ಕೀಟನಾಶಕ ಸೇವಿಸಿ ಹಾವೇರಿ ತಾಲೂಕಿನ ಹಂದಿಗನೂರ ಪಂಚಾಯಿತಿಯ ಪಿಡಿಒ ಸಾವಿಗೆ ಶರಣು! PDO Death

ಕೀಟನಾಶಕ ಸೇವಿಸಿ ಹಾವೇರಿ ತಾಲೂಕಿನ ಹಂದಿಗನೂರ ಪಂಚಾಯಿತಿಯ ಪಿಡಿಒ ಸಾವಿಗೆ ಶರಣು! PDO Death
ಕೀಟನಾಶಕ ಸೇವಿಸಿ ಹಾವೇರಿ ತಾಲೂಕಿನ ಹಂದಿಗನೂರ ಪಂಚಾಯಿತಿಯ ಪಿಡಿಒ ಸಾವಿಗೆ ಶರಣು! PDO Death
Published on

ಪ್ರಮುಖ ಮುಖ್ಯಾಂಶಗಳು

  • ಹಾವೇರಿ ತಾಲೂಕಿನ ಹಂದಿಗನೂರು ಗ್ರಾಮ ಪಂಚಾಯಿತಿ ಪಿಡಿಒ ಸಾವಿಗೆ ಶರಣು
  • ಗ್ರಾಪಂ ಆವರಣದಲ್ಲಿ ಕಳೆ ಬೆಳೆದಿದೆ ಅಂತ ಹೇಳಿ ಕೀಟನಾಶಕ ಖರೀದಿ ಮಾಡಿ ಸೇವನೆ
  • ಹಾವೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರೂ ಫಲಕಾರಿಯಾಗದೇ ನಿಧನ
  • ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಪೊಲೀಸರ ತನಿಖೆಯಿಂದ ತಿಳಿಯಬೇಕಿದೆ
ಹಾವೇರಿ: ತಾಲೂಕಿನ ಹಂದಿಗನೂರು ಗ್ರಾಮ ಪಂಚಾಯಿತಿ ಪಿಡಿಒ ಉಮೇಶ ದ್ಯಾವಣ್ಣವರ (53) ಗುರುವಾರ ವಿಷ ಸೇವಿಸಿ ಆತ್ಮಹತ್ಯೆ ( PDO Death ) ಮಾಡಿಕೊಂಡಿದ್ದಾರೆ.
ಗ್ರಾಪಂ ಆವರಣದಲ್ಲಿ ಕಳೆ ಬೆಳೆದಿದೆ. ಅದಕ್ಕೆ ಸಿಂಪಡಿಸಲೆಂದು ಕಳೆನಾಶಕ ಬೇಕು ಎಂದು ಉಮೇಶ ಹೊಸರಿತ್ತಿಯಲ್ಲಿ ಬೆಳಗ್ಗೆ ಕೀಟನಾಶಕ ಅಂಗಡಿಯಿಂದ ಖರೀದಿಸಿದ್ದರು. ಬಳಿಕ ಕೀಟನಾಶಕ ಸೇವಿಸಿ ಅಸ್ವಸ್ಥಗೊಂಡಿದ್ದರು.
ಕುಟುಂಬದವರು ಹಾಗೂ ಸ್ಥಳೀಯರು ಕೂಡಲೇ ಅವರನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ದಾವಣಗೆರೆಯಲ್ಲಿ ಸಂಜೆ ಉಮೇಶ ಮೃತಪಟ್ಟಿದ್ದಾರೆ.
ಮೃತ ಉಮೇಶ ಮೂಲತಃ ಹಾವೇರಿ ತಾಲೂಕು ಸಂಗೂರ ಗ್ರಾಮದವರು. ಅವರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ. ಈ ಕುರಿತು ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಪೊಲೀಸರ ತನಿಖೆಯಿಂದ ತಿಳಿಯಬೇಕಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net