ಪಾಲಕರು ಹೋಲಿಕೆ ಬಿಟ್ಟು ಮಕ್ಕಳನ್ನು ಪ್ರೇರೇಪಿಸಲಿ

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಂದ 25 ಕಿರುಪುಸ್ತಕಗಳ ಲೋಕಾರ್ಪಣೆ
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಂದ 25 ಕಿರುಪುಸ್ತಕಗಳ ಲೋಕಾರ್ಪಣೆ
Published on
ಧಾರವಾಡ: ಇಂದು ಮೊಬೈಲ್​ ಅತಿಯಾಗಿ ಬಳಕೆಯಾಗುತ್ತಿದೆ. ಈಗ ರೀಲ್ಸ್​ ಯುಗ ಆರಂಭವಾಗಿದೆ. ಮೊಬೈಲ್​ ಮಕ್ಕಳ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಪಾಲಕರು ಮತ್ತೊಂದು ಮಗುವಿನೊಂದಿಗೆ ಹೋಲಿಕೆ ಮಾಡುವುದರಿಂದ ಮಕ್ಕಳ ಮನಸ್ಸು ಹಾಳಾಗುತ್ತದೆ. ಮಕ್ಕಳನ್ನು ಸದಾಕಾಲ ಪ್ರೇರೇಪಿಸಬೇಕು ಎಂದು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ನಗರದ ಸೃಜನಾ ಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಧಾರವಾಡ ಮಕ್ಕಳ ಅಕಾಡೆಮಿ ರಜತ ಮಹೋತ್ಸವ Children's Academy Silver Jubilee ಕಾರ್ಯಕ್ರಮದಲ್ಲಿ ಅಕಾಡೆಮಿಯಿಂದ ಪ್ರಕಟಿಸಿದ 25 ಕಿರುಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಉತ್ತಮ ಅಂಕ ಗಳಿಕೆ, ನೌಕರಿ ಪಡೆಯಬೇಕೆಂಬ ಓಟಕ್ಕೆ ಬಿದ್ದಿರುವ ಮಕ್ಕಳಿಗೆ, ಇದನ್ನು ಬಿಟ್ಟರೆ ಬೇರೆ ಪ್ರಪಂಚದ ಅರಿವು ಆಗುವುದಿಲ್ಲ. ಅವಿಭಕ್ತ ಕುಟುಂಬಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು. ಅಂಕ ಗಳಿಕೆಯೇ ಜೀವನ ಎಂಬ ಮನೋಭಾವ ಪಾಲಕರಲ್ಲಿ ಮೊದಲು ಕಡಿಮೆ ಆಗಬೇಕು. ಮಕ್ಕಳಿಗೆ ಆತ್ಮವಿಶ್ವಾಸ ಬೆಳೆಸುವ ಕೆಲಸ ಮಾಡಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ವಿಧಾನ ಪರಿಷತ್​ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಇಂತಹ ಅಕಾಡೆಮಿಗಳ ಕಾರ್ಯ ಅವಶ್ಯಕ. ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಿಕೊಡಬೇಕು. ಮಾನಸಿಕ ನೆಮ್ಮದಿಯ ಜತೆಗೆ ಉತ್ತಮ ಸಂಸ್ಕಾರ ಕೊಡುವ ಕೆಲಸ ಮಾಡಬೇಕು. ಅಂದಾಗ ಮಾತ್ರ ಮಕ್ಕಳು ಉತ್ತಮ ಹಾಗೂ ಆದರ್ಶವಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದರು.
ಇದೇವೇಳೆ ಮಕ್ಕಳ ಅಕಾಡೆಮಿಯ "ಬಾಲದೀಪ್ತಿ' ಪುರಸ್ಕಾರವನ್ನು ಹೆರಿಗೆ ತಜ್ಞೆ ಡಾ. ಕುಮುದ ಮೋಹನ್​ ತಾವರಗೇರಿ ಅವರಿಗೆ, ಉತ್ತಮ ಗಾಯಕ ಪ್ರಶಸ್ತಿಯನ್ನು ಕೃಷ್ಣಮೂತಿರ್ ಕಟ್ಟಿಮನಿ ಅವರಿಗೆ ಪ್ರದಾನ ಮಾಡಲಾಯಿತು. ಶಾಲಾ ಮಕ್ಕಳಿಗೆ ಏರ್ಪಡಿಸಿದ್ದ ಇಂಗ್ಲಿಷ್​ ಮತ್ತು ಕನ್ನಡ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿ ವಿತರಿಸಲಾಯಿತು.
ಇದೇವೇಳೆ ಅಕಾಡೆಮಿಯಿಂದ ದತ್ತು ಪಡೆದ ತಾಲೂಕಿನ ಮಡಕಿಕಪ್ಪ ಗ್ರಾಮದ ಬಾಗುಬಾಯಿ ಮತ್ತು ತುಕಾರಾಂ ದಂಪತಿಗೆ ನವೀಕೃತ ಮನೆಯನ್ನು ಹಸ್ತಾಂತರ ಮಾಡಲಾಯಿತು.
ಪಾಲಿಕೆ ಮೇಯರ್​ ಜ್ಯೋತಿ ಪಾಟೀಲ, ಅಕಾಡೆಮಿ ಅಧ್ಯಕ್ಷ ಡಾ. ರಾಜನ್​ ದೇಶಪಾಂಡೆ ಮಾತನಾಡಿದರು. ಪಂ. ವೆಂಕಟೇಶ ಕುಮಾರ, ಅಕಾಡೆಮಿ ಕಾರ್ಯದಶಿರ್ ಎಂ.ವೈ. ಸಾವಂತ, ವಿ.ಡಿ. ಕಾಮರಡ್ಡಿ, ಸಿ.ಯು. ಬೆಳ್ಳಕ್ಕಿ, ಶ್ರೀಕಾಂತ ದೊಡವಾಡ, ಇತರರಿದ್ದರು.
ನಂತರ ಮಕ್ಕಳಿಂದ ವಿವಿಧ ಸಾಂಸತಿಕ ಕಾರ್ಯಕ್ರಮಗಳು ಜರುಗಿದವು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net