ನಗರದಲ್ಲಿ ವೈಟ್ ಟ್ಯಾಪಿಂಗ್ ರಸ್ತೆ ಕಾಮಗಾರಿ ನಡೆಯುತ್ತಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಕಾರ 140 ವಿಸ್ತರಣೆ ಆಗಬೇಕಾಗುತ್ತದೆ. ಆಗ ನಿಯಮದ ಪ್ರಕಾರ ರಸ್ತೆ ವಿಸ್ತರಣೆ ಸ್ವಾಭಾವಿಕವಾಗಿ ಮಾಡಬೇಕಾಗುತ್ತದೆ, ಜತೆಗೆ ಬಾಕ್ಸ್ ಚರಂಡಿ ನಿಮಾರ್ಣ ಮಾಡಿದಾಗ ಪಾದಚಾರಿಗಳು ಓಡಾಡಲು ಅನುಕೂಲವಾಗುತ್ತದೆ. ರಸ್ತೆ ವಿಸ್ತರಣೆ ಬಗ್ಗೆ ವರ್ತಕರು ಬೇಡ ಎಂದು ಹೇಳುತ್ತಿದ್ದಾರೆ. ಆದರೆ ಪಾದಚಾರಿಗಳು ಓಡಾಡಲು ಹಾಗೂ ಚರಂಡಿ ನಿಮಾರ್ಣ ಮಾಡಬೇಕಾಗಿದ್ದು, ಈ ಬಗ್ಗೆ ಇನ್ನೂ ಯಾವುದೇ ರೀತಿಯ ಆಲೋಚಿಸಿಲ್ಲ. ಸಾರ್ವಜನಿಕರು ಹಾಗೂ ವರ್ತಕರ ಜತೆ ಸಭೆ ಕರೆದು ಚರ್ಚೆ ನಡೆಸಿ ತೀಮಾರ್ನ ಕೈಗೊಳ್ಳಲಾಗುವುದು ಎಂದರು.