ತಾಯಿಗೆ ಗೌರವ ಸಮರ್ಪಣೆ ಮಾಡಿ / HOSAKOTE

1:ಹೊಸಕೋಟೆ ತಾಲೂಕಿನ ಸಮೇತನಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಆಯೋಜಿಸಿದ್ದ ಮಹಿಳಾ ಗ್ರಾಮಸಭೆ ಹಾಗೂ ಸಾಮೂಹಿಕ ಸೀಮಂತ ಕಾರ್ಯಕ್ರಮವನ್ನು ಶಾಸಕ ಶರತ್​ ಬಚ್ಚೇಗೌಡ ಉದ್ಘಾಟಿಸಿದರು.
1:ಹೊಸಕೋಟೆ ತಾಲೂಕಿನ ಸಮೇತನಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಆಯೋಜಿಸಿದ್ದ ಮಹಿಳಾ ಗ್ರಾಮಸಭೆ ಹಾಗೂ ಸಾಮೂಹಿಕ ಸೀಮಂತ ಕಾರ್ಯಕ್ರಮವನ್ನು ಶಾಸಕ ಶರತ್​ ಬಚ್ಚೇಗೌಡ ಉದ್ಘಾಟಿಸಿದರು.
Published on
ಹೊಸಕೋಟೆ : ಭಾರತೀಯ ಪರಂಪರೆಯಲ್ಲಿ ತಾಯಿಗೆ ಗೌರವ ಸಮರ್ಪಣೆ ಮಾಡುವುದು ಕರ್ತವ್ಯ ಎಂದು ಶಾಸಕ ಶರತ್​ ಬಚ್ಚೇಗೌಡ ತಿಳಿಸಿದರು.
ಸಮೇತನಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಆಯೋಜಿಸಿದ್ದ ಮಹಿಳಾ ಗ್ರಾಮಸಭೆ ಹಾಗೂ ಸಾಮೂಹಿಕ ಸೀಮಂತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 9 ತಿಂಗಳು ಹೊತ್ತು ಮಗುವಿಗೆ ಜನ್ಮ ನೀಡುವ ತಾಯಿಯ ಸ್ಥಾನ ಅತ್ಯಂತ ಶ್ರೇಷ್ಠ. ಪ್ರಸವ ಪೂರ್ವವಾಗಿ ಸಾಂಪ್ರದಾಯಿಕವಾಗಿ ಮಾಡುವ ಸೀಮಂತ ತಾಯಿ ಹಾಗೂ ಗರ್ಭದಲ್ಲಿರುವ ಮಗುವಿಗೆ ಆಶೀರ್ವಾದ ಲಭಿಸಿ ಸಂತೋಷ ಹಾಗೂ ಧೈರ್ಯ ತುಂಬಲು ಸಾಧ್ಯವಾಗುತ್ತದೆ ಎಂದರು.
ಸಾಮಾನ್ಯವಾಗಿ ಮನೆಯಲ್ಲಿ ಗರ್ಭಿಣಿಗೆ ಆಯೋಜನೆ ಮಾಡುವ ಕಾರ್ಯವನ್ನು ಪ್ರಥಮವಾಗಿ ಸಮೇತನಹಳ್ಳಿ ಗ್ರಾಮ ಪಂಚಾಯಿತಿಯಿಂದ ಆಯೋಜಿಸಿರುವುದು ಪ್ರಶಂಸನೀಯ. ಗರ್ಭಿಣಿಯರು ದೈಹಿಕವಾಗಿ, ಮಾನಸಿಕವಾಗಿ ಆರೋಗ್ಯವಂತ ಮಕ್ಕಳನ್ನು ಕೊಡುಗೆಯಾಗಿ ಕೊಡುವ ದೊಡ್ಡ ಜವಾಬ್ದಾರಿ ಇದ್ದು, ಜಾಗರೂಕತೆಯಿಂದ ಪ್ರಸವ ಪೂರ್ಣ ಕಾಲ ಕಳೆಯಬೇಕು. ಇದು ಹೊಟ್ಟೆಯಲ್ಲಿರುವ ಮಗುವಿನ ಮೇಲೂ ಪರಿಣಾಮ ಬೀರುತ್ತದೆ ಎಂದರು.
