ಕಾರ್ಖಾನೆಗೆ ಕಬ್ಬು ನೀಡಿದ ರೈತರ ಬಿಲ್ ಕೂಡಲೇ ಪಾವತಿಸಬೇಕು ಎಂದು ಒತ್ತಾಯಿಸಿ ಅಳಂದ ತಾಲೂಕಿನ ಭೂಸನೂರ ಕ್ರಾಸ್ನಲ್ಲಿ ನಮ್ಮ ಕರ್ನಾಟಕ ಸೇನೆ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
Published on:
Copied
Follow Us
ಆಳಂದ: ಕಬ್ಬು ನೀಡಿದ ರೈತರ ಬಿಲ್ ಶ್ರೀ ಪಾವತಿ ಮಾಡಬೇಕು ಎಂದು ಆಗ್ರಹಿಸಿ ಭೂಸನೂರ ಕ್ರಾಸ್ನಿಂದ ಎನ್ಎಸ್ಎಲ್ ಕಾರ್ಖಾನೆವರೆಗೂ ನಮ್ಮ ಕರ್ನಾಟಕ ಸೇನೆ ಕಾರ್ಯಕರ್ತರು ಬುಧವಾರ ಬೃಹತ್ ಪಾದಯಾತ್ರೆ ನಡೆಸಿದರು.
ಸರ್ಕಾರದಿಂದ ಕಾರ್ಖಾನೆ ಗುತ್ತಿಗೆ ಪಡೆದ ಮೇಲೆ ಭೂಸನೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮ ಅಭಿವೃದ್ಧಿ ಮತ್ತು ಶುದ್ಧ ಕುಡಿವ ನೀರು, ರಸ್ತೆ, ಸರ್ಕಾರಿ ಶಾಲೆಗಳ ದುರಸ್ತಿ ಸೇರಿ ವಿವಿಧ ಕೆಲಸ ಮಾಡಿಕೊಡುವದಾಗಿ ಕಾರ್ಖಾನೆ ಒಪ್ಪಿಕೊಂಡಿತ್ತು. ಆದರೆ ಈವರೆಗೂ ಯಾವುದೇ ಕೆಲಸ ಆಗಿಲ್ಲ. ಅಲ್ಲದೆ ಕಾರ್ಖಾನೆಗೆ ಕಬ್ಬು ನೀಡಿದ ರೈತರ ಬಿಲ್ ಪಾವತಿಸುವಲ್ಲೂ ವಿಳಂಬ ಮಾಡಲಾಗುತ್ತಿದೆ. ಕೂಡಲೇ ರೈತರ ಖಾತೆಗೆ ಬಿಲ್ ಜಮೆ ಮಾಡಬೇಕು. ರ್ನಿಲಕ್ಷ ವಹಿಸಿದರೆ ಬೃಹತ್ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕಾರ್ಖಾನೆ ಉಪಾಧ್ಯ ಪುರುಷೋತ್ತಮ ಅವರ ಮನವಿ ಸ್ವೀಕರಿಸಿ ಮಾತನಾಡಿ, ಮೇ 5ರೊಳಗೆ ಎಲ್ಲ ರೈತರ ಬಿಲ್ ಪಾವತಿಸುತ್ತೇವೆ. ಭೂಸನೂರು ಗ್ರಾಮದಲ್ಲಿ ಶುದ್ಧ ಕುಡಿವ ನೀರಿನ ಟಕ ಸ್ಥಾಪಿಸಲಾಗುವುದು ಎಂದು ಭರವಸೆ ನೀಡಿದರು.