ಅಲ್ಲದೆ, ಅರ್ಜಿದಾರರು 2003ರಲ್ಲಿ ಅರೆಕಾಲಿಕ ಸ್ಥಾನಮಾನದಿಂದ ಕಾಯಂ ಸ್ಥಾನ ಪಡೆದಿಲ್ಲ. ಹೊಸ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಿ ನೇಮಕಾತಿಗೊಂಡಿದ್ದಾರೆ. ಅವರ ನೇಮಕಾತಿ ಪತ್ರದಲ್ಲಿ 2003ರಿಂದಲೇ ಮೂಲ ವೇತನ ಮತ್ತು ಸೇವಾ ಷರತ್ತುಗಳು ಆರಂಭವಾಗುತ್ತದೆ ಎಂದು ಸ್ಪಷ್ಟವಾಗಿ ನಮೂದಿಸಲಾಗಿತ್ತು. ಅದಕ್ಕೆ ಯಾವುದೇ ಆಕ್ಷೇಪಣೆಗಳನ್ನು ವ್ಯಕ್ತಪಡಿಸದ ಅವರು ಸುಮಾರು 20 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಅರೆಕಾಲಿಕ ಸೇವೆಯನ್ನು ಕಾಯಂ ಸೇವೆ ಎಂದು ಪರಿಗಣಿಸಿ ಸೌಲಭ್ಯ ಒದಗಿಸ ಬೇಕು ಎಂಬುದಕ್ಕೆ ಯಾವುದೇ ದಾಖಲೆಗಳನ್ನು ಒದಗಿಸಿಲ್ಲ. ಆದ್ದರಿಂದ ಅರ್ಜಿ ಪುರಸ್ಕರಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.