ಪಾಲಕರು ಮಕ್ಕಳ ಸಂಸ್ಕಾರದತ್ತ ಗಮನಹರಿಸಿ

ಮುದ್ದೇಬಿಹಾಳ ತಾಲೂಕಿನ ನಾಗರಬೆಟ್ಟ ಗ್ರಾಮದ ಎಕ್ಸ್‌ಪರ್ಟ್ ಪಿಯು ಸೈನ್ಸ್ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಜ್ಯ ಮಟ್ಟದ ಟ್ಯಾಲೆಂಟ್ ಅವಾರ್ಡ್ ಪರೀಕ್ಷೆಯ ವಿಜೇತ ವಿದ್ಯಾರ್ಥಿಗಳಿಗೆ ನಗದು ಬಹುಮಾನ ವಿತರಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಬಿ.ಜಿ. ಮಠ, ಉಪನ್ಯಾಸಕ ರಾಜು ಮೋಟಗಿ, ವಿರೂನಾಯಕ, ಬಸಯ್ಯ ಹಿರೇಮಠ ಮತ್ತಿತರರಿದ್ದರು.
ಮುದ್ದೇಬಿಹಾಳ ತಾಲೂಕಿನ ನಾಗರಬೆಟ್ಟ ಗ್ರಾಮದ ಎಕ್ಸ್‌ಪರ್ಟ್ ಪಿಯು ಸೈನ್ಸ್ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಜ್ಯ ಮಟ್ಟದ ಟ್ಯಾಲೆಂಟ್ ಅವಾರ್ಡ್ ಪರೀಕ್ಷೆಯ ವಿಜೇತ ವಿದ್ಯಾರ್ಥಿಗಳಿಗೆ ನಗದು ಬಹುಮಾನ ವಿತರಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಬಿ.ಜಿ. ಮಠ, ಉಪನ್ಯಾಸಕ ರಾಜು ಮೋಟಗಿ, ವಿರೂನಾಯಕ, ಬಸಯ್ಯ ಹಿರೇಮಠ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಉಪನ್ಯಾಸಕ ರಾಜು ಮೋಟಗಿ ಸಲಹೆ
  • ರಾಜ್ಯ ಮಟ್ಟದ ಟ್ಯಾಲೆಂಟ್ ಅವಾರ್ಡ್ ಪರೀಕ್ಷೆ
ಮುದ್ದೇಬಿಹಾಳ: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪಾಲಕರು ಕೇವಲ ಹಣ ಗಳಿಕೆಯ ಕಡೆಗೆ ಗಮನ ಹರಿಸುತ್ತಿರುವುದು ವಿಷಾದನೀಯ. ಪಾಲಕರು ಈ ಆಲೋಚನೆಯನ್ನು ಬಿಟ್ಟು ಮಕ್ಕಳ ಭವಿಷ್ಯ ಹಾಗೂ ಸಂಸ್ಕಾರದತ್ತ ಹೆಚ್ಚಿನ ಕಾಳಜಿ ವಹಿಸಬೇಕು. ಮನೆಯೇ ಮೊದಲ ಪಾಠ ಶಾಲೆ ಎಂಬಂತೆ, ತಂದೆ-ತಾಯಿ ನಡವಳಿಕೆ ಮಕ್ಕಳಲ್ಲಿ ಜವಾಬ್ದಾರಿಯನ್ನು ಮೂಡಿಸುತ್ತದೆ ಎಂದು ಇಂಗ್ಲಿಷ್ ಉಪನ್ಯಾಸಕ ರಾಜು ಮೋಟಗಿ ಹೇಳಿದರು.
ತಾಲೂಕಿನ ನಾಗರಬೆಟ್ಟ ಗ್ರಾಮದ ಪ್ರತಿಷ್ಠಿತ ಎಕ್ಸ್‌ಪರ್ಟ್ ಪಿಯು ಸೈನ್ಸ್ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಬೃಹತ್ ರಾಜ್ಯ ಮಟ್ಟದ ಟ್ಯಾಲೆಂಟ್ ಅವಾರ್ಡ್-2026 ಪರೀಕ್ಷಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಸಂಸ್ಕಾರ ನೀಡುವ ಶಿಕ್ಷಣ ಸಂಸ್ಥೆಗಳಿಂದ ಮಾತ್ರ ಉತ್ತಮ ಪ್ರಜೆಗಳನ್ನು ರೂಪಿಸಲು ಸಾಧ್ಯ ಎಂದರು.
