ಪವಿತ್ರಾ ಗೌಡ ಮಾಜಿ ಪತಿ ಸಂಜಯ್​ ಸಿಂಗ್​ ನಿಧನ; ಏನಾಗಿತ್ತು?..Pavithra Gowda

Pavithra Gowda's ex-husband Sanjay Singh passes away:
Pavithra Gowda's ex-husband Sanjay Singh passes away:
Published on

ಪ್ರಮುಖ ಮುಖ್ಯಾಂಶಗಳು

  • ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ಪವಿತ್ರಾ ಗೌಡ
  • ಪವಿತ್ರಾ ಗೌಡ ಮಾಜಿ ಪತಿ ಸಂಜಯ್​ ಸಿಂಗ್​ ನಿಧನ
  • ಸಾಕಷ್ಟು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು 7-8ತಿಂಗಳ ಹಿಂದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ
Pavithra Gowda's ex-husband Sanjay Singh passes away: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಜೈಲಿನಲ್ಲಿರುವ ಪವಿತ್ರಾ ಗೌಡ ಅವರ ಮಾಜಿ ಪತಿ ಸಂಜಯ್​ ಸಿಂಗ್​​ ಮೃತಪಟ್ಟಿದ್ದಾರೆ ಎನ್ನಲಾಗಿದೆ. 7-8 ತಿಂಗಳ ಹಿಂದೆಯೇ ಅವರು ನಿಧನರಾಗಿದ್ದು, ತಡವಾಗಿ

ವಿಷಯ

ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಕಳೆದ ಕೆಲವು ದಿನದ ಹಿಂದೆ ಪವಿತ್ರಾ ಗೌಡ ಅವರ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ಹೇಳಲಾಗಿತ್ತು. ಜೈಲಿನಲ್ಲೇ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎನ್ನುವ ಮಾಹಿತಿ ಇತ್ತು. ಆ ಬೆನ್ನಲ್ಲೇ ಸಂಜಯ್​ ಸಿಂಗ್​ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಮದ್ಯಸೇವನೆಯಿಂದ ಸಾವು ಶಂಕೆ

ಸಂಜಯ್​ ಸಿಂಗ್​ ಅವರು ಹಲವಾರು ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅದಕ್ಕಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯು ಪಡೆದುಕೊಳ್ಳುತ್ತಿದ್ದರು. ದುರದೃಷ್ಟವಶಾತ್​​​ ಚಿಕಿತ್ಸೆ ಫಲಕಾರಿಯಾಗದೆ ರಾಜಸ್ಥಾನದಲ್ಲೇ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ. ಪವಿತ್ರ ಗೌಡ ಅವರೊಂದಿಗಿನ ಡಿವೋರ್ಸ್​ ಕೇಸ್​ ನಂತರ ಸಂಜಯ್​ ಸಿಂಗ್​ ಹೆಚ್ಚು ಮದ್ಯ ಸೇವನೆ ಮಾಡುತ್ತಿದ್ದರು. ಇದೇ ಕಾರಣದಿಂದಾಗಿ ಅವರು ಕಾಯಿಲೆಗೆ ತುತ್ತಾಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಡಿವೋರ್ಸ್​ ಪಡೆದಿದ್ದ ಪವಿತ್ರಾ ಗೌಡ

ಮಾಧ್ಯಮಗಳ ವರದಿ ಪ್ರಕಾರ, ಪವಿತ್ರಾ ಗೌಡ ಮತ್ತು ಸಂಜಯ್​ ಸಿಂಗ್​ ಅವರು 2007ರ ಆಸುಪಾಸಿನಲ್ಲಿ ಪ್ರೀತಿಸಿ ಮದುವೆಯಾಗಿದ್ದರು. 2011ರಲ್ಲಿ ಡಿವೋರ್ಸ್​​ ಪಡೆದುಕೊಂಡಿದ್ದರು. ಇವರಿಗೆ ಒಬ್ಬ ಮಗಳಿದ್ದಾರೆ. ಡಿವೋರ್ಸ್​ ಬಳಿಕ ಪವಿತ್ರಾ ಗೌಡ ಹಾಗೂ ಸಂಜಯ್​ ಸಿಂಗ್​ ಜೊತೆಗೆ ಒಡನಾಟ ಇರಲಿಲ್ಲ.

ಪವಿತ್ರಾ ಗೌಡಗೂ ಜ್ವರ

ಪವಿತ್ರಾ ಗೌಡ ಅವರು ಜ್ವರದಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಸೂಕ್ತ ವೈದ್ಯಕೀಯ ಸೌಲಭ್ಯ ನೀಡುವಂತೆ ನ್ಯಾಯಾಧೀಶರು ಸೂಚನೆ ಕೊಟ್ಟಿದ್ದು, ಆರೋಗ್ಯ ಸುಧಾರಿಸಿದ ಬಳಿಕ ಕೇಸ್​ ಸಂಬಂಧ ವಿಡಿಯೋ ಕಾನ್ಫರೆನ್ಸ್​ ಮೂಲಕ ವಿಚಾರಣೆಗೆ ಹಾಜರಾಗುವಂತೆ ಸೂಚನೆ ಕೊಟ್ಟಿದ್ದಾರೆ ಎನ್ನಲಾಗಿದೆ.

ಪವಿತ್ರಾ ಗೌಡ ನನ್ನ ಮಗಳಿದ್ದಂತೆ

ಮಹಿಳಾ ಆಯೋಗ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿದ್ದ ವೇಳೆ, ಅಲ್ಲಿನ ಸ್ಥಿತಿ-ಗತಿ ಆಹಾರದ ಕ್ರಮದ ಬಗ್ಗೆ ಪರಿಶೀಲನೆ ನಡೆಸಿದ್ದರು. ಜೊತೆಗೆ ಮಹಿಳಾ ಕೈದಿಗಳ ಜೊತೆ ಮಾತನಾಡಿಸಿದ್ದರು. ಈ ಬಗ್ಗೆ ಮಾಧ್ಯಮಗಳ ಮುಂದೆ ಮಾತನಾಡಿದ ಅವರು, ಪವಿತ್ರಾ ಗೌಡ ನನ್ನ ಮಗಳಿದ್ದಂತೆ. ಅವರ ಮನಸ್ಥಿತಿ ಅಷ್ಟಾಗಿ ಚೆನ್ನಾಗಿಲ್ಲ, ನೊಂದಿದ್ದಾರೆ ಎಂದು ಹೇಳಿದರು, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net