ಸ್ವಯಂಪ್ರೇರಿತವಾಗಿ ಜನಗಣತಿಯಲ್ಲಿ ಭಾಗವಹಿಸಿ census

ಸ್ವಯಂಪ್ರೇರಿತವಾಗಿ ಜನಗಣತಿಯಲ್ಲಿ ಭಾಗವಹಿಸಿ census
ಸ್ವಯಂಪ್ರೇರಿತವಾಗಿ ಜನಗಣತಿಯಲ್ಲಿ ಭಾಗವಹಿಸಿ census
Published on
ಕೆಜಿಎಫ್:ವೆಬ್​ ಪೋರ್ಟಲ್​, ಮೊಬೈಲ್​ ಆ್ಯಪ್​, ಮ್ಯಾಪಿಂಗ್​ ತಂತ್ರಜ್ಞಾನ ಬಳಸಿ ದೇಶದ ಕಟ್ಟಕಡೆಯ ವ್ಯಕ್ತಿಯ ನಿಖರ ಮಾಹಿತಿ ಪಡೆಯಲು ಸರ್ಕಾರ ಮುಂದಾಗಿದ್ದು, ಸಾರ್ವಜನಿಕರು ಸ್ವಯಂಪ್ರೇರಿತವಾಗಿ ಈ ಜನಗಣತಿ ಕಾರ್ಯದಲ್ಲಿ ಭಾಗವಹಿಸಬೇಕು ಎಂದು ತಹಸೀಲ್ದಾರ್​ ಎಚ್​.ಜೆ. ಭರತ್​ ತಿಳಿಸಿದರು.census
ನಗರದ ಭಗವಾನ್​ ಮಹಾವೀರ್​ ಜೈನ್​ ಕಾಲೇಜಿನಲ್ಲಿ ನಗರಸಭೆ ಕಾರ್ಯಾಲಯ ಮತ್ತು ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಜನಗಣತಿ ಕುರಿತ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿ, ಈ ಬಾರಿ ನಡೆಯಲಿರುವ ಜನಗಣತಿ ಕಾರ್ಯಕ್ರಮವು ಡಿಜಿಟಲ್​ ರೂಪದಲ್ಲಿರುವುದರಿಂದ ದಾಖಲೆಗಳ ಗೋಜಿಲ್ಲದೇ, ಮನೆಯಲ್ಲೇ ಕುಳಿತು ಮೊಬೈಲ್​ನಲ್ಲೇ ನಮ್ಮ ಜನಗಣತಿ ನಾವೇ ಮಾಡುವ ಹೊಸ ಪ್ರಕ್ರಿಯೆಯಾಗಿದೆ ಎಂದರು.
ಗ್ರಾಮಾಂತರ ಪ್ರದೇಶದಲ್ಲಿ ಒಟ್ಟು 238 ಹೌಸ್​ ಲಿಸ್ಟಿಂಗ್​ ಬ್ಲಾಕ್ಸ್​ (ಎಚ್​ಎಲ್​ಬಿ) ಗಳನ್ನು ಗುರುತಿಸಲಾಗಿದ್ದು, 163 ಎನ್ಯುಮರೇಟರ್ಸ್​, 30 ಮಂದಿ ಮೇಲ್ವಿಚಾರಕರನ್ನು ಜನಗಣತಿ ಕಾರ್ಯಕ್ಕೆ ನಿಯೋಜಿಸಲಾಗಿದೆ. ನಗರ ಪ್ರದೇಶದಲ್ಲಿ ಒಟ್ಟು 190 ಹೌಸ್​ ಲಿಸ್ಟಿಂಗ್​ ಬ್ಲಾಕ್ಸ್​ (ಎಚ್​ಎಲ್​ಬಿ)ಗಳನ್ನು ಗುರುತಿಸಲಾಗಿದ್ದು, 220 ಎನ್ಯುಮರೇಟರ್ಸ್​, 35 ಮಂದಿ ಮೇಲ್ವಿಚಾರಕರನ್ನು ಜನಗಣತಿ ಕಾರ್ಯಕ್ಕೆ ನಿಯೋಜಿಸಲಾಗಿದೆ ಎಂದರು.
ದೇಶದಲ್ಲಿ ಮೊದಲ ಬಾರಿಗೆ ಸಂಪೂರ್ಣ ಡಿಜಿಟಲ್​ ಜನಗಣತಿ ನಡೆಯಲಿದ್ದು, ಇದರ ಮೊದಲ ಹಂತವಾದ ಮನೆಗಳ ಪಟ್ಟಿ ಮತ್ತು ಮನೆ ಗಣತಿಯು ರಾಜ್ಯದಲ್ಲಿಯೂ ಏ.1 ರಿಂದ 15 ರವರೆಗೆ ನಡೆಯಲಿದೆ. 33 ಪ್ರಶ್ನೆಗಳಿಗೆ ಉತ್ತರಿಸಿದರೆ ಮೊದಲ ಹಂತ ಮುಕ್ತಾಯವಾಗಲಿದ್ದು, 2ನೇ ಹಂತದ ಜನಗಣತಿ ಕಾರ್ಯಕ್ಕೆ ಮನೆಗೆ ಸಮೀಕ್ಷಾದಾರರು ಬಂದಾಗ ಐಡಿ ನೀಡಿದರೆ ಮುಗಿಯಿತು ಎಂದರು.
ಪೌರಾಯುಕ್ತ ಶ್ರೀಧರ್​ ಮಾತನಾಡಿ, ಇದು ಸಂಪೂರ್ಣ ಡಿಜಿಟಲ್​ ರೂಪದಲ್ಲಿದ್ದು, ಸಾಂಪ್ರದಾಯಿಕ ಕಾಗದ, ಪೆನ್ನು ಪದ್ಧತಿ ಕೈಬಿಡಲಾಗಿದೆ. ನಾಗರಿಕರು ವೆಬ್​ ಪೋರ್ಟಲ್​ನಲ್ಲಿ ತಮ್ಮ ಮನೆಯ ಸದಸ್ಯರ ವಿವರಗಳನ್ನು 15 ನಿಮಿಷಗಳಲ್ಲಿ ದಾಖಲಿಸಬಹುದು. ಮೊದಲ ಹಂತದಲ್ಲಿ ಮನೆಗಳ ಪಟ್ಟಿ/ಗಣತಿ, ಎರಡನೇ ಹಂತದಲ್ಲಿ ಜನಗಣತಿ ನಡೆಯಲಿದೆ. ಕುಟುಂಬದ ಸದಸ್ಯರು ಸ್ವಯಂ ನೋಂದಣಿ ಮಾಡಿದ ನಂತರ, ಮೊಬೈಲ್​/ಇಮೇಲ್​ ಮೂಲಕ ಐಡಿ ಪಡೆಯಬಹುದು. ಇದು ಗಣತಿದಾರರಿಗೆ ಮಾಹಿತಿ ನೀಡಲು ಸುಲಭವಾಗುತ್ತದೆ ಎಂದು ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net