Awareness ಗುಬ್ಬಿ ತಾಲೂಕಿನ ಸಿಎಸ್ ಪುರ ಗ್ರಾಮದಲ್ಲಿ ಆಯೋಜಿಸಿದ್ದ ಸ್ವಸಹಾಯ ಸಂ ಆರ್ಥಿಕ ಅರಿವು ಹಾಗೂ ಸಾಲ ಜೋಡಣೆ ಕಾರ್ಯಕ್ರಮದಲ್ಲಿ ಕೃಷಿ ವಿಸ್ತರಣಾಧಿಕಾರಿ ಬಿ.ಪವನ್, ಸತ್ಯಜಿತ್, ತಾಲೂಕು ಸಮಯೋಜಕರು ಸಂಸ್ಥೆಯ ಸಿಬ್ಬಂದಿ ನರಸಿಂಹಮೂರ್ತಿ ಎಚ್.ಆರ್ ರವೀಶ್ ಇದ್ದರು.
ಗುಬ್ಬಿ: ಮಹಿಳೆಯರು ಸಣ್ಣ ಉದ್ಯಮಗಳನ್ನು ಮಾಡಿಕೊಂಡು ಆರ್ಥಿಕವಾಗಿ Awareness ಸ್ವಾವಲಂಬಿತರಾಗಲು ಸಾಲ ಜೋಡಣೆ ಕಾರ್ಯಕ್ರಮ ದಾರಿದೀಪವಾಗಲಿದೆ ಎಂದು ಸಹಾಯಕ ಪ್ರಧಾನ ವ್ಯವಸ್ಥಾಪಕ ಗಂಗೇಶ್ ಗುಂಜನ್ ತಿಳಿಸಿದರು.
ತಾಲೂಕಿನ ಸಿಎಸ್ ಪುರ ಗ್ರಾಮದ ಕೆನರಾ ಬ್ಯಾಂಕ್ ಗುಬ್ಬಿ ಶಾಖೆ ಹಾಗೂ ಸಾಧನ ಎಜುಕೇಷನ್ ಆ್ಯಂಡ್ ರೂರಲ್ ಡೆವಲಪ್ಮೆಂಟ್ ಸೊಸೈಟಿ ಅಶ್ರಯದಲ್ಲಿ ಆಯೋಜಿಸಿದ್ದ ಸ್ವಸಹಾಯ ಸಂ ಆರ್ಥಿಕ ಅರಿವು ಹಾಗೂ ಸಾಲ ಜೋಡಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಾಲ ಪಡೆಯುವ ಮುನ್ನ ನಿಮ್ಮ ಕ್ರೆಡಿಟ್ ಸ್ಕೋರ್ ಉತ್ತಮವಾಗಿರಬೇಕು.
ಕೆನರಾ ಬ್ಯಾಂಕ್ ಕಡಿಮೆ ಬಡ್ಡಿ ದರದಲ್ಲಿ ವೇಗವಾಗಿ ಸಾಲ ಕೊಡುತ್ತದೆ. ಗ್ರಾಹಕರ ವಿವಿಧ ಅಗತ್ಯಗಳಿಗೆ ತಕ್ಕಂತೆ ಮನೆ, ವಾಹನ, ಶಿಣ, ವೈಯಕ್ತಿಕ, ಕೃಷಿ ಸಾಲಗಳನ್ನು ಕೆನರಾ ಬ್ಯಾಂಕ್ ನೀಡುತ್ತದೆ ಎಂದರು.
ಶಾಖಾ ವ್ಯವಸ್ಥಾಪಕ ಶುಭ್ರಾಂಶು ಕುಮಾರ್ ಮಿಶ್ರಾ ಮಾತನಾಡಿ, ಸಾಧನ ಸಂಸ್ಥೆಯು ತಾಲೂಕಿನಲ್ಲಿ 600 ಸ್ವಸಹಾಯ ಸಂಗಳಿಗೆ ನಮ್ಮ ಕೆನರಾ ಬ್ಯಾಂಕ್ನಿಂದ ಸಾಲ ಕೊಡಿಸಿರುತ್ತಾರೆ. ತಾಲೂಕಿನ 6,000 ಕುಟುಂಬಗಳಿಗೆ ಆಶ್ರಯರಾಗಿದ್ದಾರೆ. ಮುಖ್ಯವಾಗಿ ಸಂದ ಸದಸ್ಯರಿಂದ ಸರಿಯಾಗಿ ಸಾಲ ಮರುಪಾವತಿ ಮಾಡಿಸಬೇಕು ಎಂದರು.
ಸಾಧನ ಸಂಸ್ಥೆಯ ಕಾರ್ಯದರ್ಶಿ ಸಿ.ವಿದ್ಯಾ ಮಾತನಾಡಿ, ಸಾಲ ಪಡೆದುಕೊಂಡ ಸ್ವಸಹಾಯ ಸಂದ ಸದಸ್ಯರು ಆದಾಯ ಉತ್ಪನ್ನ ಚಟುವಟಿಕೆಗಳಿಗೆ ಸಾಲದ ಹಣ ಬಳಸಿಕೊಂಡಾಗ ಮಾತ್ರ ಮರುಪಾವತಿ ಮಾಡಲು ಸಾಧ್ಯ. ಮಹಿಳಾ ಸದಸ್ಯರು ಹೈನುಗಾರಿಕೆ ಮಾಡುವುದರ ಜತೆಗೆ ಆದಾಯ ಉತ್ಪನ್ನ ಚಟುವಟಿಕೆಗಳಲ್ಲಿ ಭಾಗಿಯಾಗಬೇಕೆಂದು ಸೂಚಿಸಿದರು.