

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:ಶ್ರೀಜಗದ್ಗುರುವಿಶ್ವಾರಾಧ್ಯ ಜನಕಲ್ಯಾಣ ಪ್ರತಿಷ್ಠಾನವಾರಣಾಸಿಯು ಪ್ರತಿವರ್ಷ ಕೊಡಮಾಡುವ‘ಪಂಚಾಚಾರ್ಯಶ್ರೀ’ ಮತ್ತು ‘ಶಿವಕಮಲಸಾಹಿತ್ಯ’ ಪ್ರಶಸ್ತಿಯನ್ನುಪ್ರಕಟಿಸಿದೆ.
ಪಂಚಾಚಾರ್ಯಶ್ರೀಪ್ರಶಸ್ತಿಗೆ ಇತ್ತೀಚೆಗೆ ಕಾಶೀಸಂಪೂರ್ಣಾನಂದ ಸಂಸ್ಕೃತವಿಶ್ವವಿದ್ಯಾಲಯದಲ್ಲಿ ವೇದಾಂತಚಾರ್ಯಪದವಿಯಲ್ಲಿ 3ಚಿನ್ನದ ಪದಕಗಳಿಸಿರುವ ಮಹಾರಾಷ್ಟ್ರದ ಬಾರ್ಶಿದಹಿವಡಕರ್ ಮಠದ ಶ್ರೀ ಗುರುಸಿದ್ದ ಮಣಿಕಂಠಶಿವಾಚಾರ್ಯ ಸ್ವಾಮೀಜಿ ಆಯ್ಕೆಯಾಗಿದ್ದು,ಪ್ರಶಸ್ತಿಯು25 ಸಾವಿರನಗದು ಮತ್ತು ಫಲಕವನ್ನು ಒಳಗೊಂಡಿದೆ.ಟ್ರಸ್ಟಿನ ಪೋಷಕಮಂಡಳಿ ಸದಸ್ಯರಾದ ಶಾಂತಾ ವಿ.ಗೌಡ್ಅವರು ಬಿ.ಆರ್.ವಿಗೌಡ್ ಅವರ ಸ್ಮರಣಾರ್ಹ ಈ ಪ್ರಶಸ್ತಿಯಪ್ರಾಯೋಜಕರಾಗಿದ್ದಾರೆ.
ಜ.1ರಿಂದಬೆಂಗಳೂರಿನ ವಿಜಯನಗರದಲ್ಲಿರುವಶ್ರೀಬಸವೇಶ್ವರ ಸುಜ್ಞಾನ ಮಂಟಪದಲ್ಲಿಆರಂಭವಾಗುವ ಕಾಶೀ ಜಗದ್ಗುರುಗಳಇಷ್ಟಲಿಂಗ ಪೂಜೆ ಮತ್ತು ಶ್ರೀಸಿದ್ಧಾಂತಶಿಖಾಮಣಿ ಆಧ್ಯಾತ್ಮಿಕ ಆಶೀರ್ವಚನಸಮಾರಂಭದಲ್ಲಿ ಜ.4ರಂದುಪ್ರಶಸ್ತಿ ಪ್ರದಾನ ನಡೆಯಲಿದೆ.
ಶಿವಕಮಲಸಾಹಿತ್ಯ ಪ್ರಶಸ್ತಿಗೆ ಯುವ ಸಾಹಿತಿಮತ್ತು ಪತ್ರಕರ್ತ,ಪ್ರಶಾಂತರಿಪ್ಪನ್‌ಪೇಟೆ ಆಯ್ಕೆಯಾಗಿದ್ದಾರೆ.ಪ್ರಶಸ್ತಿಯು11 ಸಾವಿರನಗದು ಮತ್ತು ಫಲಕವನ್ನು ಒಳಗೊಂಡಿದ್ದು,ಬೆಂಗಳೂರಿನದಾನಚಿಂತಾಮಣಿ ಶಿವಪ್ಪ ಶೆಟ್ಟರುಮತ್ತು ಕಮಲಮ್ಮ ದಂಪತಿಗಳ ಸ್ಮಾರಕವಾಗಿಅವರ ಪುತ್ರ ವಾಗಿಶ್ ಪ್ರಸಾದ್ಅವರು ಪ್ರಶಸ್ತಿಯ ಪ್ರಾಯೋಜಕರಾಗಿದ್ದಾರೆ. ಜ.5ರಂದುಬೆಳಗ್ಗೆ 11 ಗಂಟೆಗೆನಡೆಯಲಿರುವ ಸಮಾರೋಪ ಸಮಾರಂಭದಲ್ಲಿಪ್ರಶಸ್ತಿ ಪ್ರದಾನ ನಡೆಯಲಿದೆಎಂದು ಪ್ರತಿಷ್ಠಾನದ ಗೌ.ಕಾರ್ಯದರ್ಶಿಡಾ.ಸಿ.ಯು.ಉಮಾದೇವಿಉಮಾಶಂಕರ್ ತಿಳಿಸಿದ್ದಾರೆ.
