಾಡುವುದಾಗಿ ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net