ಮೇಳದಲ್ಲಿ ಒಟ್ಟು 160 ಕ್ಕೂ ಹೆಚ್ಚು ಶ್ವಾನಗಳು ಪಾಲ್ಗೊಂಡು ನೋಡುಗರ ಕಣ್ಮನ ಸೆಳೆದವು. ಅಚ್ಚರಿಯೆಂದರೆ ಇಲ್ಲಿ 50 ಕ್ಕೂ ಅಧಿಕ ಪ್ರಭೇದಗಳಿದ್ದವು. ಜರ್ಮನ್ ಶೆಪರ್ಡ್, ಬೆಲ್ಜಿಯನ್ ಮೆಲಿನೊವ, ಲ್ಯಾಬ್ರಡಾರ್ ರಿಟ್ರೀವರ್, ಡಾಬರ್‌ಮನ್, ರಾಟ್‌ವ್ಹೀಲರ್, ಕ್ಯಾರವಾನ್ ಹೌಂಡ್, ಜಾಕ್ ರಸೆಲ್ ಟೆರಿಯರ್, ಪಗ್, ಪಮೇರಿಯನ್, ಗೋಲ್ಡನ್ ರಿಟ್ರೀವರ್ ಹಾಗೂ ಆಕರ್ಷಕ ಶಿಡ್ಜ್ ತಳಿಗಳು ಪ್ರದರ್ಶನಕ್ಕೆ ಮೆರುಗು ನೀಡಿದವು.