ಚಾಲಕರ ಲೈಸನ್ಸ್​ ಪರಿಶೀಲನೆ ಮಾಲೀಕರ ಜವಾಬ್ದಾರಿ| Highcourt

High court
High court
Published on

ಪ್ರಮುಖ ಮುಖ್ಯಾಂಶಗಳು

  • ಅಪಘಾತ ಪರಿಹಾರಕ್ಕೆ ಚಾಲನಾ ಪರವಾನಿಗೆ ಅಗತ್ಯ
ಬೆಂಗಳೂರು: ಚಾಲಕರು ಚಾಲನಾ ಪರವಾನಿಗೆ ಹೊಂದಿರುವುದನ್ನು ವಾಹನ ಮಾಲೀಕರು ಖಚಿತಪಡಿಸಿಕೊಳ್ಳಬೇಕು. ಒಂದು ವೇಳೆ ಅಪಘಾತದ ವೇಳೆ ಚಾಲಕನ ಬಳಿ ಚಾಲ್ತಿಯಲ್ಲಿರುವ ಪರವಾನಿಗೆ ಇಲ್ಲದಿದ್ದರೆ, ವಿಮಾ ಕಂಪನಿಗಳು ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್​ ಮಹತ್ವದ ತೀರ್ಪು ನೀಡಿದೆ.
ಅಪಘಾತಕ್ಕೀಡಾಗಿ ಮೃತಪಟ್ಟ ಚಾಲಕನ ಕುಟುಂಬಕ್ಕೆ 5.38 ಲಕ್ಷ ರೂ ಪರಿಹಾರ ಪಾವತಿಸುವಂತೆ ಕಾರ್ಮಿಕ ಪರಿಹಾರ ಆಯುಕ್ತರು ನೀಡಿದ್ದ ಆದೇಶ ಪ್ರಶ್ನಿಸಿ ಮಂಗಳೂರು ತಾಲೂಕಿನ ತೆಂಕುಳಿಪಾಡಿಯ ಬಾಲ್ಮಿ ಪ್ರೈಮರಿ ಶಾಲೆ ಸಲ್ಲಿಸಿದ್ದ ಅರ್ಜಿ ವಜಾ ಮಾಡಿ ಹೈಕೋರ್ಟ್​ ಈ ಆದೇಶ ನೀಡಿದೆ. 
2008ರ ಆ.14ರಂದು ಬಾಲ್ಮಿ ಶಾಲೆಯ ಬಸ್​ ಚಾಲಕ ಬದ್ರುದ್ದೀನ್​ ಎಂಬುವವರು ಉಳಾಯಿಬೆಟ್ಟು ಗ್ರಾಮದಿಂದ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದರು. ಭಾರಿ ಮಳೆಯ ಕಾರಣ ನೆರೆ ಬಂದು ಬಸ್​ ಲ್ಗುಣಿ ನದಿಗೆ ಉರುಳಿತ್ತು. ಈ ಅಪಘಾತದಲ್ಲಿ ಬದ್ರುದ್ದೀನ್​ ಮೃತಪಟ್ಟಿದ್ದರು. ಈ ಪ್ರಕರಣದಲ್ಲಿ ಮೃತನ ಕುಟುಂಬಕ್ಕೆ ಪರಿಹಾರ ನೀಡಲು ಶಾಲೆಗೆ ಕಾರ್ಮಿಕ ಆಯುಕ್ತರು ಸೂಚಿಸಿದ್ದರು. ಅಪಘಾತ ನಡೆಯುವ ಎರಡು ತಿಂಗಳ ಮೊದಲೇ ಚಾಲಕನ ಪರವಾನಿಗೆ ಅವಧಿ ಮುಗಿದಿದ್ದ ಕಾರಣ ವಿಮಾ ಕಂಪನಿ ಪರಿಹಾರ ನೀಡಲು ಸಾಧ್ಯವಿಲ್ಲ. ಆದ್ದರಿಂದ ಶಾಲಾ ಆಡಳಿತ ಮಂಡಳಿಯೇ ಪರಿಹಾರ ಪಾವತಿಸಬೇಕು ಎಂದು ನಿರ್ದೇಶನ ನೀಡಲಾಗಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿತ್ತು.   

ಉದ್ಯೋಗದಾತರ ಕರ್ತವ್ಯ:

ಮೇಲ್ಮನವಿ ವಿಚಾರಣೆ ನಡೆಸಿದ ಕೆ. ಮನ್ಮಥ ರಾವ್​ ಅವರಿದ್ದ ಏಕಸದಸ್ಯ ನ್ಯಾಯಪೀಠ ಅರ್ಜಿಯನ್ನು ತಿರಸ್ಕರಿಸಿದೆ. ಚಾಲಕನ ಬಳಿ ಪರವಾನಿಗೆ ಇತ್ತು ಎಂಬುದಕ್ಕೆ ಯಾವುದೇ ದಾಖಲೆಗಳಿಲ್ಲ. ಚಾಲಕರ ಪರವಾನಿಗೆಯನ್ನು ಪರಿಶೀಲಿಸುವುದು ಉದ್ಯೋಗದಾತರ ಕರ್ತವ್ಯ. ಇಲ್ಲವಾದರೆ ಅದು ವಿಮಾ ಪಾಲಿಸಿಯ ಷರತ್ತಿನ ಉಲ್ಲಂನೆಯಾಗುತ್ತದೆ ಎಂದು ಪ್ರಕರಣವೊಂದರಲ್ಲಿ ಸುಪ್ರೀಂ ಕೋರ್ಟ್​ ಹೇಳಿದೆ. ಆದ್ದರಿಂದ ಈ ಪ್ರಕರಣದಲ್ಲಿ ವಿಮಾ ಕಂಪನಿಯನ್ನು ಹೊಣೆಗಾರರನ್ನಾಗಿ ಮಾಡಲು ಸಾದ್ಯವಿಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net