ಅನೈತಿಕ ಸಂಬಂಧಕ್ಕೆ ಪತಿ ಬಲಿ! ಪೇಂಟರ್​ ಜೊತೆ ಸೇರಿ ಗಂಡನನ್ನೇ ಕೊಂದ ಪತ್ನಿ, ಸೇರಿ ನಾಲ್ವರ ಬಂಧನ! Extra Marital Affair

ವಿಜಯಪುರದಲ್ಲಿ ಬೆಚ್ಚಿಬೀಳಿಸೋ ಘಟನೆ: ಮನೆಗೆ ಬಂದ ಪೇಂಟರ್ ಜೊತೆ ಅನೈತಿಕ ಸಂಬಂಧ ಬೆಳೆಸಿ, ವಾಕಿಂಗ್ ಹೋಗಿದ್ದ ಪತಿಯನ್ನೇ ಸ್ಕಾರ್ಪಿಯೋ ಹರಿಸಿ ಕೊಲೆ ಮಾಡಿಸಿದ ಪತ್ನಿ ಸೇರಿ ನಾಲ್ವರ ಬಂಧನ. ಸಂಪೂರ್ಣ ವಿವರ ಇಲ್ಲಿದೆ.
Man out for a walk killed after being run over by a Scorpio; police investigation into the hit-and-run case reveals an illicit affair. Four people, including the victim's wife and her lover, have been arrested.
ವಾಕಿಂಗ್ ಹೋಗಿದ್ದ ವ್ಯಕ್ತಿಯ ಮೇಲೆ ಸ್ಕಾರ್ಪಿಯೋ ಹರಿಸಿ ಹತ್ಯೆ: ಹಿಟ್ & ರನ್ ಕೇಸ್ ಬೆನ್ನತ್ತಿದ ಪೊಲೀಸರಿಗೆ ಅನೈತಿಕ ಸಂಬಂಧ ಬಯಲು. ಪತ್ನಿ ಹಾಗೂ ಪ್ರಿಯಕರ ಸೇರಿ ನಾಲ್ವರು ಅರೆಸ್ಟ್.
Published on: 

ವಿಜಯಪುರ: ಮನೆಗೆ ಪೇಂಟಿಂಗ್​ ಮಾಡಲು ಬಂದಿದ್ದ ಕಾರ್ಮಿಕನ ಜೊತೆ ಅನೈತಿಕ ಸಂಬಂಧ ಬೆಳೆಸಿಕೊಂಡ ಪರಿಣಾಮ ಪತಿಯಿಂದ ಬಿಡುಗಡೆ ಬಯಸಿದ ಪತ್ನಿ, ಪ್ರಿಯರಕನ ಜೊತೆ ಸೇರಿ ಕೊಲೆಗೈದ ವಿಲಕ್ಷಣ ಪ್ರಕರಣವೊಂದು ವಿಜಯಪುರದಲ್ಲಿ ವರದಿಯಾಗಿದೆ.

ಮನೆಯ ಪೇಂಟಿಂಗ್ ಮಾಡಲು ಬಂದ ಕಾರ್ಮಿಕನ ಜೊತೆ ಶುರುವಾದ ಸ್ನೇಹ, ಪ್ರೇಮವಾಗಿ ಬದಲಾಯಿ, ಇವರ ಅನೈತಿಕ ಸಂಬಂಧಕ್ಕೆ ಅಮಾಯಕ ಪತಿ ಧಾರುಣವಾಗಿ ಸಾವಿಗೀಡಾಗಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ಬಲಿಯಾದ ವ್ಯಕ್ತಿ ಮದೀನಾ ನಗರದ ರಾಜಶೇಖರ ಬಿರಾದಾರ ಎಂದು ಪತ್ತೆಯಾಗಿದ್ದು, ಈತನ ಪತ್ನಿ ಅಶ್ವಿನಿ ಈ ಕೊಲೆಯ ಕಿಂಗ್​ಪಿನ್​ ಎನ್ನಲಾಗಿದೆ. ಸ್ಥಳೀಯ ನಿವಾಸಿ ಆನಂದ ರಾವುತಪ್ಪ ಕಲ್ಲೂರ (25), ಸಚಿನ ಪರಶುರಾಮ ಬಡಳ್ಳಿ (24) ಹಾಗೂ ಓರ್ವ ಬಾಲಕ ಸೇರಿ ಈ ಕೃತ್ಯ ಎಸಗಿದ್ದು ಪೊಲೀಸರು ಇವರನ್ನು ಬಂಧಿಸಿದ್ದಾರೆಂದು ತಿಳಿದುಬಂದಿದೆ.

ಪ್ರಕರಣದ ಹಿನ್ನೆಲೆ:

ಕಳೆದ ಅ. 4 ರಂದು ನಸುಕಿನ ಜಾವ ವಿಜಯಪುರ ರಿಂಗ್ ರೋಡ್ ಕಡೆಯಿಂದ ಜುಮನಾಳ ಕಡೆ ಸಂಪರ್ಕ ಕಲ್ಪಿಸುವ ರಸ್ತೆಯ ಮೇಲೆ ವಾಕಿಂಗ್ ಹೋಗಿದ್ದ ರಾಜಶೇಖರ ಬಿರಾದಾರ ಮೇಲೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿತ್ತು. ಪರಿಣಾಮ ರಾಜಶೇಖರ ಸ್ಥಳದಲ್ಲಿಯೇ ಅಸುನೀಗಿದ್ದು, ಈ ಕುರಿತು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಅನುಮಾನ ಕಂಡು ಬಂದ ಹಿನ್ನೆಲೆ ಪೊಲೀಸರು ಆಳವಾಗಿ ತನಿಖೆ ಕೈಗೊಂಡಾಗ, ಸ್ವತಃ ಪತ್ನಿಯೇ ಸಂಚು ರೂಪಿಸಿ ಕೊಲೆ ಮಾಡಿಸಿರುವುದು ಬಯಲಾಗಿದೆ.

ಅನೈತಿಕ ಸಂಬಂಧವೇ ಕಾರಣ!

ರಾಜಶೇಖರ ಹಾಗೂ ಅಶ್ವಿನಿ ಮದುವೆಯಾಗಿ 10 ವರ್ಷಗಳಾಗಿತ್ತು. ಇವರಿಗೆ 6 ವರ್ಷದ ಅವಳಿ ಗಂಡು ಮಕ್ಕಳಿದ್ದು, ವಿಜಯಪುರದ ಏಕತಾ ನಗರದಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದರು. 7 ತಿಂಗಳ ಹಿಂದೆ ಹೊಸದಾಗಿ ಮನೆ ಕಟ್ಟಿಸಿದ್ದು ಮನೆಯ ಪೇಂಟಿಂಗ್ ಕೆಲಸವನ್ನು ಮದೀನಾ ನಗರದ ಆನಂದ ರಾವುತಪ್ಪ ಕಲ್ಲೂರಗೆ ಕೊಟ್ಟಿದ್ದರು. ಈತ ಪೇಂಟಿಂಗ್ ಕೆಲಸಕ್ಕೆ ಬರುವಾಗ ಆಶ್ವಿನಿ ಹಾಗೂ ಆತನ ನಡುವೆ ಪರಿಚಯವಾಗಿ ಸ್ನೇಹವಾಗಿದ್ದು, ಅಶ್ವಿನಿ ತನ್ನ ಗಂಡನಿಂದ ಬಿಡುಗಡೆ ಬಯಸಿ, ಆತನಿಗೆ ಕೊಲೆ ಮಾಡುವ ಬಗ್ಗೆ ಹೇಳಿದ್ದಾಳೆ. ಪೇಂಟರ್ ಆನಂದ ಸಹ ಸಹಮತ ವ್ಯಕ್ತಪಡಿಸಿ, ಕೊಲೆಗೆ ಸಂಚು ರೂಪಿಸಿರುವುದು ತನಿಖೆ ವೇಳೆ ಬಯಲಾಗಿದೆ.

Also Read
ಟೀಮ್​ ಇಂಡಿಯಾಗೆ ನೂತನ ಸಾರಥಿ!: ಅಜಿತ್ ಅಗರ್ಕರ್ ಔಟ್; ಚೀಫ್ ಸೆಲೆಕ್ಟರ್ ಆಗಿ ಪ್ರಗ್ಯಾನ್ ಓಜಾ ನೇಮಕ! Pragyan Ojha
Man out for a walk killed after being run over by a Scorpio; police investigation into the hit-and-run case reveals an illicit affair. Four people, including the victim's wife and her lover, have been arrested.

ಹೊಂಚು ಹಾಕಿ ಕೊಲೆ

ಅ. 4 ರಂದು ನಸುಕಿನ ಜಾವ 5.30ರ ಸುಮಾರಿಗೆ ರಾಜಶೇಖರ ವಾಕಿಂಗ್ ಮಾಡಲು ಮನೆಯಿಂದ ಹೊರಬಿದ್ದಿದ್ದಾನೆ. ಜುಮನಾಳ ರಸ್ತೆ ಕಿಯಾ ಶೋ-ರೂಮ್ ಹತ್ತಿರ ರಸ್ತೆಯ ಮೇಲೆ ಹೋದಾಗ ಅಶ್ವಿನಿ ಆನಂದಗೆ ಮಾಹಿತಿ ರವಾನಿಸಿದ್ದಾಳೆ. ಆನಂದ ತನ್ನ ಬೈಕ್ ಮೇಲೆ ರಾಜಶೇಖರನನ್ನು ಹಿಂಬಾಲಿಸಿದ್ದಾನೆ.

ಉಳಿದವರು ನಂಬರ ಪ್ಲೇಟ್ ಇಲ್ಲದ ಕಪ್ಪು ಬಣ್ಣದ ಸ್ಕಾರ್ಪಿಯೋ ವಾಹನ ತಗೆದುಕೊಂಡು ಬಂದು ರಸ್ತೆಯ ಮೇಲೆ ನಡೆದುಕೊಂಡ ಹೊರಟ ಮೃತ ರಾಜಶೇಖನಿಗೆ ಹಿಂದಿನಿಂದ ಸ್ಕಾರ್ಪಿಯೋ ವಾಹನ ಹಾಯಿಸಿ ಕೊಲೆ ಮಾಡಿದ್ದಾರೆ. ಪೊಲೀಸರು ಆರೋಪಿಗಳನ್ನು ದಸ್ತಗೀರ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ತನಿಖೆ ಮುಂದುವರಿದಿದೆ ಎಂದು ಎಸ್‌ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net