ಅಂಗವಿಕಲರಲ್ಲಿದೆ ವಿಶೇಷ ಸಾಮರ್ಥ್ಯ

ಗುರುಮಠಕಲ್‌ನಲ್ಲಿ ಎಪಿಡಿ ಸಂಸ್ಥೆಯಿAದ ಗುರುವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅಂಗವಿಕಲರಿಗೆ ಸಾಧನ ಸಲಕರಣೆ ವಿತರಿಸಲಾಯಿತು. ಡಾ.ನೀಲಾಂಬಿಕಾ, ವಿರುಪಾಕ್ಷಿ ಮಾಲಿಪಾಟೀಲ್ ಇತರರಿದ್ದರು.
ಗುರುಮಠಕಲ್‌ನಲ್ಲಿ ಎಪಿಡಿ ಸಂಸ್ಥೆಯಿAದ ಗುರುವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅಂಗವಿಕಲರಿಗೆ ಸಾಧನ ಸಲಕರಣೆ ವಿತರಿಸಲಾಯಿತು. ಡಾ.ನೀಲಾಂಬಿಕಾ, ವಿರುಪಾಕ್ಷಿ ಮಾಲಿಪಾಟೀಲ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ದೈಹಿಕ ಸವಾಲುಗಳನ್ನು ಮೀರಿ ನಿಲ್ಲುವ ಇವರಲ್ಲಿ ಮಾನಸಿಕ ಸ್ಥೈರ್ಯ ಮತ್ತು ಕಠಿಣ ಪರಿಶ್ರಮದ ಗುಣಗಳು ಅತ್ಯಧಿಕವಾಗಿರುತ್ತದೆ.
ಗುರುಮಠಕಲ್: ಅಂಗವಿಕಲರು ದುರ್ಬಲರಲ್ಲ ಅವರೂ ಸಬಲರು. ಅವರಲ್ಲೂ ವಿಶೇಷ ಸಾಮರ್ಥ್ಯವಿರುತ್ತದೆ ಎಂದು ಎಪಿಡಿ ಸಂಸ್ಥೆಯ ಡಾ.ನೀಲಾಂಬಿಕಾ ಹೇಳಿದರು.
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಿ ಅಸೋಸಿಯೇಷನ್ ಆ-ï ಪೀಪಲ್ ವಿತ್ ಡಿಸೆಬಿಲಿಟಿ (ಎಪಿಡಿ) ಸಂಸ್ಥೆಯಿAದ ಅಂಗವಿಕಲರಿಗೆ ಸಾಧನ ಸಲಕರಣೆ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂಗವಿಕಲರು ತಮ್ಮ ಸಾಮರ್ಥ್ಯವನ್ನು ಬಳಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರುವ ಮೂಲಕ ಗೌರವಯುವವಾಗಿ ಬಾಳಬೇಕು. ಇತ್ತೀಚಿನ ದಿನಗಳಲ್ಲಿ ಅಂಗವಿಕಲರು ಎಲ್ಲ ರಂಗಗಳಲ್ಲೂ ತಮ್ಮ ಸಾಮರ್ಥ್ಯ ತೋರಿಸುತ್ತಿದ್ದಾರೆ ಎಂದರು.
ಗಡಿ ಭಾಗದ ಗುರುಮಠಕಲ್ ತಾಲೂಕಿನಾದ್ಯಂತ ಎಪಿಡಿ ಸಂಸ್ಥೆ ಅಂಗವಿಕಲರ ಆರೋಗ್ಯ, ಶಿಕ್ಷಣ, ಜೀವನೋಪಾಯ ಮತ್ತು ಸಾಮಾಜಿಕ ಸಬಲೀಕರಣಕ್ಕಾಗಿ ಕಳೆದ ನಾಲ್ಕು ವರ್ಷದಿಂದ ಶ್ರಮಿಸುತ್ತಿದೆ ಎಂದರು. ವಿವಿಧ ಗ್ರಾಮಗಳಿಂದ ಬಂದಿರುವ ವಿಕಲಾಂಗರಿಗೆ ಸಿಪಿ ಚೇರ್, ಸ್ಟಾಂಡಿಗ್ ಪ್ರಮ್, ರೋಲೆಟರ್, ಸ್ಟಿಕ್, ವಾಕರ್, ಗೇಟರ್ಸ್ ಸೇರಿ ಇತರೆ ಸಲಕರಣೆಗಳು ೪೬ ವಿಕಲಾಂಗರಿಗೆ ವಿತರಿಸಲಾಯಿತು.
ಈ ವೇಳೆ ತಾಲೂಕ ಸಂಯೋಜಕ ವಿರುಪಾಕ್ಷಿ ಮಾಲಿಪಾಟೀಲ್, ತಾಲೂಕು ಅರ್‌ಪಿಡಿ ಟಾಸ್ಕ್ ಪೊರ್ಸ್ನ ಆಧ್ಯಕ್ಷ ಸಿದ್ದನಗೌಡ ನಜರಪುರ, ಎಪಿಡಿ ಸಂಸ್ಥೆಯ ತಾಂತ್ರಿಕ ವಿಭಾಗದ ರಷ್ಮಿತಾ, ಸುರೇಶ್, ಸತೀಸ್, ಅತೀಶಕುಮಾರ, ವೆಂಕಟೇಶ, ಅಂಬಿಕಾ, ಶಿಲ್ಪಾ ಎಂ., ಶಿಲ್ಪಾ ಎಸ್, ರೇಷ್ಮಾ, ಸುರೇಶ, ಗೌರಮ್ಮ, ಸವಿತಾ, ಲಕ್ಷೀ, ಯಲ್ಲಪ್ಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net