ವ್ಯಕ್ತಿತ್ವ ವೃದ್ಧಿಗೆ ಅಧ್ಯಯನ ಸಹಕಾರಿ

ಬೈಲಹೊಂಗಲದ ಸರ್ಕಾರಿ ಪದವಿಪೂರ್ವ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಡಾ.ಬಿ.ಆರ್​.ಅಂಬೇಡ್ಕರ್​ ಓದು ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಭಾಗ್ಯಶ್ರೀ ಹುಗ್ಗಿ, ವಿದ್ಯಾವತಿ ಭಜಂತ್ರಿ, ಡಾ.ಸಿ.ಬಿ.ಗಣಾಚಾರಿ ಇತರರಿದ್ದರು.
ಬೈಲಹೊಂಗಲದ ಸರ್ಕಾರಿ ಪದವಿಪೂರ್ವ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಡಾ.ಬಿ.ಆರ್​.ಅಂಬೇಡ್ಕರ್​ ಓದು ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಭಾಗ್ಯಶ್ರೀ ಹುಗ್ಗಿ, ವಿದ್ಯಾವತಿ ಭಜಂತ್ರಿ, ಡಾ.ಸಿ.ಬಿ.ಗಣಾಚಾರಿ ಇತರರಿದ್ದರು.
Published on
ಬೈಲಹೊಂಗಲ: ಕಾಲೇಜು ವಿದ್ಯಾರ್ಥಿಗಳು ಮೊಬೈಲ್​ ಬಳಕೆ ಕಡಿಮೆಗೊಳಿಸಿ ಓದಿನ ಕಡೆಗೆ ಒಲವು ತೋರಿಸಿ, ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಬೈಲಹೊಂಗಲ ನಗರಸಭೆ ಪೌರಾಯುಕ್ತೆ ಭಾಗ್ಯಶ್ರೀ ಹುಗ್ಗಿ ಸಲಹೆ ನೀಡಿದರು.
ಕನ್ನಡ ಮತ್ತು ಸಂಸತಿ ಇಲಾಖೆ ಹಾಗೂ ಬೈಲಹೊಂಗಲ ಸರ್ಕಾರಿ ಪದವಿಪೂರ್ವ ವಿದ್ಯಾಲಯ ಸಂಯುಕ್ತ ಆಶ್ರಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಡಾ.ಬಿ.ಆರ್​.ಅಂಬೇಡ್ಕರ್​ ಓದು ಕಾರ್ಯಕ್ರಮದಲ್ಲಿ ಮಾತನಾಡಿ, ಡಾ.ಬಿ.ಆರ್​.ಅಂಬೇಡ್ಕರ್​ ಅವರು ಬದುಕಿನ ದಿನಗಳನ್ನು ಬಹಳ ಕಷ್ಟ್ಟಕರವಾಗಿ ಎದುರಿಸಿ, ಶ್ರಮ ಪಟ್ಟು ಓದಿ ಭಾರತದ ಸಂವಿಧಾನ ರಚಿಸಿದರು ಎಂದರು.
ಕನ್ನಡ ಮತ್ತು ಸಂಸತಿ ಇಲಾಖೆ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ ಮಾತನಾಡಿ, ಡಾ.ಬಿ.ಆರ್​.ಅಂಬೇಡ್ಕರ್​ ಅವರನ್ನು ಸಂವಿಧಾನ ಶಿಲ್ಪಿಯಾಗಿ, ದಮನಿತ ವರ್ಗಗಳ ಸಬಲೀಕರಣದ ನೇತಾರರಾಗಿ ಕಂಡವರೇ ಹೆಚ್ಚು ಎಂದು ಹೇಳಿದರು. ಈ ಸಂದರ್ಭದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಭಾಷಣ, ಪ್ರಬಂಧ, ರಸಪ್ರಶ್ನೆ ಸ್ಪರ್ಧೆ ಆಯೋಜಿಸಿ ವಿಜೇತರಿಗೆ ಪ್ರಮಾಣಪತ್ರ, ಪುಸ್ತಕ ಬಹುಮಾನ ವಿತರಿಸಿದರು.
ಅಕ್ಕಮಹಾದೇವಿ ಮಹಿಳಾ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಸಿ.ಬಿ.ಗಣಾಚಾರಿ, ಉಪನ್ಯಾಸಕ ಬಸವರಾಜ ಪುರಾಣಿಕಮಠ, ಎಸ್​.ಆರ್​.ಕಲಹಾಳ, ನಾಗಪ್ಪ ಕುದುರಿಮೋತಿ, ಉಪನ್ಯಾಸಕರಾದ ಬಸವಣ್ಣ ಅಡಕಿ, ಎಂ.ಎಚ್​.ಪೆಂಟೇದ, ಸಂಗಮೇಶ ಕುಲಕರ್ಣಿ, ಬಸವರಾಜ ಕೊಳವಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net