ಪ್ರತಿ ವರ್ಷ ಬೇಸಿಗೆಯಲ್ಲಿ ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ತಲೆದೋರುತ್ತಿದ್ದು, ನಾರಾಯಣಪುರ ಜಲಾಶಯದಿಂದ ಶಹಾಪುರ, ನಗನೂರ ಮಾರ್ಗವಾಗಿ ಹರಿಬಿಡುವ ನೀರು ನಮ್ಮಲ್ಲಿ ಬರುವಷ್ಟಿಗೆ ಹೆಚ್ಚಿನ ನೀರು ಭೂಮಿ ಪಾಲಾಗುತ್ತಿದೆ. ಇದರ ಬದಲಾಗಿ ನಾರಾಯಣಪುರದಿಂದ ನೇರವಾಗಿ ಸರಡಗಿಗೆ ನೀರು ಹರಿಸಿದಲ್ಲಿ ಹೆಚ್ಚಿನ ನೀರು ನಮಗೆ ಸಿಗಲಿದೆ. ಇದಕ್ಕಾಗಿ 1,850 ಕೋಟಿ ರೂ. ಮೊತ್ತದ ಡಿ.ಪಿ.ಆರ್ ಸಿದ್ದಪಡಿಸಿದ್ದು, ಅಂದುಕೊಂಡಂತೆ ಯೋಜನೆ ಅನುಷ್ಟಾನಕ್ಕೆ ಬಂದಲ್ಲಿ ಮುಂದಿನ ದಿನದಲ್ಲಿ ನಗರಕ್ಕೆ ಕುಡಿಯುವ ನೀರಿಗೆ ಶಾಶ್ವತ ಪರಿಹಾರ ದೊರೆಯಲಿದೆ ಎಂದರು.