ಅಂಗವಿಕಲ ಯುವತಿಯ ಗರ್ಭಕೋಶ ತೆಗೆದುಹಾಕಲು ಅನುಮತಿ| High court

High court
High court
Published on
ಬೆಂಗಳೂರು: ತೀವ್ರ ಸ್ವರೂಪದ ದೈಹಿಕ ಮತ್ತು ಬೌದ್ಧಿಕ ಅಂಗವಿಕಲತೆಯಿಂದ ಬಳಲುತ್ತಿರುವ 23 ವರ್ಷದ ಯುವತಿಯ ಗರ್ಭಕೋಶವನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆದುಹಾಕಲು ಆಕೆಯ ಪಾಲಕರಿಗೆ ಅನುಮತಿ ನೀಡಿ ಹೈಕೋರ್ಟ್​ ಆದೇಶಿಸಿದೆ. 
ಯುವತಿಯ ಪಾಲಕರು ಸಲ್ಲಿಸಿದ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ಸೂರಜ್​ ಗೋವಿಂದರಾಜ್​ ಅವರಿದ್ದ ಏಕಸದಸ್ಯ ನ್ಯಾಯಪೀಠ, ಈ ತೀರ್ಪು ನೀಡಿದೆ. ಯುವತಿಯ ವೈದ್ಯಕಿಯ ಅಗತ್ಯಗಳನ್ನು ಉಲ್ಲೇಖಿಸಿರುವ ನ್ಯಾಯಪೀಠ, ಈ ಪ್ರಕ್ರಿಯೆಯು ಕೇವಲ ಅಂಗವೈಕಲ್ಯದ ಕಾರಣಕ್ಕಾಗಿ ಅಲ್ಲ, ಬದಲಿಗೆ ಆಕೆಯ ಆರೋಗ್ಯ ಸಮಸ್ಯೆ ನಿವಾರಣೆ, ವೈಯಕ್ತಿಕ ನೈರ್ಮಲ್ಯ ಮತ್ತು ದೀರ್ಕಾಲದ ನತೆಯಿಂದ ಕೂಡಿದ ಜೀವನಕ್ಕಾಗಿ ಅನಿವಾರ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದೆ.
ಸಂತಾನೋತ್ಪತ್ತಿ ಹಕ್ಕುಗಳು ಸಂವಿಧಾನ ಖಾತರಿ ಪಡಿಸಿರುವ ಜೀವಿಸುವ ಮತ್ತು ವ್ಯಕ್ತಿಗತ ಸ್ವಾತಂತ್ರ್ಯದ ಅಡಿಯಲ್ಲಿ ಬರುತ್ತದೆ. ಅಂಗವಿಕಲತೆಯ ಕಾರಣದಿಂದ ಈ ಹಕ್ಕುಗಳನ್ನು ನಿರಾಕರಿಸಲು ಸಾಧ್ಯವಿಲ್ಲ. ಗರ್ಭಕೋಶ ತೆಗೆದುಹಾಕುವ ಶಸ್ತ್ರಚಿಕಿತ್ಸೆಗೆ ಮಹಿಳೆಯ ಪ್ರಜ್ಞಾಪೂರ್ವಕ ಒಪ್ಪಿಗೆ ಅಗತ್ಯವಾಗಿದೆ. ಆದರೆ, ಈ ಪ್ರಕರಣದಲ್ಲಿ ಯುವತಿಯು ತೀವ್ರ ಬುದ್ಧಿಮಾಂದ್ಯತೆಯಿಂದ ಬಳಲುತ್ತಿದ್ದಾಳೆ. ಆಕೆಗೆ ವೈದ್ಯಕಿಯ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಥವಾ ಒಪ್ಪಿಗೆ ನೀಡುವ ಬೌದ್ಧಿಕ ಸಾಮರ್ಥ್ಯವೇ ಇಲ್ಲದಿರುವುದನ್ನು ವೈದ್ಯಕಿಯ ಮಂಡಳಿ ದೃಢಪಡಿಸಿದೆ. ಆದ್ದರಿಂದ ನ್ಯಾಯಾಲಯವೇ ಆಕೆಯ ರಕ್ಷಕನ ಸ್ಥಾನದಲ್ಲಿ ನಿಂತು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತೀರ್ಪಿನಲ್ಲಿ ಸ್ಪಷ್ಟಪಡಿಸಲಾಗಿದೆ.
ತಮ್ಮ ಮಗಳು 23 ವರ್ಷದವಳಾಗಿದ್ದರೂ, ಆಕೆಯ ಬೌದ್ಧಿಕ ಮತ್ತು ಸಾಮಾಜಿಕ ವಿಕಾಸವು 3ರಿಂದ 5 ವರ್ಷದ ಮಗುವಿನ ಮಟ್ಟದಲ್ಲಿದೆ. ಆಕೆಗೆ ತನ್ನ ಋತುಚಕ್ರದ ಅವಧಿಯಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಆಕೆಗೆ ಪದೇ ಪದೇ ಸೋಂಕು, ಜ್ವರ ಮತ್ತು ಇತರ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿವೆ. ತಮಗೆ ವಯಸ್ಸಾಗುತ್ತಿರುವುದರಿಂದ ಭವಿಷ್ಯದಲ್ಲಿ ಮಗಳನ್ನು ಆರೈಕೆ ಮಾಡುವುದು ಕಷ್ಟಸಾಧ್ಯ ಎಂದು ಆತಂಕ ತೋಡಿಕೊಂಡಿದ್ದ ಪಾಲಕರು ಗರ್ಭಕೋಶ ತೆಗೆದುಹಾಕುವ ಶಸ್ತ್ರಚಿಕಿತ್ಸೆಗೆ ಅನುಮತಿ ಕೋರಿದ್ದರು.