ಬಮುಲ್​ ನಿರ್ದೇಶಕ ಕೆಎಂಎಂ ಮಂಜುನಾಥ್​, ತಾಪಂ ಇಒ ಮುನಿಯಪ್ಪ, ಮಹಿಳಾ ಕಾಂಗ್ರೆಸ್​ ಜಿಲ್ಲಾಧ್ಯೆ ಡಿಸಿ.ಲ್ಮ, ಟಿಎಪಿಸಿಎಂಎಸ್​ ಉಪಾಧ್ಯ ಮುತ್ತುಕೂರು ಮುನಿರಾಜು, ಮಾಜಿ ಅಧ್ಯ ಬಾಬುರೆಡ್ಡಿ, ನಿರ್ದೇಶಕ ಆನಂದಾಚಾರಿ, ಎಪಿಎಂಸಿ ಮಾಜಿ ಅಧ್ಯ ಹಾರೋಹಳ್ಳಿ ದೇವರಾಜು, ಹಿರಿಯ ಮುಖಂಡ ಸಮೇತನಹಳ್ಳಿ ಸೊಣ್ಣಪ್ಪ, ಸಿಡಿಪಿಒ ಶಿವಮ್ಮ, ಬಿಎಂಆರ್​ಡಿಎ ಸದಸ್ಯ ಕೊರಳೂರು ಸುರೇಶ್​, ಪಿಡಿಒ ಪ್ರಸಾದ್​ ಇದ್ದರು.
ಮೊಬೈಲ್​ನಿಂದ ದೂರವಿರಿ : ಮಹಿಳೆಯ ದೇಹದಲ್ಲಿ ಹಾರ್ಮೋನ್​ಗಳ ವ್ಯತ್ಯಾಸ ಸಹಜ. ಆದರೆ ಗರ್ಭಿಣಿಯಾದ ಸಂದರ್ಭದಲ್ಲಿ ಯಾವುದೇ ರೀತಿಯ ಹಾರ್ಮೋನ್​ಗಳು ವ್ಯತ್ಯಾಸ ಆದರೂ ಧೈರ್ಯವಾಗಿ ಮನಸ್ಥಿತಿಯಲ್ಲಿ ಸಮತೋಲನ ಕಾಯ್ದುಕೊಳ್ಳಬೇಕು, ಮೊಬೈಲ್​ನಿಂದ ಸಾಕಷ್ಟು ದೂರವಿದ್ದು ಮಗುವಿಗೆ ಜನ್ಮ ನೀಡುವಂತಾಗಬೇಕು ಎಂದು ಶಾಸಕ ಶರತ್​ ಅವರ ಪತ್ನಿ ಪ್ರತಿಭಾ ಶರತ್​ ತಿಳಿಸಿದರು.

ಗ್ರಾಪಂ ವತಿಯಿಂದ ಪ್ರಥಮ ಬಾರಿಗೆ ಮಹಿಳಾ ಗ್ರಾಮಸಭೆ ಜತೆಗೆ ಗ್ರಾಪಂ ವ್ಯಾಪ್ತಿಯ 143 ಗರ್ಭಿಣಿಯರನ್ನು ಒಂದೆಡೆ ಸೇರಿಸಿ ಸಾಮೂಹಿಕ ಸೀಮಂತ ಮಾಡಿದ್ದೇವೆ, ಗರ್ಭಿಣಿಯರಿಗೆ ಆತ್ಮಸ್ಥೆರ್ಯ ತುಂಬುವ ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ಅನುಕೂಲವಾಗುವ ಸಾಮಾಜಿಕ ಕಾರ್ಯಕ್ರಮ ಇದಾಗಿದೆ.

— > ನಡವತ್ತಿ ಕಾಂತರಾಜು, ಗ್ರಾಪಂ ಅಧ್ಯ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net