“ಕೆಂಪುಕೋಟೆಯ ಮೇಲೆ ಮುತ್ತು ಚಲ್ಲಿತ್ತಲೇ ಪರಾಕ್!”: ದೇವರಗುಡ್ಡದಲ್ಲಿ ಮೊಳಗಿದ ಕಾರ್ಣಿಕ! ರಾಜಕೀಯ, ಮಳೆ-ಬೆಳೆಯ ದೈವವಾಣಿ ವಿಶ್ಲೇಷಣೆ ಇಲ್ಲಿದೆ! Karnikotsava

ದೇವರಗುಡ್ಡ ಮಾಲತೇಶ ಸ್ವಾಮಿ ಕಾರ್ಣಿಕೋತ್ಸವ: “ಕೆಂಪುಕೋಟೆಯ ಮೇಲೆ ಮುತ್ತು ಚಲ್ಲಿತ್ತಲೇ ಪರಾಕ್!” ಎಂದು ನುಡಿದ ಗೊರವಯ್ಯ. ರೈತರಿಗೆ ಶುಭಸುದ್ದಿ, ದೇಶಕ್ಕೆ ಸಾಧು-ಸಂತರೇ ಪ್ರಧಾನಿ? ಸಂಪೂರ್ಣ ವಿಶ್ಲೇಷಣೆ ಇಲ್ಲಿದೆ.
Devaragudda Malatesha Swamy Karnika meaning
ದೇವರಗುಡ್ಡ ಮಾಲತೇಶ ಸ್ವಾಮಿ ಕಾರ್ಣಿಕ ಅರ್ಥ
Published on: 

ರಾಣೆಬೆನ್ನೂರು: ನವರಾತ್ರಿ ಮಹಾನವಮಿ ನಿಮಿತ್ತ ಸೋಮವಾರ (ಅ.19) ತಾಲೂಕಿನ ಐತಿಹಾಸಿಕ ಹಾಗೂ ಧಾರ್ಮಿಕ ಪ್ರಸಿದ್ಧ ಕ್ಷೇತ್ರ ದೇವರಗುಡ್ಡದಲ್ಲಿ ಶ್ರೀ ಮಾಲತೇಶ ಸ್ವಾಮಿಯ ಕಾರ್ಣಿಕೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿತು. ಕ್ಷೇತ್ರದ ಕರಿಯಾಲ್ ಕಟ್ಟಿಯಲ್ಲಿ 15 ಅಡಿ ಎತ್ತರದ ಬಿಲ್ಲನ್ನೇರಿ, ಒಂಬತ್ತು ದಿನಗಳ ಕಾಲ ಕಠಿಣ ಉಪವಾಸ ವ್ರತಾಚರಣೆ ಕೈಗೊಂಡಿದ್ದ ಗೊರವಯ್ಯ ನಾಗಪ್ಪಜ್ಜ ಉರ್ಮಿ ಅವರು ವರ್ಷದ ಕಾರ್ಣಿಕ ನುಡಿದಿದ್ದಾರೆ.

"ಕೆಂಪುಕೋಟಿಯ ಮೇಲೆ ಮುತ್ತು ಚಲ್ಲಿತ್ತಲೇ ಪರಾಕ್"ಎಂಬ ದೈವವಾಣಿ ಮೊಳಗುತ್ತಿದ್ದಂತೆ ನೆರೆದಿದ್ದ ಭಕ್ತರು ಭಕ್ತಿಭಾವದಿಂದ ಉದ್ಘೋಷಿಸಿದ್ದಾರೆ. ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಕಾರ್ಣಿಕೋತ್ಸವಕ್ಕೆ ಸಾಕ್ಷಿಯಾಗಿದ್ದು, ಮಹಾನವಮಿಯಂದು ಗೊರವಯ್ಯ ನುಡಿಯುವ ಕಾರ್ಣಿಕ ದೈವವಾಣಿ ದೇವರಗುಡ್ಡ ಕ್ಷೇತ್ರದ ಪ್ರಮುಖ ಧಾರ್ಮಿಕ ಪರಂಪರೆಯಾಗಿದೆ.

