ಚಿಕ್ಕಬಳ್ಳಾಪುರದಿಂದ ಬರುವ ಬಸ್ಸುಗಳು ವಿಜಯಪುರದ ಮೂಲಕ ದೇವನಹಳ್ಳಿ, ಯಲಹಂಕ, ಬೆಂಗಳೂರು ಸೇರಿ ಹಲವೆಡೆ ಹೋಗುವುದಕ್ಕಾಗಿ ಸುತ್ತಮುತ್ತಲಿನ ಊರುಗಳಿಂದ ನಿತ್ಯ ನೂರಾರು ಜನರು ವೆಂಕಟಗಿರಿಕೋಟೆ ಕ್ರಾಸ್ಗೆ ಬರುತ್ತಾರೆ. ಆದರೆ, ಸಾರಿಗೆ ಬಸ್ಗಳು ಇಲ್ಲಿ ನಿಲ್ಲಿಸುವುದಿಲ್ಲ. ಬಸ್ಸುಗಳಲ್ಲಿ ಪ್ರಯಾಣಿಕರ ಸಂಖ್ಯೆ ಜಾಸ್ತಿಯಿದೆ, ಖಾಲಿಯಿಲ್ಲ ಎಂದು ಹೊರಟು ಹೋಗುತ್ತಾರೆ. ಇದರಿಂದ ಪರೀಕ್ಷೆಗಳಿಗೆ ತೆರಳುವ, ನಿಗದಿತ ಸಮಯಕ್ಕೆ ಶಾಲಾ ಕಾಲೇಜುಗಳಿಗೆ ಹೋಗಲು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ.