ಹಂಪಿ ಉತ್ಸವದಲ್ಲಿ ಕೃಷಿ ಪರಿಕರಗಳಿಗೆ ಮುತ್ಯಾ ಸೊಗಡು

ಕೃಷಿ ವಸ್ತು ಪ್ರದರ್ಶನದಲ್ಲಿ ಕಂಡುಬಂದ ಸಾಂಪ್ರದಾಯಿಕ ಕೃಷಿ ಬಳಕೆ ಪರಿಕರಗಳು.
ಕೃಷಿ ವಸ್ತು ಪ್ರದರ್ಶನದಲ್ಲಿ ಕಂಡುಬಂದ ಸಾಂಪ್ರದಾಯಿಕ ಕೃಷಿ ಬಳಕೆ ಪರಿಕರಗಳು.
Published on

ಪ್ರಮುಖ ಮುಖ್ಯಾಂಶಗಳು

  • ನಾಡಿನಾದ್ಯಂತ ಪ್ರದರ್ಶನ
  • ಸಾಂಪ್ರದಾಯಿಕ ವಸ್ತುಗಳ ಸಂಗ್ರಹ
ಹಂಪಿ: ಹಳ್ಳಿ ಬದುಕು ಎಂದರೆ ಹೇಗಿರುತ್ತದೆ ಎಂದು ಇಂದಿನ ಪೀಳಿಗೆಯವರು ಕುತೂಹಲದಿಂದ ಕೇಳುತ್ತಾರೆ. ಆಧುನಿಕ ಕೃಷಿ ಯಂತ್ರಗಳ ಭರಾಟೆಯ ನಡುವೆ ಸಾಂಪ್ರದಾಯಿಕ, ಪರಿಸರ ಸ್ನೇಹಿ ಹಾಗೂ ರೈತರಿಗೆ ಪೂರಕವಾಗಿದ್ದ ಕೃಷಿ ಪರಿಕರಗಳನ್ನು ಒಂದೇ ಸೂರಿನಡಿ ನೋಡಲು ಸಿಕ್ಕರೆ ಅದರ ಸಂಭ್ರಮವೇ ಬೇರೆ. ಇಂತಹ ಅಪರೂಪದ ಪ್ರದರ್ಶನವನ್ನು ನಾಡಿನ ಪ್ರಮುಖ ಉತ್ಸವಗಳಲ್ಲಿ ಗದಗ ಜಿಲ್ಲೆಯ ರೋಣ ಗ್ರಾಮದ ಮಲ್ಲಯ್ಯ ಮುತ್ಯಾ ಅವರು ಉಚಿತವಾಗಿ ಆಯೋಜಿಸುವ ಮೂಲಕ ಜನರಿಗೆ ಮಾಹಿತಿಯನ್ನು ಹರಡುತ್ತಿದ್ದಾರೆ.
ಉತ್ಸವದ ಅಂಗವಾಗಿ ಕೃಷಿ ಇಲಾಖೆ ಏರ್ಪಡಿಸಿದ ಕೃಷಿ ವಸ್ತು ಪ್ರದರ್ಶನದಲ್ಲಿ ಮಲ್ಲಯ್ಯ ಮುತ್ಯಾ ಅವರ ಅಪರೂಪದ ವಸ್ತು ಸಂಗ್ರಹಗಳು ಕಂಡುಬಂದವು. ಅಂದಿನ ಕಾಲದ ಜನರು ಬಳಸುತ್ತಿದ್ದ ಹಿತ್ತಾಳೆ ಮತ್ತು ತಾಮ್ರದ ಪಾತ್ರೆಗಳು, ಮಣ್ಣಿನ ಮಡಕೆ-ಕುಡಿಕೆಗಳು, ಕೃಷಿ ಬಳಕೆಯ ಕೂರಿಗೆ, ರಂಟೆ, ಕುಂಟೆ ಹಾಗೂ ಹಳೆಯ ಕಾಲದ ನಾಣ್ಯ ಮತ್ತು ನೋಟುಗಳನ್ನು ಇವರು ಸಂಗ್ರಹಿಸಿದ್ದಾರೆ. ಒಟ್ಟಾರೆಯಾಗಿ ಒಂದು ಹಳ್ಳಿ ಅಥವಾ ಗ್ರಾಮೀಣ ಸೊಗಡಿನ ರೈತಾಪಿ ಕುಟುಂಬ ಬಳಸುವ ಎಲ್ಲ ವಸ್ತುಗಳು ಇಲ್ಲಿವೆ.
ಚಿಕ್ಕಂದಿನಿಂದಲೂ ಹಳ್ಳಿಯಲ್ಲೇ ಬೆಳೆದ ಮಲ್ಲಯ್ಯ ಅವರು, ತಮ್ಮ ಅಜ್ಜಂದಿರ ಕಾಲದಿಂದ ಬಳಸುತ್ತಿದ್ದ ವಸ್ತುಗಳನ್ನು ಸಂಗ್ರಹಿಸುವ ಹವ್ಯಾಸ ಬೆಳೆಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಬೇರೆ ಕಡೆಗಳಲ್ಲಿ ಹಳೆಯ ವಸ್ತುಗಳಿವೆ ಎಂಬ ಮಾಹಿತಿ ಸಿಕ್ಕ ತಕ್ಷಣವೇ ಅಲ್ಲಿಗೆ ತೆರಳಿ ಅವುಗಳನ್ನು ಸಂಗ್ರಹಿಸಿ ತಮ್ಮ ಮ್ಯೂಸಿಯಂ ಸೇರಿಸಿಕೊಳ್ಳುತ್ತಾರೆ. ಇವರ ಬಳಿ ಇರುವ ಅಪಾರ ಕೃಷಿ ವಸ್ತುಗಳನ್ನು ಕಂಡು, ಕೃಷಿ ಇಲಾಖೆಯು ಪ್ರಮುಖ ಉತ್ಸವ ಮತ್ತು ಪ್ರದರ್ಶನಗಳು ಆಯೋಜನೆಗೊಂಡಾಗ ತಕ್ಷಣ ಇವರನ್ನು ಸಂಪರ್ಕಿಸಿ ಪ್ರದರ್ಶನಕ್ಕೆ ವ್ಯವಸ್ಥೆ ಮಾಡುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net