ಪಿಜಿ ವೈದ್ಯಕೀಯ: 2ನೇ ಸುತ್ತಿನ ತಾತ್ಕಾಲಿಕ ಫಲಿತಾಂಶ ಪ್ರಕಟ

ಪಿಜಿ ವೈದ್ಯಕೀಯ: 2ನೇ ಸುತ್ತಿನ ತಾತ್ಕಾಲಿಕ ಫಲಿತಾಂಶ
ಪಿಜಿ ವೈದ್ಯಕೀಯ: 2ನೇ ಸುತ್ತಿನ ತಾತ್ಕಾಲಿಕ ಫಲಿತಾಂಶ
Published on

ಪ್ರಮುಖ ಮುಖ್ಯಾಂಶಗಳು

  • ಒಟ್ಟು 3,164 ಅಭ್ಯರ್ಥಿಗಳಿಗೆ ಈ ಸುತ್ತಿನಲ್ಲಿ ಸೀಟು ಹಂಚಿಕೆ ಮಾಡಿದ್ದು, ಸದರಿ ಪಟ್ಟಿಯನ್ನು ವೆಬ್ ಸೈಟ್‌ನಲ್ಲಿ ಪ್ರಕಟ
  • , ಎಂಸಿಸಿಯಲ್ಲಿ ಸೀಟು ಸಿಕ್ಕಿರುವವರು ಮೂಲ ದಾಖಲೆಗಳನ್ನು ಹಿಂಪಡೆಯಲು ಡಿ.24ರಂದು ಬೆಳಿಗ್ಗೆ 11 ಗಂಟೆವರೆಗೆ ಅವಕಾಶ
ಬೆಂಗಳೂರು:: ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ನ ಎರಡನೇ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶವನ್ನು ಪ್ರಕಟಿಸಿದ್ದು, ಎಂಸಿಸಿಯಲ್ಲಿ ಸೀಟು ಸಿಕ್ಕಿರುವವರು ಮೂಲ ದಾಖಲೆಗಳನ್ನು ಹಿಂಪಡೆಯಲು ಡಿ.24ರಂದು ಬೆಳಿಗ್ಗೆ 11 ಗಂಟೆವರೆಗೆ ಅವಕಾಶ ನೀಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.
ಒಟ್ಟು 3,164 ಅಭ್ಯರ್ಥಿಗಳಿಗೆ ಈ ಸುತ್ತಿನಲ್ಲಿ ಸೀಟು ಹಂಚಿಕೆ ಮಾಡಿದ್ದು, ಸದರಿ ಪಟ್ಟಿಯನ್ನು ವೆಬ್ ಸೈಟ್‌ನಲ್ಲಿ ಪ್ರಕಟಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ತಾತ್ಕಾಲಿಕ ಫಲಿತಾಂಶ ಪ್ರಕಟಣೆ ನಂತರ ಕೆಲವರು ಎಂಸಿಸಿಯಲ್ಲಿ ಸೀಟು ಸಿಕ್ಕಿದ್ದು, ಅಲ್ಲಿಯದೇ ಇಷ್ಟ ಎನ್ನುವವರು ಮೂಲ ದಾಖಲೆಗಳ ಸಮೇತ ಕೆಇಎ ಸೀಟು ಬಿಟ್ಟು ಹೊರ ಹೋಗುವುದಕ್ಕೆ ಅವಕಾಶ ನೀಡಲಾಗಿದೆ. ಇದಕ್ಕೆ ಕಟ್ಟಿರುವ ಶುಲ್ಕದಲ್ಲಿ 25 ಸಾವಿರ ರೂ. ಕಡಿತ ಮಾಡಿಕೊಳ್ಳಲಾಗುವುದು. ನಾಳೆ ಬೆಳಿಗ್ಗೆ 11 ಗಂಟೆಯೊಳಗೆ ಮೂಲ ದಾಖಲೆ ವಾಪಸ್ ಪಡೆದವರನ್ನು ಬಿಟ್ಟು ಹೊಸದಾಗಿ ಸೀಟು ಹಂಚಿಕೆ ಮಾಡಿ ಅಂತಿಮ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net