ಉತ್ತರ ಕರ್ನಾಟಕದ ಹೆಮ್ಮೆಯ ಮಂಡಾಳು ಒಗ್ಗರಣೆ, ಮಿರ್ಚಿ ಬಜ್ಜಿ, ಬದನೆಕಾಯಿ ಬಜ್ಜಿ ಹಾಗೂ ಸಂಡಿಗೆಗಳ ಮೊರೆತ ಒಂದೆಡೆಯಾದರೆ, ಫಾಸ್ಟ್ ಫುಡ್ ಪ್ರಿಯರಿಗಾಗಿ ಗೋಬಿ ಮಂಚೂರಿ, ನೂಡಲ್ಸ್ ಮತ್ತು ಪಾಪ್‌ಕಾರ್ನ್‌ಗಳ ಘಮಲು ಹರಡಿತ್ತು. ವಿವಿಧ ಹಣ್ಣುಗಳ ತಾಜಾ ಜ್ಯೂಸ್ ಹಾಗೂ ಆಂಧ್ರ ಶೈಲಿಯ ಸಿಹಿತಿಂಡಿಗಳು ಜನರ ನಾಲಿಗೆಯ ರುಚಿ ಹೆಚ್ಚಿಸಿದವು.