ಮಳೆ, ಬೆಳೆ ಭವಿಷ್ಯದ ಚರ್ಚೆ

ಈ ಬಾರಿ ಗೊರವಯ್ಯ ನುಡಿದ ಕೆಂಪುಕೋಟಿಯ ಮೇಲೆ ಮುತ್ತು ಚಲ್ಲಿತ್ತಲೇ ಪರಾಕ್ ಎಂಬ ಕಾರ್ಣಿಕದ ಅರ್ಥವೇನು? ಇದರ ಫಲಾಫಲಗಳೇನು? ಎಂಬ ಕುರಿತು ಭಕ್ತರು ಹಾಗೂ ಸಾರ್ವಜನಿಕ ವಲಯದಲ್ಲಿ ಚರ್ಚೆ ಆರಂಭವಾಗಿದೆ. ಕಾರ್ಣಿಕೋತ್ಸವದ ಹಿನ್ನೆಲೆಯಲ್ಲಿ ದೇವರಗುಡ್ಡ ಕ್ಷೇತ್ರದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ವಿವಿಧೆಡೆಯಿಂದ ಆಗಮಿಸಿದ ಭಕ್ತರು ಮಾಲತೇಶ ಸ್ವಾಮಿಯ ದರ್ಶನ ಪಡೆದು, ಕಾರ್ಣಿಕ ನುಡಿಯನ್ನು ಶ್ರದ್ಧೆಯಿಂದ ಆಲಿಸಿದರು.

ಧಾರ್ಮಿಕ ನಂಬಿಕೆ, ಭಕ್ತಿ ಮತ್ತು ನಾಡಿನ ಸಾಂಪ್ರದಾಯಿಕ ಪರಂಪರೆಯ ಪ್ರತೀಕವಾಗಿರುವ ದೇವರಗುಡ್ಡದ ಕಾರ್ಣಿಕೋತ್ಸವ ಮತ್ತೊಮ್ಮೆ ಗಮನ ಸೆಳೆಯಿತು. ಕಾರ್ಣಿಕೋತ್ಸವದ ಬಳಿಕ ದೇವಸ್ಥಾನದ ಪ್ರಧಾನ ಅರ್ಚಕ ಸಂತೋಷಭಟ್ಟ ಗುರೂಜಿ ದೈವವಾಣಿಯನ್ನು ರೈತರು ಹಾಗೂ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ವಿಶ್ಲೇಷಿಸಿದರು.

Also Read
ಅನೈತಿಕ ಸಂಬಂಧಕ್ಕೆ ಪತಿ ಬಲಿ! ಪೇಂಟರ್​ ಜೊತೆ ಸೇರಿ ಗಂಡನನ್ನೇ ಕೊಂದ ಪತ್ನಿ, ಸೇರಿ ನಾಲ್ವರ ಬಂಧನ! Extra Marital Affair
Devaragudda Malatesha Swamy Karnika meaning

ರೈತರಿಗೆ ಶುಭಸೂಚನೆ

ಈ ವರ್ಷ ಮುಂಗಾರು ಮಳೆ ಕೈಕೊಟ್ಟ ಪರಿಣಾಮ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದ್ದು, ಕೃಷಿಕರು ಆತಂಕದಲ್ಲಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ಹಿಂಗಾರು ಮಳೆ ಉತ್ತಮವಾಗಿ ಸುರಿಯಲಿದ್ದು, ರೈತರು ಸಮೃದ್ಧವಾಗಿ ಬೆಳೆಗಳನ್ನು ಬೆಳೆಯುವಂತಾಗಲಿದೆ. ರೈತರ ಸಂಕಷ್ಟಗಳು ದೂರವಾಗಿ ನೆಮ್ಮದಿ ದೊರೆಯಲಿದೆ ಎಂದಿದ್ದಾರೆ.

ಸಾಧು-ಸಂತರಿಗೆ ಅಧಿಕಾರದ ಮುನ್ಸೂಚನೆ

ರಾಜಕೀಯವಾಗಿ ದೈವವಾಣಿಯನ್ನು ವಿಶ್ಲೇಷಿಸಿದ ಅವರು, ‘ಕೆಂಪುಕೋಟಿಯ ಮೇಲೆ ಸಾಧು-ಸಂತರು ಧ್ವಜ ಹಾರಿಸಲಿದ್ದಾರೆ’ ಎಂಬುದು ಮಹತ್ವದ ಸೂಚನೆಯಾಗಿದೆ. ಮುಂದಿನ ದಿನಗಳಲ್ಲಿ ಸಾಧು-ಸಂತರೊಬ್ಬರು ದೇಶದ ಪ್ರಧಾನಿಯಾಗುವ ಸಾಧ್ಯತೆಯ ಮುನ್ಸೂಚನೆ ಇದರಲ್ಲಿ ಅಡಗಿದೆ. ದೇಶದ ಆಡಳಿತದಲ್ಲಿ ಸಾಧು-ಸಂತರ ಪ್ರಭಾವ ಹೆಚ್ಚಾಗಿ, ಮುಂದೊಂದು ದಿನ ಸಾಧು-ಸಂತರು ದೇಶವನ್ನು ಆಳುವ ಕಾಲ ಬರಲಿದೆ ಎಂಬ ಸೂಚನೆ ದೈವವಾಣಿ ನೀಡಿದೆ ಎಂದು ಅವರು ವಿಶ್ಲೇಷಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net