ಅಜ್ಜನ ಜಾತ್ರೆಯಲ್ಲಿ ಪಕ್ವಾನ್ನ ಭೋಜನ

ತಾಳಿಕೋಟೆಯ ಶ್ರಿ ಖಾಸ್ಗತೇಶ್ವರ ಜಾತ್ರೊೃೀತ್ಸವಕ್ಕೆ ಶೇಂಗಾ ಹೋಳಿಗೆ ಸಿದ್ದಪಡಿಸಿ ಬುತ್ತಿರೊಟ್ಟಿ ತಲೆ ಮೇಲೆ ಹೊತ್ತು ಶ್ರೀಮಠಕ್ಕೆ ಬರುತ್ತಿರುವ ಗ್ರಾಮೀಣ ಭಾಗದ ಭಕ್ತರು.
ತಾಳಿಕೋಟೆಯ ಶ್ರಿ ಖಾಸ್ಗತೇಶ್ವರ ಜಾತ್ರೊೃೀತ್ಸವಕ್ಕೆ ಶೇಂಗಾ ಹೋಳಿಗೆ ಸಿದ್ದಪಡಿಸಿ ಬುತ್ತಿರೊಟ್ಟಿ ತಲೆ ಮೇಲೆ ಹೊತ್ತು ಶ್ರೀಮಠಕ್ಕೆ ಬರುತ್ತಿರುವ ಗ್ರಾಮೀಣ ಭಾಗದ ಭಕ್ತರು.
Published on

ಪ್ರಮುಖ ಮುಖ್ಯಾಂಶಗಳು

  • ಖಾಸ್ಗತೇಶ್ವರ ಭಕ್ತರಿಗೆ ಇಂದು ಮಿರ್ಚಿ-ಬಜಿ, ಪಲಾವ್, ಶೇಂಗಾ ಹೋಳಿಗೆ ಪ್ರಸಾದ
  • ಹೋಳಿಗೆ ಜಾತ್ರೆ ಎಂದೇ ಪ್ರಸಿದ್ಧಿ
ತಾಳಿಕೋಟೆ: ಐತಿಹಾಸಿಕ ಹಿನ್ನೆಲೆ ಹೊಂದಿದ ‘ಅಜ್ಜನ ಜಾತ್ರೆ’ಎಂದೇ ಪ್ರಸಿದ್ಧಿ ಹೊಂದಿರುವ ಶ್ರೀ ಖಾಸ್ಗತೇಶ್ವರ ಜಾತ್ರೆ ನಿಮಿತ್ತ ನಿತ್ಯ ದಾಸೋಹದ ವಿವಿಧ ಪ್ರಸಾದದಲ್ಲಿ ಈ ಭಾರಿ ಭಕ್ತರಿಗೆ ಪಕ್ವಾನ್ನ ಭೋಜನದ ಪ್ರಸಾದದ ಜತೆಗೆ ಜು. 23ರಂದು ಮಿರ್ಚಿ-ಬಜಿ, ಲಾವ್, ಶೇಂಗಾದ ಹೋಳಿಗೆ ಪ್ರಸಾದ ಭಕ್ತರಿಗೆ ಉಣಬಡಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಭಕ್ತರಿಂದ ರೊಟ್ಟಿ, ಶೇಂಗಾ ಹೋಳಿಗೆ ಅರ್ಪಣೆ:
ತಾಲೂಕಿನಾದ್ಯಂತ ಭಕ್ತ ಸಮೂಹ ಖಾಸ್ಗತೇಶ್ವರ ಜಾತ್ರೆ ನಿಮಿತ್ತ ಅವಶ್ಯಕ ದವಸ ಧಾನ್ಯಗಳಲ್ಲದೇ ರೊಟ್ಟಿ ಇನ್ನಿತರೆ ಪದಾರ್ಥಗಳನ್ನು ಶ್ರೀಮಠಕ್ಕೆ ತಂದು ಅರ್ಪಿಸುತ್ತಿದ್ದಾರೆ. ಈ ಭಾರಿ ಪ್ರತಿ ಗ್ರಾಮದಿಂದಲೂ ಐದು ಸಾವಿರಕ್ಕೂ ಅಧಿಕ ಶೇಂಗಾ ಹೋಳಿಗೆಯನ್ನು ತಯಾರಿಸಿ ಅದರ ಜತೆಗೆ ತುಪ್ಪಾ, ರೊಟ್ಟಿ ಕಟ್ಟಿದ ಬುತ್ತಿಯನ್ನು ತಲೆಯ ಮೇಲೆ ಹೊತ್ತುಕೊಂಡು ಪಾದಯಾತ್ರೆ ಮೂಲಕ ಶ್ರೀಮಠಕ್ಕೆ ಆಗಮಿಸಿ ಭಕ್ತರಿಗೆ ಉಣಬಡಿಸುವ ಕಾರ್ಯದಲ್ಲಿ ತೊಡಗಿದ್ದು, ಈ ಭಾರಿಯ ಜಾತ್ರೆಯು ‘ಹೋಳಿಗೆ ಜಾತ್ರೆ’ ಎಂದೇ ಪ್ರಸಿದ್ಧಿ ಪಡೆಯುತ್ತಿದೆ.
26ರಂದು ಗೋಪಾಲ ಕಾವಲಿ
ಖಾಸ್ಗತ ಮಹಾ ಶಿವಯೋಗಿಗಳ ಜಾತ್ರೆ ಹಾಗೂ ರಥೋತ್ಸವ ಅಂಗವಾಗಿ ಜು. 26ರಂದು ನಸುಕಿನ ಜಾವ 5.30ಕ್ಕೆ ಅಸಂಖ್ಯಾತ ಭಕ್ತ ಸಮೂಹದ ಸಮ್ಮುಖದಲ್ಲಿ ಗೋಪಾಲ ಕಾವಲಿ (ಮೊಸರು ಗಡಿಗೆ) ಒಡೆಯುವ ಕಾರ್ಯಕ್ರಮ ಜರುಗಲಿದೆ. ಒಂಬತ್ತು ದಿನಗಳ ಕಾಲ ನಡೆದು ಬಂದ ಸಪ್ತ ಭಜನಾ ಕಾರ್ಯಕ್ರಮ ಗೋಪಾಲ ಕಾವಲಿ (ಮೊಸರು ಗಡಿಗೆ) ಒಡೆಯುವುದರ ಮೂಲಕ ಮಂಗಲಗೊಳ್ಳಲಿದೆ.
ಶ್ರೀಮಠದ ಬಾಲಶಿವಯೋಗಿ ಶ್ರೀ ಸಿದ್ಧಲಿಂಗ ದೇವರು ಅಧ್ಯಕ್ಷತೆಯಲ್ಲಿ ಜರುಗಲಿರುವ ಈ ಗೋಪಾಲ ಕಾವಲಿ ಒಡೆಯುವ ಮುಂಚೆ ಭವ್ಯ ಪ್ರಭಾತ ಪೇರಿಯೊಂದಿಗೆ ಧ್ವಜದ ಮೆರವಣಿಗೆ ನಡೆಯಲಿದೆ. ನಂತರ ಜಾತ್ರೋತ್ಸವ ನಿಮಿತ್ತ ನಿತ್ಯ ಅನ್ನ ಪ್ರಸಾದ ಸೇವೆ ನಡೆಯಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net