ಭಾನುವಾರ ಸಂಜೆ 6 ಬೀಸಿದ ಗಾಳಿಗೆ ಇಲ್ಲಿನ ಬಸವೇಶ್ವರನಗರದ ಉದ್ಯಾನವನದ ಬಳಿಯಿರುವ ಸುಮಾರು 25 ವರ್ಷಗಳ ಹಳೆಯದಾದ, 40 ಅಡಿ ಉದ್ದದ ಸಿಲ್ವರ್ ಮರವೊಂದುಬುಡಸಮೇತ ವಾಲಿದೆ. ವಿದ್ಯುತ್ ಕಂಬ, ರಸ್ತೆ ಹಾಗೂ ಮನೆಗಳ ಮೇಲೆ ಯಾವುದೇ ಕ್ಷಣದಲ್ಲಾದರೂ ಬಿದ್ದು ಅನಾಹುತ ಸೃಷ್ಟಿಸುವ ಭೀತಿ ಎದುರಾಗಿದೆ. ಆದರೆ, ಸಾರ್ವಜನಿಕರ ಪ್ರಾಣ ಮತ್ತು ಆಸ್ತಿ ರಸಬೇಕಾದ ಅರಣ್ಯ ಇಲಾಖೆ ಮಾತ್ರ ಈ ವಿಷಯದಲ್ಲಿ ಬೇಜವಾಬ್ದಾರಿತನ ಪ್ರದರ್ಶಿಸುತ್ತಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.