ವೈದ್ಯಕಿಯ ಮಂಡಳಿ ವರದಿ:

ಪಾಲಕರ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಪೀಠ, ಆಸ್ಪತ್ರೆಯೊಂದಕ್ಕೆ ವೈದ್ಯಕಿಯ ಪರೀೆ ನಡೆಸಲು ಶಿಾರಸು ಮಾಡಿತ್ತು. ತಜ್ಞ ವೈದ್ಯರನ್ನೊಳಗೊಂಡ ಮಂಡಳಿಯು ಯುವತಿಯನ್ನು ಪರೀಸಿ ವರದಿ ನೀಡಿತ್ತು. ಯುವತಿಯು ಪಾರ್ಶ್ವವಾಯು, ಬುದ್ಧಿಮಾಂದ್ಯತೆ, ಫಿಟ್ಸ್​ ಸಮಸ್ಯೆಯಿಂದ ಬಳಲುತ್ತಿದ್ದು, ಆಕೆಗೆ ಶೇ. 75ರಷ್ಟು ಕಾಯಂ ಅಂಗವೈಕಲ್ಯವಿದೆ ಎಂದು ವರದಿ ದೃಢಪಡಿಸಿತ್ತು. ಅಲ್ಲದೆ, ಆಕೆಗೆ ಗರ್ಭಕೋಶ ತೆಗೆಯುವ ಶಸ್ತ್ರಚಿಕಿತ್ಸೆ ಮಾಡುವುದು ಸೂಕ್ತ ಎಂದು ಶಿಫಾರಸು ಮಾಡಿತ್ತು. ಇದನ್ನು ಹೈಕೋರ್ಟ್​ ಪರಿಗಣಿಸಿದೆ.
⚠️

ಅಗತ್ಯ ಸೌಲಭ್ಯ ಒದಗಿಸಲು ಸೂಚನೆ 

ಆಸ್ಪತ್ರೆಯ ವೈದ್ಯಕಿಯ ಅಧೀಕ್ಷಕರು ಶಸ್ತ್ರಚಿಕಿತ್ಸೆಗೆ ಅಗತ್ಯವಿರುವ ಎಲ್ಲ ಸೂಕ್ತ ವ್ಯವಸ್ಥೆಗಳನ್ನು ಮಾಡಬೇಕು. ಶಸ್ತ್ರಚಿಕಿತ್ಸೆಗೆ ಮೊದಲು ಮತ್ತು ನಂತರ ಯುವತಿಗೆ ಅಗತ್ಯವಿರುವ ಮಾನಸಿಕ ಬೆಂಬಲ, ಆಪ್ತಸಮಾಲೋಚನೆ ಹಾಗೂ ಪುನರ್ವಸತಿ ಸೇವೆಗಳನ್ನು ಒದಗಿಸಬೇಕು. ಶಸ್ತ್ರಚಿಕಿತ್ಸೆ ನಂತರ ಯುವತಿಯ ಆರೋಗ್ಯ ಚೇತರಿಕೆಯ ಕುರಿತು 8 ವಾರಗಳ ಒಳಗಾಗಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ನ್ಯಾಯಪೀಠ ನಿರ್ದೇಶನ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net