ಬಾಕಿ ಹಣ ಕೂಡಲೇ ಪಾವತಿ ಮಾಡಿ

ಸಿದ್ಧಸಿರಿ ಕಂಪನಿಗೆ ಕಬ್ಬು ನೀಡಿದ ರೈತರಿಗೆ ಕೂಡಲೇ ಬಾಕಿ ಹಣ ನೀಡಬೇಕು ಎಂದು ಒತ್ತಾಯಿಸಿ ಚಿಂಚೋಳಿಯಲ್ಲಿ ರೈತ ಹಿತ ರಣಾ ಸಮಿತಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್​ಗೆ ಮನವಿಪತ್ರ ಸಲ್ಲಿಸಲಾಯಿತು. ಅಬ್ದುಲ್​ ಬಾಸೀದ್​, ಲ್ಮಣ ಅವಂಟಿ, ಸುಭಾಷಚಂದ್ರ ಪಾಟೀಲ್​, ಸಿದ್ದು ಕನಕಪುರ, ಬಸವರಾಜ ಕಡಬೂರ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಚಿಂಚೋಳಿ ತಹಸಿಲ್​ ಕಚೇರಿ ಎದುರು ರೈತ ಹಿತ ರಣಾ ಸಮಿತಿಯಿಂದ ಪ್ರತಿಭಟನೆ
ಚಿಂಚೋಳಿ: ಸಿದ್ಧಸಿರಿ ಇಥೆನಾಲ್​ ಕಂಪನಿಯೂ ಕಬ್ಬು ನೀಡಿದ ರೈತರು ನಿಗದಿಯಂತೆ ಹಣ ನೀಡದೆ ಅನ್ಯಾಯ ಮಾಡುತ್ತಿದ್ದು, ಕೂಡಲೇ ಸರ್ಕಾರ ನಿಗದಿಪಡಿಸಿದ ದರವನ್ನು ರೈತರ ಖಾತೆಗೆ ಜಮೆ ಮಾಡಬೇಕು ಎಂದು ಒತ್ತಾಯಿಸಿ ತಹಸಿಲ್​ ಕಚೇರಿ ಎದುರು ರೈತ ಹಿತ ರಣಾ ಸಮಿತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ರೈತ ಹಿತ ರಣಾ ಸಮಿತಿ ತಾಲೂಕು ಅಧ್ಯ ಅಬ್ದುಲ್​ ಬಾಸೀದ್​ ಮಾತನಾಡಿ, ಪ್ರತಿ ಟನ್​ ಕಬ್ಬಿಗೆ ಸರ್ಕಾರ 2950 ರೂ. ನಿಗದಿ ಮಾಡಿದೆ. ಅದರಂತೆ ಹಣ ನೀಡದೆ ಕಂಪನಿ ರೈತರನ್ನು ಸತಾಯಿಸುತ್ತಿದೆ. ಕೂಡಲೇ ಕಳೆದ 6 ತಿಂಗಳಿಂದ ಬಾಕಿ ಉಳಿಸಿಕೊಂಡ 250 ರೂ. ಪಾವತಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಬೇಕು. ವಾರದಲ್ಲಿ ಕಂಪನಿಗೆ ಕಬ್ಬು ಪೂರೈಸಿದ ಕಬ್ಬು ಬೆಳೆಗಾರರ ಖಾತೆಗೆ ಬಾಕಿ ಹಣ ಜಮೆ ಮಾಡಬೇಕು. ರ್ನಿಲಕ್ಷ ವಹಿಸಿದರೆ ಕಂಪನಿ ಮುಂದೆ ಬೃಹತ್​ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ತಹಸೀಲ್ದಾರ್​ ಸುಬ್ಬಣ್ಣ ಜಮಖಂಡಿ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.
ಪ್ರಮುಖರಾದ ಲ್ಮಣ ಅವಂಟಿ, ಸುಭಾಷಚಂದ್ರ ಪಾಟೀಲ್​, ಸಿದ್ದು ಕನಕಪುರ, ಬಸವರಾಜ ಕಡಬೂರ, ರಾಜು ನವಲೆ, ಖಲೀಲ್​ ಪಟೇಲ್​, ನಾಗೇಶ ಗುಣಾಜಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net