ಸಾ.ಶಿ.ಮರುಳಯ್ಯ,ಡಾ.ಸಂಗಮೇಶ್ಸವದತ್ತಿಮಠ,ಡಾ.ಎಂ.ಶಿವಕುಮಾರಸ್ವಾಮಿಕೋ.ರಂ.ಬಸವರಾಜ್,ಡಾ.ಷಣ್ಮುಖಯ್ಯಅಕ್ಕೂರ್‌ಮಠ, ಡಾ.ಸಿ.ಶಿವಕುಮಾರಸ್ವಾಮಿ, ಪ್ರೊ. ಸಿ.ಮಹಾದೇವಪ್ಪ, ಪ್ರೊ.ಎನ್.ಬಸವಾರಾಧ್ಯ, ಡಾ.ಸಿ.ಯು.ಮಂಜುನಾಥ, ಡಾ.ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಡಾ.ಎಂ.ಜಿ.ನಾಗರಾಜ್ ಡಾ.ಮಲಯಶಾಂತಮುನಿಶಿವಾಚಾರ್ಯ ಸ್ವಾಮೀಜಿ ಸೇರಿದಂತೆಹಲವು ಹಿರಿಯ ವಿದ್ವಾಂಸರು ಈ ಹಿಂದೆಪ್ರಶಸ್ತಿಗೆ ಭಾಜನರಾಗಿದ್ದರು.
ಶ್ರೀ ಗುರುಸಿದ್ದ ಮಣಿಕಂಠ ಶಿವಾಚಾರ್ಯ ಸ್ವಾಮೀಜಿ ಮೂಲತಃ ಆಂಧ್ರಪ್ರದೇಶದವರಾಗಿದ್ದು, ಶ್ರೀಶೈಲ ಗುರುಕುಲದಲ್ಲಿ ವೇದಾಧ್ಯಯನ್ನು ಮಾಡಿ ಉನ್ನತ ಅಧ್ಯಯನಕ್ಕಾಗಿ ಕಾಶೀ ಪೀಠದ ಗುರುಕುಲದಲ್ಲಿ ಪ್ರವೇಶ ಪಡೆದು ಕಾಶೀ ಸಂಪೂರ್ಣಾನಂದ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಶಕ್ತಿವಿಶಿಷ್ಟಾದ್ವೈತ ಸಿದ್ಧಾಂತದಲ್ಲಿ ವೇದಾಂತಾಚಾರ್ಯ (ಎಂಎ) ಪದವಿಯನ್ನು ಮೂರು ಚಿನ್ನದ ಪದಕದೊಂದಿಗೆ ಪಡೆದಿದ್ದಾರೆ.
ಪ್ರಶಾಂತ ರಿಪ್ಪನ್ಪೇಟೆ ಮೂಲತಃ ಶಿವಮೊಗ್ಗ ಜಿಲ್ಲೆಯ ರಿಪ್ಪನ್ಪೇಟೆಯವರಾಗಿದ್ದು, ಕಳೆದ 20 ವರ್ಷದಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ವೃತ್ತಿಯಲ್ಲಿ ಪತ್ರಕರ್ತರಾಗಿ, ಪ್ರವೃತ್ತಿಯಲ್ಲಿ ಸಾಹಿತ್ಯ, ಉಪನ್ಯಾಸ, ರಂಗಭೂಮಿ ಇತ್ಯಾದಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದು, ದೇಶದ ಉದ್ದಗಲಕ್ಕೂ ಸಂಚರಿಸಿ ವಿಶೇಷ ಸ್ಥಳಗಳನ್ನು ತಮ್ಮ ಲೇಖನಗಳ ಮೂಲಕ ಮತ್ತು ದೃಶ್ಯ ಮಾಧ್ಯಮದ ಮೂಲಕ ಹಲವು ಕ್ಷೇತ್ರಗಳನ್ನು ಪರಿಚಯಿಸಿದ್ದಾರೆ. ಈ ವರೆಗೆ 6 ಪುಸ್ತಕ ಮತ್ತು 2 ಸಿಡಿ ಬಿಡುಗಡೆಯಾಗಿದ್ದು, 2 ಐತಿಹಾಸಿಕ ಕಿರುಚಿತ್ರಗಳನ್ನು ನಿರ್ಮಿಸಿದ್ದಾರೆ.