ಕಾರು ಡಿಕ್ಕಿಯಾಗಿ ಪಾದಚಾರಿಗೆ ಗಾಯ

Pedestrian injured in car collision
Pedestrian injured in car collision
Published on
ಚಿಂತಾಮಣಿ: ನಗರದ ಬೆಂಗಳೂರು ರಸ್ತೆಯ ಬ್ಯಾಂಕ್​ ಬಳಿ ಭಾನುವಾರ ಬೆಳಗ್ಗೆ ಕಾರು ಡಿಕ್ಕಿಯಾಗಿ ಪಾದಚಾರಿಗೆ ಗಾಯಗೊಂಡಿದ್ದಾರೆ. ನಗರದ ಎನ್​ಎನ್​ಟಿ ರಸ್ತೆಯ ನಿವಾಸಿ ನಂಜುಂಡಾಚಾರಿ(55) ಗಾಯಾಳು.
ಸೆಕ್ಯೂರಿಟಿ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಕಾರು ಡಿಕ್ಕಿಯಾಗಿದೆ. ಗಾಯಾಳನ್ನು ಸಾರ್ವಜನಿಕರು ಉಪಚರಿಸುವಾಗ ಕಾರಿನ ಚಾಲಕ ಪರಾರಿಯಾಗಲು ಯತ್ನಿಸಿದ್ದು, ಈ ವೇಳೆ ಜನರು ಬೈಕ್​ನಲ್ಲಿ ಹಿಂಬಾಲಿಸಿದ್ದಾಗ ಚಾಲಕ ಮಾಳಪಲ್ಲಿಯ ಹತ್ತಿರ ಕಾರು ಬಿಟ್ಟು ಪರಾರಿಯಾಗಿದ್ದಾನೆ.
ನಂಜುಂಡಾಚಾರಿ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್​ಗೆ ದಾಖಲಿಸಲಾಗಿದೆ. ನಗರಠಾಣೆ ಪೊಲೀಸರು ಸ್ಥಳ ಪರಿಶೀಲಿಸಿ, ಕಾರನ್ನು ವಶ ಪಡಿಸಿಕೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net