ಜೆಜೆಎಂ ಕಾಮಗಾರಿ ಬಿಲ್​ ಪಾವತಿಸಲಿ

Pay the bills for JJM works.
Pay the bills for JJM works.
Published on

ಚಿಂತಾಮಣಿ:

ಕೇಂದ್ರ ಸರ್ಕಾರದಿಂದ ಜಲ ಜೀವನ್​ ಮಿಷನ್​ ಯೋಜನೆಯಡಿ 80 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದರೂ, 2&-3 ವರ್ಷಗಳಿಂದ ಗುತ್ತಿಗೆದಾರರಿಗೆ 1 ರೂ. ಬಿಡುಗಾಸನ್ನೂ ಪಾವತಿಸದೆ, ಸುಮಾರು 30 ಕೋಟಿ ರೂ. ಅನುದಾನವನ್ನು ಸಿಇಒ ವಾಪಸ್​ ಕಳುಹಿಸಿದ್ದಾರೆ ಎಂದು ಆರೋಪಿಸಿ ಚಿಂತಾಮಣಿಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗದ ಕಾರ್ಯಪಾಲಕ ಅಭಿಯಂತರರ ಕಚೇರಿ ಮುಂದೆ ಜಿಲ್ಲಾ ಗುತ್ತಿಗೆದಾರರ ಸಂಘದ ನೇತೃತ್ವದಲ್ಲಿ ಗುತ್ತಿಗೆದಾರರು ಪ್ರತಿಭಟಿಸಿದರು.

ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ಶ್ರೀ ಬಿಲ್​ ಪಾವತಿ ಮಾಡದಿದ್ದರೆ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ಗುತ್ತಿಗೆದಾರ ಸ್ಕೂಲ್​ ಸುಬ್ಬಾರೆಡ್ಡಿ ಮಾತನಾಡಿ, ಗುತ್ತಿಗೆದಾರರು ಕಾಮಗಾರಿಗಳ ಬಿಲ್​ ಪಾವತಿಸುವವರೆಗೆ ಮುಂದಿನ ಯಾವುದೇ ಕೆಲಸಗಳನ್ನು ಮಾಡುವುದಿಲ್ಲ. ಸಮಸ್ಯೆಗೆ ಪರಿಹಾರ ಸಿಗದಿದ್ದರೆ ಬುಧವಾರದಂದು ಸಿಇಒ ಹಾಗೂ ಕಾರ್ಯಪಾಲಕ ಅಭಿಯಂತರರ ಕಚೇರಿಗೆ ಮುತ್ತಿಗೆ ಹಾಕಿ ಹೋರಾಟ ನಡೆಸಲು ಸಭೆಯಲ್ಲಿ ರ್ನಿಣಯಿಸಲಾಗಿದೆ ಎಂದರು.
ಇನ್ನು ಕಚೇರಿಯಲ್ಲಿ ಕೆಲವರು ದಳ್ಳಾಳಿಗಳಂತೆ ವರ್ತಿಸುತ್ತಿದ್ದು, ಹಣ ನೀಡಿದವರ ಬಿಲ್​ ಮಾತ್ರ ಪಾಸ್​ ಮಾಡಲಾಗುತ್ತಿದೆ. ಉಳಿದವರ ಬಿಲ್​ಗಳನ್ನು ವಿನಾಕಾರಣ ಪೆಂಡಿಂಗ್​ ಇಡಲಾಗುತ್ತಿದೆ ಎಂದು ಗುತ್ತಿಗೆದಾರರು ಆರೋಪಿಸಿದರು.
ಈ ವೇಳೆ ಪ್ರತಿಭಟನಾಕಾರರು ಸಿಇಒ, ಕಾರ್ಯಪಾಲಕ ಇಂಜಿನಿಯರ್​ ಹಾಗೂ ಸಹಾಯಕ ಕಾರ್ಯಪಾಲಕ ಇಂಜಿನಿಯರ್​ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಗುತ್ತಿಗೆದಾರರಾದ ಕೆ.ರಮೇಶ್​, ಎಸ್​.ಶಿವಾರೆಡ್ಡಿ, ಶ್ರೀರಾಮಪ್ಪ, ಡಿ.ವಿ.ಶ್ರೀನಿವಾಸ್​, ವಿ.ವೆಂಕಟರೆಡ್ಡಿ, ಮೋಹನ್​ರೆಡ್ಡಿ, ಟಿ.ನಾಗರಾಜ್​, ಗಂಗಿರೆಡ್ಡಿ, ಹರೀಶ್​, ಶ್ರೀಕಾಂತ್​ ಕಿಶೋರ್​, ಎಂ.ಎನ್​.ರವಿ, ಮಂಜುನಾಥ್​, ಜಿ.ವಿ.ಶಿವಾರೆಡ್ಡಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net