ಮಳೆಗಾಗಿ ಹಾಲಹಳ್ಳಿ ಗ್ರಾಮಸ್ಥರಿಂದ ಪಾದಯಾತ್ರೆ

ಹುಲಸೂರು  ತಾಲೂಕಿನ ಹಾಲಹಳ್ಳಿ ಗ್ರಾಮಸ್ಥರು ಮಳೆಗಾಗಿ ಶನಿವಾರ ವಿವಿಧ ಗ್ರಾಮಗಳ ಜೈ ಹನುಮಾನ ದೇವಸ್ಥಾನಕ್ಕೆ ಪಾದಯಾತ್ರೆ ಮೂಲಕ ತೆರಳುತ್ತಿರುವುದು.
ಹುಲಸೂರು ತಾಲೂಕಿನ ಹಾಲಹಳ್ಳಿ ಗ್ರಾಮಸ್ಥರು ಮಳೆಗಾಗಿ ಶನಿವಾರ ವಿವಿಧ ಗ್ರಾಮಗಳ ಜೈ ಹನುಮಾನ ದೇವಸ್ಥಾನಕ್ಕೆ ಪಾದಯಾತ್ರೆ ಮೂಲಕ ತೆರಳುತ್ತಿರುವುದು.
Published on
ಹುಲಸೂರು: ಮಳೆಗಾಲ ಪ್ರಾರಂಭವಾಗಿ ಎರಡು ತಿಂಗಳು ಕಳೆದರು ಸಮರ್ಪಕ ಮಳೆ ಇಲ್ಲದೆ ರೈತಾಪಿ ವರ್ಗ ಸಂಕಷ್ಟದಲ್ಲಿದ್ದು, ಬಿತ್ತನೆ ಮಾಡಿರುವ ಬೆಳೆ ಒಣಗುತ್ತಿರುವುದನ್ನು ಅರಿತು ತಾಲೂಕಿನ ಹಾಲಹಳ್ಳಿ ಗ್ರಾಮದ ಹಿಂದೂ-ಮುಸ್ಲಿಂ ಸೇರಿ ಎಲ್ಲ ಧರ್ಮದ ಮಹಿಳೆಯರು, ಮಕ್ಕಳು, ಯುವಕರು ಶನಿವಾರ ಸುತ್ತಲಿನ ಕೇಸರ ಜವಳಗಾ, ಲಾದಾ, ಕುಂಟೇಗಾವ, ರಾಜಪ್ಪ ಗೌಂಡಗಾವ, ಮೋರಂಬಿ, ಹೊನ್ನಳಿ, ತೊಗಲೂರ ಸೇರಿ ಸುಮಾರು 11 ಗ್ರಾಮಗಳಿಗೆ ಪಾದಯಾತ್ರೆ ಮೂಲಕ ಜೈ ಹನುಮಾನ್​ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಪಾದಯಾತ್ರೆಯಲ್ಲಿ ಹರಿ ಭಜನ, ಶಿವ ಭಜನ, ಸೇರಿ ಭಕ್ತಿ ಗೀತೆಗಳನ್ನು ಹಾಡುತ್ತಾ ತೆರಳುತ್ತಿರುವುದು ಕಂಡುಬಂತು. ಮಹಿಳೆಯರು ಒಂದೇ ಸಮವಸ್ತ್ರದಲ್ಲಿ ಭಕ್ತಿ ಗೀತೆಗಳಿಗೆ ಹೆಜ್ಜೆ ಹಾಕಿದರೆ, ಯುವಕರು ಜೈಘೋಷ ಹಾಕುತ್ತಾ ಎಲ್ಲರನ್ನು ಹುರಿದುಂಬಿಸಿದ್ದರು. ತಿಪ್ಪಣ್ಣ ಲದ್ದೆ, ಗುಂಡೇರಾವ ದೇವುಕರೆ, ರಾಜಪ್ಪ ಸ್ವಾಮಿ, ಜಗನ್ನಾಥ ಪಾಟೀಲ, ವೈಜನಾಥ ಶಾವು, ಬಂಡೆಪ್ಪ, ಓಂಕಾರ ಕುಂಬಾರ, ಪ್ರಭಾವತಿ ಬಿರಾದಾರ, ಮಾಣಿಕಬಾಯಿ ಲದ್ದೆ, ಜಯಶ್ರೀ ಪಾಟೀಲ್​, ಶ್ರೀದೇವಿ ಪಾಟೀಲ್​, ಪುಷ್ಪಾವತಿ ಲದ್ದೆ, ರತ್ನಮ್ಮ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net