ಕೆಂಭಾವಿ ಪಟ್ಟಣದ ಬಾಲಕರ ಪ್ರೌಢಶಾಲೆಯಲ್ಲಿ ಗುರುವಾರ ಅರಣ್ಯ ಇಲಾಖೆ ಸಹಯೋಗದಲ್ಲಿ ನಡೆದ ವನಮಹೋತ್ಸವದಲ್ಲಿ ಸಸಿಗಳನ್ನು ನೆಡಲಾಯಿತು. ಜಿಪಂ ಮಾಜಿ ಅಧ್ಯಕ್ಷ ಸಿದ್ದನಗೌಡ ಪೊಲೀಸ್ ಪಾಟೀಲ್, ವಲಯ ಅರಣ್ಯಾಽಕಾರಿ ಅನೀಲಕುಮಾರ ಲೋಣಿ, ಮುಖ್ಯಗುರು ವಿಶ್ವನಾಥ ಹರಸೂರ ಇತರರಿದ್ದರು.
ಕೆಂಭಾವಿ:ಪರಿಸರ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸಿದ್ದನಗೌಡ ಪೊಲೀಸ್ ಪಾಟೀಲ್ ಹೇಳಿದರು.
ಪಟ್ಟಣದ ಬಾಲಕರ ಪ್ರೌಢಶಾಲೆಯಲ್ಲಿ ಅರಣ್ಯ ಇಲಾಖೆ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡ ವನಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಮಕ್ಕಳು ಈಗಿನಿಂದಲೇ ಮರಗಳನ್ನು ನೆಟ್ಟು ಅವುಗಳನ್ನು ಪೋಷಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು. ಒಂದು ಮರ ನೂರು ಜನರಿಗೆ ಜೀವ ನೀಡುವಷ್ಟು ಅಮೂಲ್ಯವಾಗಿದ್ದು, ಹಸಿರು ಪರಿಸರ ಉಳಿಸುವಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.
ವಲಯ ಅರಣ್ಯಾಽಕಾರಿ ಅನೀಲಕುಮಾರ ಲೋಣಿ ಮಾತನಾಡಿ, ವನಮಹೋತ್ಸವದ ಉದ್ದೇಶ ಕೇವಲ ಸಸಿ ನೆಡುವುದಲ್ಲ, ಅವುಗಳನ್ನು ಸಂರಕ್ಷಿಸಿ ಬೆಳೆಸುವುದಾಗಿದೆ. ಅರಣ್ಯಗಳು ಮಳೆ, ನೀರು ಹಾಗೂ ಜೀವ ವೈವಿಧ್ಯತೆಯ ಮೂಲವಾಗಿದ್ದು, ಪ್ರತಿಯೊಬ್ಬರೂ ವರ್ಷಕ್ಕೊಂದು ಸಸಿಯಾದರೂ ನೆಟ್ಟು ಪೋಷಿಸಬೇಕು. ಅರಣ್ಯ ನಾಶವನ್ನು ತಡೆಯುವ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನಿರ್ಮಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ವಿದ್ಯಾರ್ಥಿಗಳಿಗೆ ಹೇಳಿದರು.
ನಂದಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಿ.ಸಿ.ಪಾಟೀಲ್ ಹಾಗೂ ವೈದ್ಯಾಽಕಾರಿ ಡಾ.ಗಿರೀಶ ಕುಲಕರ್ಣಿ ಪರಿಸರ ಸಂರಕ್ಷಣೆ ಮತ್ತು ಆರೋಗ್ಯಕರ ಜೀವನದಲ್ಲಿ ಮರಗಳ ಮಹತ್ವ ಕುರಿತು ಮಾತನಾಡಿದರು.
ಉಪ ವಲಯ ಅರಣ್ಯಾಽಕಾರಿ ಶ್ರೀಧರ, ಮುಖ್ಯಗುರು ವಿಶ್ವನಾಥ ಹರಸೂರ, ಕೆ.ಆರ್. ಪಾಟೀಲ್, ಬಾಬುಗೌಡ ಮಾಲಿ ಪಾಟೀಲ್, ಶಶಿಕುಮಾರ, ಶ್ರೀಶೈಲ ಕಾಚಾಪುರ, ಅಂಬರೀಷ ಆಲ್ದಾಳ, ರಾಜಶೇಖರ, ವಿಶಾಲ ಲೋಣಿ ಇತರರಿದ್ದರು. ಬಸವರಾಜ ಬಂಟನೂರ ನಿರೂಪಣೆ ಮಾಡಿದರು. ಶ್ರೀಕಾಂತ ವಂದಿಸಿದರು.