ಎಸ್‌ಡಿಕೆ ಪ್ರೌಢಶಾಲಾ ಮುಖ್ಯೋಪಾಧ್ಯಾಯ ವಿರೂನಾಯಕ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಎಕ್ಸ್‌ಪರ್ಟ್ ಸಂಸ್ಥೆ ಕೇವಲ ಹಣಕ್ಕಾಗಿ ಕೆಲಸ ಮಾಡದೆ, ಮಕ್ಕಳ ಪ್ರತಿಭೆ ಗುರುತಿಸುವಲ್ಲಿ ಈ ಸಂಸ್ಥೆ ಪ್ರಾಮಾಣಿಕವಾಗಿದೆ ಎಂದು ಪ್ರಶಂಸಿಸಿದರು.
ಎಕ್ಸ್‌ಪರ್ಟ್ ಸಂಸ್ಥೆಯ ಅಧ್ಯಕ್ಷ ಬಿ.ಜಿ. ಮಠ ಮಾತನಾಡಿ, ನಮ್ಮ ಸಂಸ್ಥೆಯಲ್ಲಿ ಕಲಿತ ಹೆಚ್ಚು ಮಕ್ಕಳು ವೈದ್ಯಕೀಯ ಸೀಟುಗಳನ್ನು ಪಡೆದಿದ್ದಾರೆ. ಈ ಬಾರಿಯ ಪರೀಕ್ಷೆಯಲ್ಲಿ ಆಯ್ಕೆಯಾದ ಟಾಪ್ಸ್ 20 ವಿದ್ಯಾರ್ಥಿಗಳಿಗೆ ಎರಡು ವರ್ಷ ಸಂಪೂರ್ಣ ಉಚಿತ ಶಿಕ್ಷಣ ನೀಡಲಾಗುವುದು ಎಂದು ಘೋಷಿಸಿದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ 1350 ವಿದ್ಯಾರ್ಥಿಗಳಲ್ಲಿ ಗಂಗಮ್ಮ ಕೋಳೂರ (ಪ್ರಥಮ ಸ್ಥಾನ) 25,000 ರೂ. ನಗದು, ಅಧಿತಿ ರಾಜಮಾನ್ಯೆ (ದ್ವಿತೀಯ ಸ್ಥಾನ) 20,000 ರೂ ನಗದು, ಸುಪ್ರಿತ್ ಪಾಟೀಲ (ತೃತೀಯ ಸ್ಥಾನ) 15,000 ರೂ. ನಗದು, ಅಪೂರ್ವ ಮುಲಿಮನಿ (ನಾಲ್ಕನೇ ಸ್ಥಾನ) 10,000 ರೂ. ನಗದು, ಕಾರ್ತಿಕ್ ಜಲಪೂರ (ಐದನೇ ಸ್ಥಾನ) 5,000 ರೂ. ನಗದು ಪಡೆದುಕೊಂಡರು. ಇದೇ ಸಂದರ್ಭದಲ್ಲಿ ಮೆಡಿಕಲ್ ಸೀಟು ಪಡೆದ ಹಳೆಯ ವಿದ್ಯಾರ್ಥಿಗಳಾದ ವಾಣಿಶ್ರೀ ಹಳ್ಳದ ಮತ್ತು ಸುಮಿತ್ ಬಗೆಲ್ ಅವರನ್ನು ಸನ್ಮಾನಿಸಲಾಯಿತು. ವಿಜ್ಞಾನ ಶಿಕ್ಷಕ ಎಸ್.ಎಸ್. ಚಿತ್ತರಗಿ, ಶಿಕ್ಷಕ ಬಸಯ್ಯ ಪುರವಂತರಮಠ, ಸಿಆರ್‌ಪಿ ಎ.ಸಿ. ಕಸಬೇಗೌಡ, ವಿರೇಶ ನವಲಿ, ಆಡಳಿತಾಧಿಕಾರಿ ಪ್ರಜ್ವಲ್ ಮಠ, ಕಾರ್ಯದರ್ಶಿ ಸಿದ್ಧಯ್ಯ ಹಿರೇಮಠ, ಪ್ರಾಂಶುಪಾಲ ಇರ್ಫಾನ್ ಬಾಗವಾನ, ಮುಖ್ಯಗುರು ಶಿವಯ್ಯ ಹಿರೇಮಠ ಮತ್ತಿತರರಿದ್ದರು. ಮಲ್ಲಿಕಾರ್ಜುನ ಕಂಬಳಿ ಕಾರ್ಯಕ್ರಮ ನಿರೂಪಿಸಿದರು, ರವಿ ಪೂಜಾರಿ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net