ತ್ವರಿತ ನ್ಯಾಯದಾನದಿಂದ ಜನರಿಗೆ ಅನುಕೂಲ

ಪಿರಿಯಾಪಟ್ಟಣ ನ್ಯಾಯಾಲಯ ಆವರಣದಲ್ಲಿರುವ ವಕೀಲರ ಸಂಘದ ಇ-ಲೈಬ್ರರಿ ಹಾಗೂ ವಾಹನ ನಿಲುಗಡೆ ಕಾಮಗಾರಿಗೆ ಶಾಸಕ ಕೆ.ವೆಂಕಟೇಶ್ ಚಾಲನೆ ನೀಡಿ ಮಾತನಾಡಿದರು. ವಕೀಲರ ಸಂಘದ ಅಧ್ಯಕ್ಷ ಧನಪಾಲ್, ನ್ಯಾಯಾಧೀಶರಾದ ಎಂ.ರಾಜು, ಧನುರಾಜ್, ಎ.ಎಸ್.ವಿದ್ಯಾ ಇತರರು ಇದ್ದರು.
ಪಿರಿಯಾಪಟ್ಟಣ ನ್ಯಾಯಾಲಯ ಆವರಣದಲ್ಲಿರುವ ವಕೀಲರ ಸಂಘದ ಇ-ಲೈಬ್ರರಿ ಹಾಗೂ ವಾಹನ ನಿಲುಗಡೆ ಕಾಮಗಾರಿಗೆ ಶಾಸಕ ಕೆ.ವೆಂಕಟೇಶ್ ಚಾಲನೆ ನೀಡಿ ಮಾತನಾಡಿದರು. ವಕೀಲರ ಸಂಘದ ಅಧ್ಯಕ್ಷ ಧನಪಾಲ್, ನ್ಯಾಯಾಧೀಶರಾದ ಎಂ.ರಾಜು, ಧನುರಾಜ್, ಎ.ಎಸ್.ವಿದ್ಯಾ ಇತರರು ಇದ್ದರು.
Published on

* ಶಾಸಕ ಕೆ.ವೆಂಕಟೇಶ್ ಅಭಿಮತ

* ಕೋರ್ಟ್ ಆವರಣದಲ್ಲಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ
ವಿಜಯವಾಣಿ ಸುದ್ದಿಜಾಲ ಪಿರಿಯಾಪಟ್ಟಣ
ನ್ಯಾಯಾಲಯಕ್ಕೆ ಬರುವ ಸಾರ್ವಜನಿಕರಿಗೆ ತ್ವರಿತಗತಿಯಲ್ಲಿ ನ್ಯಾಯದಾನವಾದರೆ ಮಾತ್ರ ಅವರಿಗೆ ಅನುಕೂಲವಾಗಲಿದೆ ಎಂದು ಶಾಸಕ ಕೆ.ವೆಂಕಟೇಶ್ ಅಭಿಪ್ರಾಯಪಟ್ಟರು.
ಪಟ್ಟಣದ ನ್ಯಾಯಾಲಯ ಆವರಣದಲ್ಲಿರುವ ವಕೀಲರ ಸಂಘದ ಇ-ಲೈಬ್ರರಿ ಹಾಗೂ ವಾಹನ ನಿಲುಗಡೆ ಕಾಮಗಾರಿಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.
ನ್ಯಾಯಾಲಯ ದೇವಾಲಯವಿದ್ದಂತೆ ಇಲ್ಲಿ ಎಲ್ಲ ವರ್ಗದ ಜನರು ವಿವಿಧ ಪ್ರಕರಣಗಳಲ್ಲಿ ಸಿಕ್ಕಿ ಹಾಕಿಕೊಂಡು ನ್ಯಾಯಾಲಯದ ಮೆಟ್ಟಲೇರುವುದು ಸಹಜ. ಆದರೆ ಸತ್ಯ,ಅಸತ್ಯದ ಪರಾಮರ್ಶೆ ನಡೆಸಿ ನ್ಯಾಯ ಕೊಡಿಸುವುದು ವಕೀಲರ ಹಾಗೂ ನ್ಯಾಯಾಧೀಶರ ಗುರುತರ ಜವಾಬ್ದಾರಿ ಎಂದರು.
ಈಗ ನನ್ನ ಅವಧಿಯಲ್ಲಿ ಈ ನ್ಯಾಯಾಲಯಕ್ಕೆ 10 ಲಕ್ಷ ರೂ. ಅನುದಾನ ನೀಡಿದ್ದೇನೆ. ಹೆಚ್ಚುವರಿ ಕೆಲಸಕ್ಕಾಗಿ ಇನ್ನೂ 20 ಲಕ್ಷ ರೂ. ಅನ್ನು ವಕೀಲರು ಬೇಡಿಕೆಯಿಟ್ಟಿದ್ದು, ಪೂರ್ಣ ವಿವರದೊಂದಿಗೆ ಮನವಿ ನೀಡಿದರೆ ಶೀಘ್ರ ಈಡೇರಿಸಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.
ವಕೀಲರ ಸಂಘದ ಅಧ್ಯಕ್ಷ ಧನಪಾಲ್ ಮಾತನಾಡಿ, ನ್ಯಾಯಾಲಯದ ಕಟ್ಟಡ ಮತ್ತು ಮೂಲಸೌಕರ್ಯದ ಅಭಿವೃದ್ಧಿಗೆ ಹಾಗೂ ವಕೀಲರ ಭವನ ನಿರ್ಮಾಣಕ್ಕೆ ಶಾಸಕ ಕೆ.ವೆಂಕಟೇಶ್ ಅವರ ಕೊಡುಗೆಯಿದ್ದು, ಸಂಘಕ್ಕೆ ಪೀಠೋಪಕರಣಗಳ ಖರೀದಿಗಾಗಿ ವೈಯಕ್ತಿಕವಾಗಿ ಕೊಡುಗೆ ನೀಡಿದ್ದಾರೆ. ಇವರ ಆಡಳಿತಾವಧಿಯಲ್ಲಿ ನ್ಯಾಯಾಲಯ ಹಾಗೂ ವಕೀಲರ ಸಂಘದ ಅಭಿವೃದ್ಧಿಗೆ ನಿರಂತರವಾಗಿ ಅನುದಾನ ಮತ್ತು ಸಹಕಾರ ನೀಡಿದ್ದಾರೆ ಎಂದರು.
ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಎಂ.ರಾಜು, ಪ್ರಧಾನ ಸಿವಿಲ್ ನ್ಯಾಯಾಧೀಶ ಧನುರಾಜ್, ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಎ.ಎಸ್.ವಿದ್ಯಾ, ಸಂಘದ ಕಾರ್ಯದರ್ಶಿ ಶಂಕರ್, ಖಜಾಂಚಿ ಹರೀಶ್, ಜಂಟಿ ಕಾರ್ಯದರ್ಶಿ ರಘುರಾಮ್, ಗುರುಪ್ರಸಾದ್, ಉಪಾಧ್ಯಕ್ಷ ಚಂದ್ರೇಗೌಡ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net